Advertisement
ಪಟ್ಟಣದಲ್ಲಿ ನಡೆದ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಂಡ್ಯ ಲೋಕಸಭಾ ಚುನಾವಣೆ ಪ್ರಯುಕ್ತ ಏರ್ಪಡಿಸಿದ್ದ ಸ್ತ್ರೀಶಕ್ತಿ ಸಂಘದ ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ತರದೇ ಹೋಗಿದ್ದರೆ ಮಹಿಳೆಯರು ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ, ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ದೇವೇಗೌಡರನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ ಎಂದರು.
Related Articles
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಅಂಬರೀಶ್ ಆರೋಗ್ಯ ಹಾಗೂ ಅವರು ರಾಜಕೀಯವಾಗಿ ವಿಫಲರಾಗಲು ಸುಮಲತಾ ಅವರೇ ಕಾರಣ. ಜಿಲ್ಲೆಯ ಜನರ ಮೇಲೆ ಈಗಿರುವ ಕನಿಕರ ಹಾಗೂ ಪ್ರೀತಿ ಅಂಬರೀಶ್ ಬದುಕಿದ್ದಾಗ ಕೇವಲ ಶೇ.5ರಷ್ಟು ಪ್ರೀತಿ, ಕನಿಕರಇದ್ದಿದ್ದರೆ ಅಂಬರೀಶ್ ಇನ್ನು ಬಹಳ ಕಾಲ ಬದುಕಿ ಉಳಿಯುತ್ತಿದ್ದರು. ಜೊತೆಗೆ ಜಿಲ್ಲೆಯ ಜನರು ನಿಮ್ಮನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು ಎಂದು ಸುಮಲತಾ ವಿರುದ್ಧ ಹರಿಹಾಯ್ದರು.
Advertisement
ಪಕ್ಷೇತರ ಅಭ್ಯರ್ಥಿ ಸುಮಲತಾ ಈಗಅತಿಯಾದ ದುಃಖದಿಂದ ಚುನಾವಣಾ ಪ್ರಚಾರ ನಡೆಸಿ ಮಹಿಳೆಯರ ವೊಟು ನಮಗೇ ಎನ್ನುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ಅಂಬರೀಶ್ ಹಾಗೂ ಮಂಡ್ಯ ಜಿಲ್ಲೆಯ ಸಂಬಂಧವಿದೆ. ಆದರೆ ಜಿಲ್ಲೆಯ ಹೆಣ್ಣುಮಕ್ಕಳು ಅವರ ಮನೆ ಬಾಗಿಲಿಗೆ ಹೋದಾಗ, ಇವರು ನಮ್ಮ ಜಿಲ್ಲೆಯವರು, ನಮ್ಮವರು ಎಂದು ಎಷ್ಟು ಮಹಿಳೆಯರಿಗೆ ನೀರು ಕೊಟ್ಟು ಸಂತೈಸಿದ್ದಾರೆ ಎಂದು ಪ್ರಶ್ನಿಸಿದರು. ಜಿಲ್ಲೆ ಹೆಣ್ಣುಮಕ್ಕಳು ಅಂಬರೀಶ್‌ರನ್ನು ನೋಡಲು ಅವರ ಮನೆ ಬಾಗಿಲಿಗೆ ಹೋದಾಗ ಸುಮಲತಾ ಸೌಜನ್ಯಕ್ಕಾದರೂ ಅವರನ್ನು ಮಾತನಾಡಿಸಿ ಕಳುಹಿಸುವ ಕನಿಷ್ಠ ನಡವಳಿಕೆ ನಿಮಗೆ ಇರಲಿಲ್ಲ. ಆದರೆ ಈಗ ಜಿಲ್ಲೆಯ ಮಹಿಳೆಯರ ವೋಟು ನಮಗೆ ಬೇಕು ಅಂತಾ ಕೇಳುತ್ತಿದ್ದಾರೆ. ಇದು ಮತದಾರರನ್ನು ದಾರಿ ತಪ್ಪಿಸುವ ಕೆಲಸ. ಇದಕ್ಕೆ ಜಿಲ್ಲೆಯ ಮತದಾರರು ಕಿವಿಗೊಡಬಾರದು. ಕಷ್ಟ ಸುಖಗಳಿಗೆ ಸ್ಪಂದಿಸುವ ಪ್ರಾಮಾಣಿಕ ವ್ಯಕ್ತಿ ನಿಖೀಲ್ ಗೆ ಮತ ಹಾಕುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆಸಹಕರಿಸಬೇಕು ಎಂದು ಮನವಿ ಮಾಡಿದರು.