Advertisement

ವಾರದಿಂದ ಬೀಗ ಜಡಿದಿದ್ದ ಅಂಗನವಾಡಿಗೆ ಮುಕ್ತಿ 

11:08 AM Sep 02, 2018 | Team Udayavani |

ಉಪ್ಪಿನಂಗಡಿ: ಕಳೆದೊಂದು ವಾರದಿಂದ ಬೀಗ ಹಾಕಿದ್ದ ತಣ್ಣೀರುಪಂತ ಗ್ರಾಮದ ಅಳಕೆ ಅಂಗನವಾಡಿ ಕೇಂದ್ರದ ಅವ್ಯವಸ್ಥೆಯ ಕುರಿತು ‘ಉದಯವಾಣಿ’ ಸುದಿನದಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಅಂಗನವಾಡಿಯ ಬೀಗ ತೆರೆಯಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಮೇಲಧಿಕಾರಿಗಳಿಗೆ ತಿಳಿಸದೆ ಬೀಗ ಹಾಕಿ ವೈಯಕ್ತಿಕ ಕಾರಣದಿಂದ ಗೈರು ಹಾಜರಾಗಿದ್ದರು. ಇದರಿಂದ ಪುಟಾಣಿಗಳು ಅವರ ಹೆತ್ತವರು ಅಂಗನವಾಡಿಗೆ ದಿನಾ ಬಂದು ಹಿಂತಿರುಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ವರದಿ ಪ್ರಕಟಿಸಲಾಗಿತ್ತು.

Advertisement

ಮೇಲ್ವಾಚಾರಕಿ ನಂದನಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆ್ಯಗ್ನೆಸ್‌ ಅವರಿಗೆ ಮಾಹಿತಿ ನೀಡಿದ್ದರು. ಅದರಂತೆ ಯೋಜನಾಧಿಕಾರಿಗಳು ಮೇಲ್ವಿಚಾರಕಿಯೊಂದಿಗೆ ಶನಿವಾರ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಕೇಂದ್ರದ ಬೀಗವನ್ನು ಒಡೆದು ತೆರವುಗೊಳಿಸಿ ಸಭೆ ನಡೆಸಿದ್ದಾರೆ. ಅಧಿಕಾರಿಗಳು ಅಂಗನವಾಡಿಗೆ ಕಾರ್ಯಕರ್ತೆಯರನ್ನು ನೇಮಿಸಿ ಕಾರ್ಯಾಚರಿಸುವಂತೆ ಸೂಚನೆ ಕೊಟ್ಟಿದ್ದಾರೆ. ತಣ್ಣೀರುಪಂತ ಗ್ರಾ.ಪಂ. ಪಿಡಿಒ ಪೂರ್ಣಿಮಾ ಹಾಗೂ ಸದಸ್ಯರಾದ ಅಬ್ದುಲ್‌ ರಹಿಮಾನ್‌, ತಾಜುಸದ್ದೀನ್‌, ಅಂಗನವಾಡಿ ಕೇಂದ್ರದ ಬಾಲವಿಕಾಸ ಅಧ್ಯಕ್ಷೆ ಗೀತಾ ಎ. ಉಪಸ್ಥಿತರಿದ್ದರು. ಸಂಬಂಧಪಟ್ಟವರು ಶೀಘ್ರವಾಗಿ ಸ್ಪಂದಿಸಿರುವುದಕ್ಕೆ ಮಕ್ಕಳ ಹೆತ್ತವರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next