Advertisement
ಅನುದಾನಕ್ಕೆ ಪರದಾಟಕಳೆದ ಮಳೆಗಾಲದಲ್ಲಿ ಅಂಗನವಾಡಿ ಛಾವಣಿ ಅಡ್ಡಹಾಸು, ರೀಪು, ಹೆಂಚು ಮುರಿದು ಬೀಳುವ ಪರಿಸ್ಥಿತಿ ಎದುರಾಗಿತ್ತು. ಅಕ್ಟೋಬರ್ ಅವಧಿಗೆ ಅಂಗನವಾಡಿ ಶಿಕ್ಷಕಿ ಮಕ್ಕಳ ಹೆತ್ತವರ ಗಮನಕ್ಕೆ ತಂದಿದ್ದರು. ಗ್ರಾ.ಪಂ. ಸಭೆಗಳಲ್ಲಿ ಅಂಗನವಾಡಿ ಮಕ್ಕಳ ಹೆತ್ತವರ ಸಮಿತಿ ಸದಸ್ಯ ರಾಘವೇಂದ್ರ ಭಟ್ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಈ ಕುರಿತು ಶಾಸಕರಿಗೆ ಮನವಿ ನೀಡಿ ದಾಗಲೂ ಅನುದಾನ ನಿರೀಕ್ಷಿಸಿದ್ದು ಕೈ ಸೇರಿಲ್ಲ. ಇತ್ತ ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿಯಲ್ಲಿ ಚರ್ಚಿಸಿದಾಗ ಮನವಿ ನೀಡುವುದೇ ಬೇಡ ಎಂಬ ಹಾರಿಕೆ ಉತ್ತರ ಎದುರಾಗಿತ್ತು.
ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯ ಸ್ತ್ರೀಶಕ್ತಿ ಸಂಘಟನೆ ನೇತೃತ್ವದಲ್ಲಿ ಮಕ್ಕಳ ಹೆತ್ತವರು ಸ್ಥಳೀಯ ದಾನಿಗಳ ನೆರವಿ ನಿಂದ ಒಂದೇ ದಿನದಲ್ಲಿ ಛಾವಣಿ ದುರಸ್ತಿ ಗೊಳಿಸಿದ್ದಾರೆ. 10ರಿಂದ 12 ಸಾವಿರ ರೂ. ಸಂಗ್ರಹಿಸಿ 50 ಹೆಂಚು, 1.20 ಕ್ವಿಂಟಲ್ ರಾಡ್ ಬಳಸಿ ಛಾವಣಿ ನಿರ್ಮಿಸಿದ್ದಾರೆ. ಸ್ಥಳೀಯ 4 ಸ್ತ್ರೀ ಶಕ್ತಿ ಸಂಘಟನೆಗಳ
ಸದಸ್ಯೆ ಯರು ಹಾಗೂ ಮಕ್ಕಳ ತಾಯಂದಿರು 30 ಮಂದಿ ಸೇರಿ 10 ಮಂದಿ ಪುರುಷರ ಸಹಾಯದಿಂದ ಮಾ. 17ರಂದು ಒಂದೇ ದಿನದಲ್ಲಿ ಛಾವಣಿ ಯನ್ನು ದುರಸ್ತಿಗೊಳಿಸಿದ್ದಾರೆ.
Related Articles
ಕಾನರ್ಪ ಅಂಗನವಾಡಿಯಲ್ಲಿ 3ರಿಂದ 6 ವರ್ಷ ಪ್ರಾಯದ 19 ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗುತ್ತಿದ್ದು, 0-3 ವರ್ಷ ಪ್ರಾಯದ 32 ಕಂದಮ್ಮಗಳು, 3-6 ವರ್ಷ ಪ್ರಾಯದ 19 ಮಕ್ಕಳು ಇದೇ ಅಂಗನವಾಡಿ ಆಶ್ರಯಿಸಿದ್ದಾರೆ. ಇಷ್ಟಾದರೂ ಕಟ್ಟಡ ಛಾವಣಿ ದುರಸ್ತಿಗೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ದುರಂತ. ಮಂದಿನ ದಿನಗಳಲ್ಲಿ ಕಾಂಕ್ರೀಟ್ ಛಾವಣಿ ನಿರ್ಮಿಸುವಂತೆ ಹೆತ್ತವರು ಆಗ್ರಹಿಸಿದ್ದಾರೆ.
Advertisement
ಪ್ರತಿವರ್ಷ ಅನುದಾನಪ್ರತಿ ವರ್ಷ ಅಂಗನವಾಡಿ ಕಟ್ಟಡ ದುರಸ್ತಿಗೆ ಇಲಾಖೆ ಅನುದಾನ ಒದಗಿಸು ತ್ತದೆ. ಕಳೆದ ವರ್ಷ 68 ಅಂಗನವಾಡಿ ದುರಸ್ತಿಗೆ 74 ಲಕ್ಷ ರೂ., ಈ ವರ್ಷ 48 ಅಂಗನವಾಡಿ ದುರಸ್ತಿಗೆ 22 ಲಕ್ಷ ರೂ. ಅನುದಾನ ನೀಡಲಾಗಿದೆ. ಸಂಬಂಧ ಪಟ್ಟ ತಾ.ಪಂ. ಸದಸ್ಯರು ಅನುದಾನ ಹಂಚುವ ಜವಾಬ್ದಾರಿ ಹೊಂದಿರುತ್ತಾರೆ.
- ಪ್ರಿಯಾ ಆಗ್ನೆಸ್, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಾನಿಗಳು, ಹೆತ್ತವರ ಸಹಕಾರ
ಕಟ್ಟಡ ಛಾವಣಿ ದುರಸ್ತಿಗೆ ಹಲವು ಬಾರಿ ಮೇಲಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮಕ್ಕಳ ಜೀವ ಹಾನಿ ಸಂಭವಿಸುವ ಮುನ್ನ ಅನಿವಾರ್ಯವಾಗಿ ಸ್ಥಳೀಯ ದಾನಿಗಳು, ಹೆತ್ತವರ ಸಹಕಾರ ದಿಂದ ಕಟ್ಟಡ ದುರಸ್ತಿಗೊಳಿಸಲಾಗಿದೆ.
– ಗೌರಿ ಆರ್.ಕೆ., ಕಾನರ್ಪ ಅಂಗನವಾಡಿ ಕಾರ್ಯಕರ್ತೆ ಒಂದೇ ದಿನದಲ್ಲಿ ಛಾವಣಿ ನಿರ್ಮಾಣ ಮಳೆಗಾಲಕ್ಕೂ ಮುನ್ನ ಅಂಗನವಾಡಿ ದುರಸ್ತಿ ಅನಿವಾರ್ಯವಾದ್ದರಿಂದ ಸ್ಥಳೀಯ ದಾನಿಗಳ ನೆರವಿನಿಂದ, ಸ್ತ್ರೀಶಕ್ತಿಯರ ಕರ ಸೇವೆಯಿಂದ 12 ಸಾವಿರ ರೂ. ವೆಚ್ಚದಲ್ಲಿ ಒಂದೇ ದಿನದಲ್ಲಿ ಛಾವಣಿ ನಿರ್ಮಿಸಿದ್ದೇವೆ.
-ರಾಘವೇಂದ್ರ ಭಟ್, ಹೆತ್ತವರು ಮಕ್ಕಳ ಹೆತ್ತವರಿಂದಲೇ ಅಂಗನವಾಡಿ ದುರಸ್ತಿ ಕಾರ್ಯ. - ಚೈತ್ರೇಶ್ ಇಳಂತಿಲ