Advertisement

ಅಂಗನವಾಡಿಗೆ ಬೀಗ: ವ್ಯಕ್ತಿ ವಿರುದ್ಧ ದೂರು

05:44 PM Jan 10, 2022 | Team Udayavani |

ಮುದಗಲ್ಲ: ಪಟ್ಟಣ ಸಮೀಪದ ಕುಮಾರಖೇಡ ಗ್ರಾಮದಲ್ಲಿ ಸುಮಾರು 40 ವರ್ಷ ಹಳೆಯ ಅಂಗನವಾಡಿ ಕಟ್ಟಡಕ್ಕೆ ಅದೇ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬ ಬೀಗ ಹಾಕಿ ಗಲಾಟೆ ಮಾಡಿದ್ದರಿಂದ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಗ್ರಾಪಂ ಸದಸ್ಯ ಮಾನಪ್ಪಗೌಡ್ರು ತಿಳಿಸಿದ್ದಾರೆ. ]

Advertisement

ಕುಮಾರಖೇಡ ಗ್ರಾಮದ ಸರಕಾರಿ ಜಮೀನು ಸರ್ವೇ ನಂ.5 ಹಿಸ್ಸಾ 1ರಲ್ಲಿ ಸಾರ್ವಜನಿಕರು ಅಂಗನವಾಡಿ ಕೇಂದ್ರ ನಿರ್ಮಿಸಿ ಸುಮಾರು 40 ವರ್ಷಗತಿಸಿವೆ. ಅದೇ ಕಟ್ಟಡದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಗ್ರಾಮದ ದ್ಯಾವಪ್ಪ ಗ್ಯಾನಪ್ಪ ಎಂಬುವರು ಈಗ ಇದು ನನ್ನ ಜಮೀನು. ನನ್ನು ಕೆಳದೆ ಅಂಗನವಾಡಿ ಕಟ್ಟಿಸಲಾಗಿದೆ. ಕೇಂದ್ರಕ್ಕೆ ಬೀಗ ಹಾಕುತ್ತೇನೆಂದು ಗಲಾಟೆ ಮಾಡಿದ್ದರಿಂದ ಗ್ರಾಪಂ ಸದಸ್ಯ ಮಾನಪ್ಪ ಗೌಡ್ರು ವಿಚಾರಿಸಲು ಹೋದಾಗ ಗ್ರಾಮದ ದ್ಯಾವಪ್ಪ ಮತ್ತು ಆತನ ಕುಟುಂಬಸ್ಥರು ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಒಂದು ವಾರದಿಂದ ಅಂಗನವಾಡಿ ಕೇಂದ್ರ ಸ್ಥಗಿತಗೊಂಡಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಗಲಾಟೆ ವಿಚಾರ ತಿಳಿಸಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೂಡಲೇ ಅಂಗನವಾಡಿ ಕೇಂದ್ರದ ಬೀಗ ತೆರವುಗೊಳಿಸಿ ಮಕ್ಕಳ ಕಲಿಕೆಗೆ ಅವಕಾಶ ಮಾಡಿ ಕೊಡಬೇಕಿದೆ ಎಂದು ಬಸವರಾಜ, ಅಯ್ಯಪ್ಪ, ದುರುಗಪ್ಪ, ಯಮನಪ್ಪ ಆಗ್ರಹಿಸಿದ್ದಾರೆ.

ಕುಮಾರಖೇಡ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ವಿಚಾರ ಇಲಾಖೆ ಗಮನಕ್ಕಿದೆ. ನಾನು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಇಲಾಖೆಯ ಅಧಿಕಾರಿಗಳಿಗೆ ವರದಿ ನೀಡಿದ್ದೇನೆ. -ಲಕ್ಷ್ಮೀಬಾಯಿ, ಸೂಪರ್‌ ವೈಜರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಲಿಂಗಸುಗೂರು

Advertisement

Udayavani is now on Telegram. Click here to join our channel and stay updated with the latest news.

Next