Advertisement

ರೋಬೋ ಮ್ಯಾಲೆ ರೋಷ!

11:00 AM Oct 30, 2017 | Team Udayavani |

ರಿಯಾದ್‌: ಮಹಿಳೆಯರಿಗೆ ಹಲವಾರು ನಿಬಂಧನೆಗಳಿರುವ ಸೌದಿ ಅರೇಬಿಯಾ, ಇತ್ತೀಚೆಗೆ ಸೋಫಿಯಾ ಎಂಬ ಮಹಿಳಾ ರೊಬೋಟ್‌ಗೆ ಪೌರತ್ವ ನೀಡಿರುವುದು ಆ ದೇಶದ ಮಹಿಳೆಯರ ಕೆಂಗಣ್ಣಿಗೆ ಕಾರಣವಾಗಿದೆ. ಇತರ ಹಲವಾರು ದೇಶಗಳಲ್ಲಿರುವಂಥ ಸ್ವಾತಂತ್ರ್ಯ ಸೌದಿ ಮಹಿಳೆಯರಿಗೆ ಇಲ್ಲ. ಉದಾಹರಣೆಗೆ ಅವರು, ಬುರ್ಖಾ ಧರಿಸಿಯೇ ಮನೆಯಿಂದ ಆಚೆ ಹೊರಡಬೇಕು. ಹೊರಗೆ ಬಂದರೆ, ತನ್ನ ಬೆಂಗಾವಲಿಗಾಗಿ ಆಕೆಯ ಸಂಬಂಧಿಕರಲ್ಲೊಬ್ಟಾತ ಜತೆಯಲ್ಲಿರಲೇ ಬೇಕು. ಆಕೆಯ ಗಂಡ, ತಂದೆ ಅಥವಾ ಯಾವುದೇ ಸಂಬಂಧಿಕನೊಬ್ಬ ಆಕೆಯ ಕಾನೂನು ಸಲಹೆಗಾರರಾಗಿರಲೇಬೇಕು. ಕಾನೂನು ಸಲಹೆಗಾರರಿಲ್ಲದೆ ಆಕೆ ಮದುವೆಯಾಗುವುದು, ಪಾಸ್‌ಪೋರ್ಟ್‌ ಪಡೆಯುವುದು, ಪ್ರಯಾಣ ಮಾಡುವುದು ಅಸಾಧ್ಯ ಎಂಬ ಪರಿಸ್ಥಿತಿ ಅಲ್ಲಿದೆ. ಇತ್ತೀಚೆಗಷ್ಟೇ, ಅವರಿಗೆ ಕಾರು ಚಲಾಯಿಸುವ ಅವಕಾಶ ನೀಡಲಾಗಿದ್ದು ಇದು ಸೌದಿ ಮಹಿಳೆಯರಿಗೆ ಸಿಕ್ಕಿರುವ ದೊಡ್ಡ ಕೊಡುಗೆ ಎಂದು ಬಣ್ಣಿಸಲಾಗಿದೆ.

Advertisement

ಹೀಗಿರು ವಾಗ, ಇದ್ಯಾವ ನಿಬಂಧನೆ ಯಿಲ್ಲದ ಸೋಫಿಯಾ ವಿರುದ್ಧ ಸಹಜವಾಗಿ ಅಲ್ಲಿನ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರಿದ್ದಾರೆ. ಅಂದಹಾಗೆ, ಸೌದಿ ಮಹಾರಾಜ ನಿರ್ಮಿಸುತ್ತಿರುವ “ನಿಯಾಮ್‌’ ಎಂಬ 500 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದ ಮಹಾ ಕೈಗಾರಿಕಾ ವಲಯದ ಯೋಜನೆ ಯಲ್ಲಿ ಸೋಫಿಯಾ ತೊಡಗಿಸಿಕೊಳ್ಳುತ್ತಿದ್ದಾಳೆ. ಇದನ್ನು ಹಾಂಕಾಂಗ್‌ ಮೂಲದ ಹ್ಯಾನ್ಸನ್‌ ರೋಬೋಟಿಕ್ಸ್‌ ಕಂಪೆನಿ ತಯಾರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next