Advertisement

ಕೊಟ್ಟಿಗೆ ಕಟ್ಟಿಕೊಟ್ಟ ಬಂಗಾರದ ಬದುಕು

03:45 AM Jan 30, 2017 | Harsha Rao |

ತಂದೆ ತಾಯಿಯ ಒತ್ತಾಯದ ಮೇರೆಗೆ ಹೇಗೋ 10ನೇ ತರಗತಿ ವ್ಯಾಸಾಂಗ ಮುಗಿಸಿ,ನಂತರದ ಜೀವನ ಹೇಗೆ ವಿದ್ಯಾದೇವತೆ ಮಾತ್ರ ನಮ್ಮೆಡೆಗೆ ಸುಳಿಯುತ್ತಿಲ್ಲಾ ಎಂದು ಕೊರಗುವ ಅನೇಕ ಯುವಕರು ಇಂದು ಬಹುಸಂಖ್ಯೆಯಲ್ಲಿ ಸಿಗುವುದು ಸರ್ವೆ ಸಾಮಾನ್ಯ.ಇಂತಹ ಪರಿಸ್ಥಿತಿಯಲ್ಲಿ ಧನಾ ಕಾಯಾಕ ಹೊಗ್‌ ಎಂಬಂತ ಅನೇಕ ಪದಗಳು ಕೆಳುವದು ನಮ್ಮ ಹಳ್ಳಿಗಳಲ್ಲಿ ಬಹುಪಾಲು ಕಾಣುತ್ತೇವೆ. ಹೆತ್ತವರ ಮತ್ತು ಆಡಿಕೊಳ್ಳುವ ಜನರ ಮಾತಿಗೆ ಪ್ರತ್ಯುತ್ತರ ಎನ್ನುವ ರೀತಿಯಲ್ಲಿ ಸಾಧಿಸಿ ತೊರಿಸಿವ ಛಲ ಹೊಂದಿದ ಇಬ್ಬರು ಸಹೋದರು ತಾವು ದ್ಯೆàಯಲ್ಲಿ ಂದೆ ಬಿದ್ದರು ಜಿವನದಲ್ಲಿ ಯಾರಿಗೂ ಂದೆ ಬಿಳುವದಿಲ್ಲಾ. ಎಂಬಂತೆ ಸಾಧೀಸಿ ತೊರಿಸಲು ಹೈನುಗಾರಿಕೆ ದಾರಿ ಕಂಡುಕೊಂಡವರು 

Advertisement

ಧಾರವಾಡ ತಾಲೂಕಿನ ನಿಗಧಿ(ಭೇನಕನಕಟ್ಟಿ)ಗ್ರಾಮದ ಶಿವಶಂಕ್ರಯ್ನಾ ಚಂ ಯರಗಂಬಳಿಮಠ ಮತ್ತು ಮಂಜಯ್ನಾ ಚಂ ಯರಗಂಬಳಿಮಠ ಸಹೋದರರು. ಇಂದು ಇವರು ಮಾಡಿದ ಸಾಧನೆ ಹೈನುಗಾರಿಕೆಯ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಸಹೋದರರು ವಿಧ್ಯೆಯಲ್ಲಿ ನೆಲೆ ಕಾಣದೆ ತಂದೆಯ ಮಾರ್ಗದರ್ಶನದಲ್ಲಿ ಕೃಷಿಗೆ ತೊಡಗಿಕೊಂಡವರು. ತಮ್ಮ ಅಲ್ಪ ಜಮೀನಿನಲ್ಲಿ ಅದು ಈ ಬರಗಾಲದ ಸಮಯದಲ್ಲಿ ಕೇವಲ ಕೃಷಿಯಲ್ಲಿ ಜೀವನ ಕಷ್ಟಸಾಧ್ಯ ಎಂದು ಕೃಷಿಯ ಜೊತೆಗೆ ಹೈನುಗಾರಿಕೆ ಆರಂಭಿಸಿದರು. ಮೊದಲು ಒಂದು ಜವಾರಿ ಹಸುನಿಂದ ಶುರುಮಾಡಿದ್ದು. ಮೊದಲಿಗೆ ಇವರು ಶಿರಸಿ ಮೂಲದ ಒಂದು ಧೇವಣಿ ತಳಿಯ ಹಸು ಅದು.  ಇವತ್ತು  ಇವರ ಡೈರಿಯಲ್ಲಿ ಪ್ಯೂರ್‌ ಹೆಚ್‌ಎಫ್, ಧೇವಣೀ, ರೇಡ್‌ ಎನ್‌ ತಳಿಯ ಹಸುಗಳು ಮತ್ತು ಶೃತಿ, ಗುಜರಾತಿ ತಳಿಯ ಎಮ್ಮೆಗಳನ್ನು ಸಾಕಿದ್ದಾರೆ. ಹೆಚ್ಚಾ ಕಡಿಮೆ ಇವರ ಹತ್ತಿರ  15 ನಾನಾ ತಳಿಯ ಹಸುಗಳಿವೆ. 

 ಈ ಕೆಲಸವನ್ನು ಶೃದ್ದೆಯಿಂದ ನೀಭಾಯಿಸುವ ಈ ಸಹೋದರರು ಪ್ರತಿದಿನ ಕೆಎಮ್‌ಎಫ್ ಹಾಲು ಒಕ್ಕೂಟಕ್ಕೆ 80 ರಿಂದ 100 ಲಿಟರ್‌ ಹಾಲು ಪೂರೈಸುತ್ತಾರೆ. ಇವರು ಎಷ್ಟೋ ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ. 

ಆಹಾರ ವಿಧಾನ
   ಇವರು ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳನ್ನು ಬಳಸದೆ ಕೇವಲ ತಮ್ಮ ಅಲ್ಪ ಜಮೀನಿನಲ್ಲಿ ಬೆಳೆದ ನೇಪಿಯರ್‌, ಗಿನ್ನಿ ಗ್ರಾಸ್‌, ಫಾರ್ಮ್ ಕಡ್ಡಿಯ ಹುಲ್ಲು ಮತ್ತು ಬಾರ್ಲಿ, ಹುರುಳಿ ನೂಚ್ಚು, ಸೋಯಾಬಿನ್‌, ಹತ್ತಿಕಾಳು ಶೆಂಗಾ, ಭತ್ತದ ತೌಡು, ಗೋದಿ ಹಿಟ್ಟುಗಳನ್ನು ಬಳಸಿ ಅಧಿಕ ಹಾಲು ಉತ್ಪಾದನೆ ಮಾಡುತ್ತಾರೆ.  

   ಇಂತಹ ಬರಗಾಲದ ಸಮಯದಲ್ಲಿ ಸಾಮಾನ್ಯವಾಗಿ ಮೇವಿನ ಸಮಸ್ಯೆ ಕಾಡುವುದರಿಂದ ಇವರು ತಮ್ಮ 2 ಎಕರೆ ಹೊಲದಲ್ಲಿ ಕೊಳವೆ ಬಾವಿ ನೀರಿನ ಸಹಾಯದಿಂದ ನೇಪಿಯರ್‌, ಗಿನ್ನಿಗ್ರಾಸ್‌, ಪಾರ್ಮ್ ಹುಲ್ಲು ಬೇಳೆದಿದ್ದಾರೆ.  ಇದರಿಂದ ವರ್ಷಪೂರ್ತಿ ಯಾವುದೇ ರೀತಿಯ ಮೇವಿನ ಸಮಸ್ಯೆ ಕಂಡುಬರುವುದಿಲ್ಲ.  ಈ ಬೆಳೆಗೆ ಸಗಣಿ ಗೊಬ್ಬರ, ಎರೆ ಹುಳು ಗೊಬ್ಬರ ಬಳಸುತ್ತಾರೆ.

Advertisement

ಎರೆ ಹುಳು ಗೊಬ್ಬರ ತಯಾರಿಕೆ
      ದನಗಳ ಸಗಣಿ ಮತ್ತು ಮೂತ್ರ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವುದರಿಂದ ಒಂದು ಸಣ್ಣ ಟ್ಯಾಂಕ್‌ ಆಕಾರದ ತೊಟ್ಟಿಯನ್ನು ನಿರ್ಮಾಣ ಮಾಡಿ ಅದರಲ್ಲಿ ಎಲ್ಲಾ ತ್ಯಾಜ್ಯವನ್ನು ಒಂದೆಡೆ ಸೆರಿಸುತ್ತಾರೆ. ಆಮೇಲೆ  ಆ ತೋಟ್ಟಿಯಲ್ಲಿ ಎರೆಹುಳುಗಳನ್ನು ಬಿಡುವುದರಿಂದ ಗುಣಮಟ್ಟದ ಎರೆಹುಳು ಗೊಬ್ಬರ ತಯಾರಾಗುತ್ತದೆ. ಈ ಗೊಬ್ಬರವನ್ನು ಬಳಸಿ ಒಳ್ಳೆಯ ಹುಲ್ಲಿನ ಬೆಳೆ ತೆಗೆಯುವುದರಿಂದ ಹಸುವಿನ ಹಾಲು ಕೂಡ ಗುಣಮಟ್ಟದಿಂದ ಕೂಡಿದೆ.  

ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ಈ ಹೈನುಗಾರಿಕೆ ಆರಂಭಿಸಿದೆವು ಆದರೆ ನಾವು ಇವತ್ತು ಬೇರೆಯವರಿಗೆ ಕೇಲಸ ನಿಡುವ ರಿತಿಯಲ್ಲಿ ಬೇಳೆಯುತ್ತೆವೆ ಎಂದು ಕೊಂಡಿರಲಿಲ್ಲಾ ಆ ಗೋಮಾತೆಯ ಆಶಿರ್ವಾದ ನಮ್ಮ ಮೇಲಿರುವದರಿಂದ ನಾವು ಇವತ್ತು ನೆಮ್ಮದಿಯ ಜಿವನ ಸಾಗಿಸುವಂತಾಗಿದೆ.
ಶೀವಶಂಕ್ರಯ್ಯ ಯರಗಂಬಳಿಮಠ  8095559645
                         
– ಈರಯ್ಯ ಓರೆಮಠ

Advertisement

Udayavani is now on Telegram. Click here to join our channel and stay updated with the latest news.

Next