“ರಾಮಾರ್ಜುನ’ ಸಿನಿಮಾದ ನಂತರ ನಟ ಅನೀಶ್ ತೇಜೇಶ್ವರ್, ನಟಿಸಿರುವ ಮತ್ತೂಂದು ಚಿತ್ರ “ಬೆಂಕಿ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಆ್ಯಕ್ಷನ್, ಸೆಂಟಿಮೆಂಟ್ ಡ್ರಾಮಾ ಎಂಬುದನ್ನು ಸಾಬೀತು ಮಾಡಿದೆ.
ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುವ ಅನೀಶ್, “ಇದು ನಾಯಕ ನಟನಾಗಿ ನನ್ನ ಹತ್ತನೇ ಸಿನಿಮಾ. ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳೆಲ್ಲ ಸಿಟಿ ಹಿನ್ನೆಲೆಯಲ್ಲಿ ಇದ್ದವು. ಆದ್ರೆ ಇದು ಕಂಪ್ಲೀಟ್ ವಿಲೇಜ್ ಹಿನ್ನೆಲೆಯ ಕಥೆ ಇರುವ ಸಿನಿಮಾ. ಮೊದಲ ಬಾರಿಗೆ ಇಂಥದ್ದೊಂದು ಸಬ್ಜೆಕ್ಟ್‌ನಲ್ಲಿ ಹಳ್ಳಿ ಹುಡುಗನ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನಗೂ ಇದು ನಟನಾಗಿ ಹೊಸಥರದ ಪಾತ್ರವಿರುವ ಸಿನಿಮಾ. ಹೊಸಥರದ ಬಾಡಿ ಲಾಂಗ್ವೇಜ್ ಇದೆ. ಹಣೆಗೆ ಬೊಟ್ಟು ಇಟ್ಟುಕೊಂಡು, ಕಾಲಿಗೆ ಚಪ್ಪಲಿ ಹಾಕಿಕೊಂಡು ಸಾದಾಸೀದಾ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಇದರಲ್ಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್ ಎಲ್ಲವೂ ಇದೆ. ಮುಖ್ಯವಾಗಿ ಅಣ್ಣ-ತಂಗಿಯ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಸಿನಿಮಾದ ಸಬ್ಜೆಕ್ಟ್ ಗೆ ಮ್ಯಾಚ್ ಆಗುತ್ತದೆ ಎಂಬ ಕಾರಣಕ್ಕೆ “ಬೆಂಕಿ’ ಅಂಥ ಟೈಟಲ್ ಇಟ್ಟಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ.
ಇದನ್ನೂ ಓದಿ:‘ಚಾಂಪಿಯನ್’ ಓಟ ಶುರು; ಹೀರೋ ಬರ್ತ್‌ಡೇಗೆ ಇಂಟ್ರೋಡಕ್ಷನ್ ಸಾಂಗ್
ಈ ಚಿತ್ರವನ್ನು ಶಾನ್ ನಿರ್ದೇಶಿಸಿದ್ದಾರೆ. ಇನ್ನು “ಬೆಂಕಿ’ ಚಿತ್ರದಲ್ಲಿ ಅನೀಶ್‌ಗೆ ಜೋಡಿಯಾಗಿ “ರೈಡರ್’ ಸಿನಿಮಾ ಖ್ಯಾತಿಯ ಸಂಪದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೃತಿ ಪಾಟೀಲ್, ಅಚ್ಯುತ್ ಕುಮಾರ್, ಸಂಪತ್, ಉಗ್ರಂ ಮಂಜು, ಹರಿಣಿ, ಸ್ವಾತಿ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ. “ವಿಂಕ್ ವಿಷಲ್ ಪ್ರೊಡಕ್ಷನ್’ನಡಿ ಅನೀಶ್ ಚಿತ್ರಕ್ಕೆ ತಾವೇ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.