Advertisement

ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಮತ್ತೊಂದು ಕಂಚು

12:14 AM Jul 20, 2022 | Team Udayavani |

ಚಾಂಗ್ವನ್‌: ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಮತ್ತೊಂದು ಪದಕ ಜಯಿಸಿದೆ. ಯುವ ಶೂಟರ್‌ಗಳಾದ ಅನೀಷ್‌ ಭನ್ವಾಲ ಮತ್ತು ರಿದಂ ಸಂಗ್ವಾನ್‌ 25 ಮೀ. ರ್ಯಾಪಿಡ್‌ ಫೈರ್‌ ಮಿಕ್ಸೆಡ್‌ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿಗೆ ಗುರಿ ಇರಿಸಿದರು.

Advertisement

ಭಾರತದ ಜೋಡಿ ಜೆಕ್‌ ಗಣರಾಜ್ಯದ ಅನ್ನ ಡೆಡೋವ-ಮಾರ್ಟಿನ್‌ ಪೋಧ್ರಸ್ಕಿ ವಿರುದ್ಧ 16-12 ಅಂತರದ ಮೇಲುಗೈ ಸಾಧಿಸಿತು.

ಇದು ಅನೀಷ್‌ ಭನ್ವಾಲ-ರಿದಂ ಸಂಗ್ವಾನ್‌ ಜೋಡಿಗೆ ಐಎಸ್‌ಎಸ್‌ಎಫ್ ಶೂಟಿಂಗ್‌ ವರ್ಲ್ಡ್ ಕಪ್‌ನಲ್ಲಿ ಒಲಿದ ಎರಡನೇ ಪದಕ. ಕಳೆದ ಮಾರ್ಚ್‌ನಲ್ಲಿ ನಡೆದ ಕೈರೋ ವರ್ಲ್ಡ್ ಕಪ್‌ ನ 25 ಮೀ. ರ್ಯಾಪಿಡ್‌ ಫೈರ್‌ ಮಿಕ್ಸೆಡ್‌ ಸ್ಪರ್ಧೆಯಲ್ಲಿ ಇವರು ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದ್ದರು.

ಒಟ್ಟು 14 ಪದಕಗಳೊಂದಿಗೆ (5 ಚಿನ್ನ, 5 ಬೆಳ್ಳಿ, 4 ಕಂಚು) ಭಾರತ ಅಗ್ರಸ್ಥಾನ ಕಾಯ್ದುಕೊಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next