ಲಕ್ನೋ: ಹಾವು ಕಚ್ಚಿತೆಂದು, ಸಿಟ್ಟಿನಿಂದ ವ್ಯಕ್ತಿಯೊಬ್ಬ ಆ ಹಾವನ್ನೇ ತುಂಡರಿಸಿ ನುಂಗಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ. ಸ್ಯೋಹತ್ ಗ್ರಾಮದ ನಿವಾಸಿ ಮತಬದಾಲ್ ಸಿಂಗ್(49) ಭಾನುವಾರ ಸಂಜೆ ಹೊಲದಿಂದ ಮನೆಗೆ ವಾಪಸು ಬರುವಾಗ ವಿಷಕಾರಿ ಹಾವೊಂದು ಅವರನ್ನು ಕಚ್ಚಿದೆ.
ಅದರಿಂದಾಗಿ ಸಿಟ್ಟಾದ ಅವರು, ಆ ಹಾವನ್ನು ಅಲ್ಲೇ ತುಂಡರಿಸಿ, ನುಂಗಿಬಿಟ್ಟಿದ್ದಾರೆ ಕೂಡ. ಮನೆಗೆ ಬಂದ ಮತಬದಾಲ್ ಬಟ್ಟೆಯಲ್ಲಿ ರಕ್ತ ಕಂಡು, ಗಾಬರಿಗೊಂಡ ಕುಟುಂಬಸ್ಥರು ವಿಚಾರಿಸಿದಾಗ, ಅವರು ನಡೆದ ವಿಚಾರವನ್ನು ತಿಳಿಸಿದ್ದಾರೆ.
ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಸತಬದಾಲ್ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.