Advertisement

ಕೋವಿಡ್‌ 19: ಟ್ರಂಪ್‌ಗಿಂತ ಏಂಜೆಲಾರೇ ಸೈ

06:42 PM Apr 18, 2020 | sudhir |

ಬರ್ಲಿನ್‌: ಕೋವಿಡ್‌ ವೈರಾಣು ಹಲವು ರಾಷ್ಟ್ರೀಯ ನಾಯಕರ ನಾಯಕತ್ವ ಸಾಮರ್ಥ್ಯವನ್ನೂ ಒರೆಗೆ ಹಚ್ಚಿದೆ. ಈ ಪೈಕಿ ಜರ್ಮನಿಯ ಚಾನ್ಸಲರ್‌ (ಪ್ರಧಾನಿಗೆ ಸಮಾನವಾಗಿರುವ ಹುದ್ದೆ) ಏಂಜೆಲಾ ಮರ್ಕೆಲ್‌ ಒಬ್ಬರು. ಕೋವಿಡ್‌ನ‌ಂಥ ರಾಷ್ಟ್ರೀಯ ಆಪತ್ತಿನ ಸಂದರ್ಭದಲ್ಲಿ ಎಲ್ಲ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗದುಕೊಂಡು ದೇಶವನ್ನು ಮುನ್ನಡೆಸಿದ ರೀತಿ ಏಂಜೆಲಾಗೆ ವಿಶ್ವವ್ಯಾಪಿಯಾಗಿ ಮೆಚ್ಚುಗೆಯನ್ನು ತಂದುಕೊಟ್ಟಿದೆ.

Advertisement

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಏಂಜೆಲಾ ಮಾರ್ಕೆಲ್‌ ನಾಯಕತ್ವವನ್ನು ಈ ಸಂದರ್ಭದಲ್ಲಿ ಹೋಲಿಕೆ ಮಾಡಲಾಗುತ್ತಿದೆ. ಜರ್ಮನಿಯ ರಾಜ್ಯಗಳು ಜವಾಬ್ದಾರಿಗೆ ಹೆಗಲು ಕೊಟ್ಟು ಕೋವಿಡ್‌ ಹೋರಾಟದಲ್ಲಿ ಕೇಂದ್ರೀಯ ಸರಕಾರಕ್ಕೆ ಸಮರ್ಥ ಸಾಥ್‌ ನೀಡಿದವು. ಜರ್ಮನಿಯಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚಿದ್ದರೂ ಸಾವಿನ ಪ್ರಮಾಣ ಕಡಿಮೆಯಿತ್ತು. ಇದಕ್ಕೆ ಕಾರಣ ರಾಜ್ಯಗಳು ಸಕಾಲದಲ್ಲಿ ಆರೋಗ್ಯ ಕ್ಷೇತ್ರವನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟದ್ದು. ಜರ್ಮನಿಯ ಸಂವಿಧಾನ ರಾಜ್ಯಗಳಿಗೆ ಅಮೆರಿಕದಲ್ಲಿರುವಷ್ಟು ಅಧಿಕಾರವನ್ನು ಕೊಟ್ಟಿಲ್ಲ. ಆದರೂ ಆಪತ್ಕಾಲದಲ್ಲಿ ಏಂಜೆಲಾ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಫ‌ಲರಾದರು.

ಅಮೆರಿಕದ ಸಂವಿಧಾನ ರಾಜ್ಯಗಳಿಗೆ ಪರಮಾಧಿಕಾರವನ್ನು ನೀಡಿವೆ. ಕೆಲವು ವಿಚಾರಗಳಲ್ಲಿ ಕೇಂದ್ರೀಯ ಸರಕಾರಕ್ಕಿಂತ ಹೆಚ್ಚಿನ ಅಧಿಕಾರವನ್ನು ಆಯಾಯ ರಾಜ್ಯಗಳ ಮೇಯರ್‌ಗಳು ಹೊಂದಿದ್ದಾರೆ. ಆದರೆ ಉದ್ದಕ್ಕೂ ಟ್ರಂಪ್‌ ಮೇಯರ್‌ಗಳ ಜತೆಗೆ ತಿಕ್ಕಾಟ ನಡೆಸುತ್ತಿದ್ದªರು. ಆರೋಗ್ಯ ಫೆಡರಲ್‌ ಸರಕಾರದ ವ್ಯಾಪ್ತಿಗೆ ಬರುವ ವಿಚಾರವಾದರೂ ಟ್ರಂಪ್‌ ರಾಜ್ಯಗಳಿಗೆ ಸೂಕ್ತವಾದ ಮಾರ್ಗದರ್ಶನ ನೀಡುವಲ್ಲಿ ವಿಫ‌ಲರಾದರು. ನಾಯಕತ್ವದ ಅಸಾಮರ್ಥ್ಯದಿಂದಾಗಿಯೇ ಅಮೆರಿಕದಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣ ನಿಯಂತ್ರಣ ಮೀರಿತು ಎಂಬ ಆರೋಪವಿದೆ.

ಕೋವಿಡ್‌ನಿಂದ ಅತಿ ಹೆಚ್ಚು ಹಾನಿ ಅನುಭವಿಸಿ ರುವ ನ್ಯೂಯಾರ್ಕ್‌ನ ಮೇಯರ್‌ ಆ್ಯಂಡ್ರೂé ಕೌಮೊ ಅಧ್ಯಕ್ಷರು ಕೋವಿಡ್‌ ವಿರುದ್ಧದ ಹೋರಾಟದ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಒಕ್ಕೂಟ ವ್ಯವಸ್ಥೆಯೆಂದರೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಲ್ಲ, ಬದಲಾಗಿ ಪ್ರತಿಯೊಬ್ಬರು ಜವಾಬ್ದಾರಿಯನ್ನು ಹಂಚಿಕೊಳ್ಳುವುದು ಎಂಬುದು ಏಂಜೆಲಾ ಮಾರ್ಕೆಲ್‌ ಆಪತ್ತಿನ ಸಂದರ್ಭದಲ್ಲಿ ಅನುಸರಿಸಿದ ನೀತಿ.

15 ವರ್ಷಗಳಿಂದ ಅಧಿಕಾರದಲ್ಲಿರುವ ಹಾಗೂ ಇಳಿವಯಸ್ಸಿನ ಏಂಜೆಲಾಗೆ ಕೋವಿಡ್‌ ವಿರುದ್ಧ ಹೋರಾಡುವ ಸಾಮರ್ಥ್ಯವಿದೆಯೇ ಎಂದು ಅನೇಕ ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ತನ್ನ ಕಾರ್ಯತತ್ಪರತೆಯಿಂದ ಏಂಜೆಲಾ ಈ ಅನುಮಾನಗಳನ್ನು ಕೆಲವೇ ದಿನಗಳಲ್ಲಿ ಸುಳ್ಳಾಗಿಸಿದರು. ನಾವು ಇನ್ನೆಷ್ಟು ಪ್ರೀತಿಪಾತ್ರರನ್ನು ಕಳೆದುಕೊಳ್ಳಬೇಕು.
ಕೋವಿಡ್‌ಗೆ ಇನ್ನೆಷ್ಟು ಬೆಲೆ ತೆರಬೇಕೆಂದು ಮಾ.18ರಂದು ಮಾರ್ಮಿಕವಾಗಿ ಕೇಳಿದ್ದರು. ಈ ಮಾತು ಜನರ ಮೇಲೆ ಭಾರೀ ಪ್ರಭಾವ ಬೀರಿತ್ತು. ಈ ವಿಪತ್ತಿನಿಂದ ಪಾರಾಗುವುದು ನಮ್ಮ ಕೈಯಲ್ಲೇ ಇದೆ. ನಾವಿದನ್ನು ಸಾಧಿಸಬಲ್ಲೆವು ಮತ್ತು ಪ್ರಾಣಗಳನ್ನು ಉಳಿಸಬಲ್ಲೆವು ಎಂಬ ಮಾತುಗಳು ಇಡೀ ದೇಶಕ್ಕೆ ಸ್ಫೂರ್ತಿ ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next