Advertisement

ಜಿಮ್ ಲೇಕರ್, ಕುಂಬ್ಳೆ ದಾಖಲೆ ಸರಿಗಟ್ಟಿದ ಮುಂಬೈ ಮೂಲದ ಅಜಾಜ್ ಪಟೇಲ್: ಕುಂಬ್ಳೆ ಪ್ರಶಂಸೆ

02:00 PM Dec 04, 2021 | Team Udayavani |

ಮುಂಬೈ: ನ್ಯೂಜಿಲ್ಯಾಂಡ್ ನ ಸ್ಪಿನ್ನರ್ ಅಜಾಜ್ ಪಟೇಲ್ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಒಂದು ಇನ್ನಿಂಗ್ಸ್ ನ ಎಲ್ಲಾ ಹತ್ತೂ ವಿಕೆಟ್ ಗಳನ್ನು ಕಿತ್ತ ಅಜಾಜ್ ಪಟೇಲ್ ಈ ಸಾಧನೆ ಮಾಡಿದ ಕೇವಲ ಮೂರನೇ ಬೌಲರ್ ಎಂಬ ದಾಖಲೆ ನಿರ್ಮಿಸಿದರು.

Advertisement

ಈ ಹಿಂದೆ 1956ರಲ್ಲಿ ಇಂಗ್ಲೆಂಡ್ ನ ಬೌಲರ್ ಜಿಮ್ ಲೇಕರ್ ಆಸೀಸ್ ವಿರುದ್ಧ ಮೊದಲ ಬಾರಿಗೆ ಈ ದಾಖಲೆ ನಿರ್ಮಿಸಿದ್ದರು. ಬಳಿಕ 1999ರಲ್ಲಿ ಡೆಲ್ಲಿ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಕನ್ನಡಿಗ ಅನಿಲ್ ಕುಂಬ್ಳೆ ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಬಳಸಿದ್ದರು.

ಇದೀಗ ಅಜಾಜ್ ಪಟೇಲ್ ಅವರು ಈ ದಾಖಲೆಯನ್ನು ಬರೆದಿದ್ದಾರೆ. ಮೂಲತಃ ಮುಂಬೈನವರಾದ ಅಜಾಜ್ ಪಟೇಲ್ ನ್ಯೂಜಿಲ್ಯಾಂಡ್ ತಂಡದ ಪರವಾಗಿ ಆಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಬಾರಿಸಿದ ಚೆಂಡನ್ನು ಮತ್ತೋರ್ವ ಭಾರತೀಯ ಮೂಲದ ಆಟಗಾರ ರಚಿನ್ ರವೀಂದ್ರ ಹಿಡಿಯುವ ಮೂಲಕ ಅಜಾಜ್ ಪಟೇಲ್ ಹತ್ತನೇ ವಿಕೆಟ್ ಪಡೆದರು.

ಇದನ್ನೂ ಓದಿ:ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಅಜಾಜ್ ಪಟೇಲ್ ಸಾಧನೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ವತಃ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿದ್ದು, “ ನಮ್ಮ ಕ್ಲಬ್ ಗೆ ಅಜಾಜ್ ಪಟೇಲ್ ಗೆ ಸ್ವಾಗತ. ಉತ್ತಮ ಬೌಲಿಂಗ್. ಟೆಸ್ಟ್ ಪಂದ್ಯದ ಮೊದಲೆರಡು ದಿನವೇ ಈ ದಾಖಲೆ ಮಾಡಿರುವುದು ವಿಶೇಷ” ಎಂದು ಬರೆದುಕೊಂಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next