Advertisement

ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ಈತನೇ ಬೆಸ್ಟ್: ಅನಿಲ್ ಕುಂಬ್ಳೆ

09:50 AM Dec 14, 2019 | keerthan |

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ವಿಶ್ವ ಕ್ರಿಕೆಟ್ ನ ಅತ್ಯಂತ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಸತತ ಸರಣಿಗಳನ್ನು ಜಯಿಸುತ್ತಿದ್ದರೂ ಭಾರತ ಏಕದಿನ ತಂಡದ ಆ ಒಂದು ಕೊರಗಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದೇ ನಾಲ್ಕನೇ ಕ್ರಮಾಂಕ. ಸದ್ಯ ಭಾರತದ ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ.

Advertisement

ಮುಂಬರುವ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಾಳಾದ ಕಾರಣ ಕೆ ಎಲ್ ರಾಹುಲ್ ಇನ್ನಿಂಗ್ಸ್ ಓಪನ್ ಮಾಡಲಿದ್ದಾರೆ. ಹೀಗಾಗಿ ನಾಲ್ಕನೇ ಕ್ರಮಾಂಕದಲ್ಲಿ ಯುವ ಆಟಗಾರ ಶ್ರೇಯಸ್ ಅಯ್ಯರ್ ಮಾಡಬೇಕು ಎಂದು ಜಂಬೋ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಯುವರಾಜ್ ಸಿಂಗ್ ತೆರೆಮರೆಗೆ ಸರಿದ ನಂತರ ನಾಲ್ಕನೇ ಕ್ರಮಾಂಕಕ್ಕೆ ಸರಿಯಾದ ಆಟಗಾರ ಹೊಂದಿಕೆಯಾಗಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರತ ಈ ಸಮಸ್ಯೆ ಎದುರಿಸುತ್ತಿದೆ.

ಇದುವರೆಗೆ ಭಾರತದ ಪರ ಒಟ್ಟು 9 ಏಕದಿನ ಪಂದ್ಯವಾಡಿರುವ ಅಯ್ಯರ್, 49ರ ಸರಾಸರಿಯಲ್ಲಿ 346 ರನ್ ಗಳಿಸಿದ್ದಾರೆ.

ಭಾರತ ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಡಿಸೆಂಬರ್ 15ರಂದು ಚೆನ್ನೈನಲ್ಲಿ ಆಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next