Advertisement

“ಬೀಡ್‌ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ತರಲಿ”

12:50 PM Jun 19, 2021 | Team Udayavani |

ಬೀಡ್‌: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದರೆ, ಮರಾಠವಾಡದ ಬೀಡ್‌ ಜಿÇÉೆಯಲ್ಲಿ ಕೊರೊನಾ ರೋಗಿಗಳ ಬೆಳವಣಿಗೆಯ ದರವು ಕಳವಳವನ್ನು ಹೆಚ್ಚಿಸಿದೆ. ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರಕಾರವು ಪ್ರಯತ್ನಿಸುತ್ತಿದ್ದು, ಜಿಲ್ಲೆಯ ಆರೋಗ್ಯ ವಿಭಾಗ ಸಹಿತ ಎಲ್ಲ ಏಜೆನ್ಸಿಗಳ ಸಹಾಯದಿಂದ ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಡಿಸಿಎಂ ಅಜಿತ್‌ ಪವಾರ್‌ ಹೇಳಿದ್ದಾರೆ.

Advertisement

ಬೀಡ್‌ ಜಿಲ್ಲೆಯಲ್ಲಿ ಕೋವಿಡ್‌ -19  ಏಕಾಏಕಿ ಹೆಚ್ಚಳ ಮತ್ತು ಜಿಲ್ಲಾ ಮಟ್ಟದ ಖಾರಿಫ್‌ ಋತುವಿನ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌, ಮರಾಠವಾಡದ ಇತರ ಜಿÇÉೆಗಳಿಗಿಂತ  ಬೀಡ್‌ನ‌ಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ರೋಗ್ಯ ಸಚಿವ ರಾಜೇಶ್‌ ಟೋàಪೆ ಮಾತನಾಡಿ, ಕೊರೊನಾವನ್ನು ನಿಯಂತ್ರಿಸಲು ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಪ್ರಯತ್ನಗಳು ಯಶಸ್ವಿಯಾಗಿವೆ. ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವಾಗ ವ್ಯಾಕ್ಸಿನೇಶನ್‌ ವೇಗಗೊಳಿಸಲು ಸಲಹೆಗಳನ್ನು ನೀಡಲಾಗಿದೆ. ಬೀಡ್‌ ಜಿÇÉಾ ಆರೋಗ್ಯ ಇಲಾಖೆಯು  ಎರಡೂ ಅಲೆಗಳಲ್ಲಿ  ಕೆಲಸ ಮಾಡಿತು, ಜಿಲ್ಲೆಯ ಸಂಪರ್ಕ ಪತ್ತೆಹಚ್ಚುವಿಕೆ ಪ್ರಮಾಣ ಇಂದಿಗೂ ಇಲಾಖೆಯಲ್ಲಿ ಅಗ್ರಸ್ಥಾನದಲ್ಲಿದೆ. ಜಿಲ್ಲಾಡಳಿತವು ಕೊರೊನಾದ ಮೂರನೇ ಅಲೆಯಿಂದ ಉಂಟಾಗುವ ಅಪಾಯವನ್ನು ಗುರುತಿಸಿ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇಡೀ 3,000 ಮೆಟ್ರಿಕ್‌ ಟನ್‌ ಆಮ್ಲಜನಕ ಉತ್ಪಾದನೆ ಮಾಡಲು ಸರಕಾರ ಪ್ರೋತ್ಸಾಹ ನೀಡಿದೆ. ದೊಡ್ಡ ಖಾಸಗಿ ಆಸ್ಪತ್ರೆಗಳು ತಮ್ಮ ಆಮ್ಲಜನಕ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಸೂಚಿಸಲಾಗಿದೆ. ಕೊರೊನಾದ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿರುವ ರೋಗಿಗಳು ಮರುಕಳಿಸದಂತೆ ತಡೆಯಲು ರಾಜ್ಯ ಸರಕಾರ ತತ್‌ಕ್ಷಣ ಕ್ರಮಗಳನ್ನು ಕೈಗೊಂಡಿದೆ. ದ್ರವ ಆಮ್ಲಜನಕ ನಿಕ್ಷೇಪಗಳನ್ನು ಸುರಕ್ಷಿತವಾಗಿರಿಸಲು ಜಿÇÉೆಯ ಪ್ರತಿ ತಾಲೂಕಿನಲ್ಲಿ 14 ಕೆಎಲ್‌ ಸಾಮರ್ಥ್ಯವಿರುವ ದ್ರವ ಆಮ್ಲಜನಕ ಟ್ಯಾಂಕ್‌ ಲಭ್ಯಗೊಳಿಸಬೇಕು ಎಂದು ಟೋಪೆ ಹೇಳಿದ್ದಾರೆ.

ಸಭೆಯಲ್ಲಿ  ಸಾಮಾಜಿಕ ನ್ಯಾಯ ಮತ್ತು ವಿಶೇಷ ಸಹಾಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಧನಂಜಯ್‌ ಮುಂಢೆ ಮತ್ತು ಎಲ್ಲ ಇಲಾಖೆಗಳು ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next