Advertisement
ನಗರದ ಜಿಲ್ಲಾಡಳಿತ ಭವನದ ಎದುರು ನಡೆದ ಸತ್ಯಾಗ್ರಹದಲ್ಲಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿ, ಈ ಬಾರಿ ಬಜೆಟ್‌ನಲ್ಲಿ ಅಂಗನವಾಡಿ ನೌಕರರ ಸೇವೆ ಕಾಯಂಗೊಳಿಸುವಿಕೆ, ನಿವೃತ್ತಿ ಮತ್ತು ಪಿಂಚಣಿ ಸೌಲಭ್ಯ, ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಳ, ಸೇವಾ ಜೇಷ್ಠತೆ ಆಧಾರದಲ್ಲಿ ಗೌರವ ಧನ ಬಿಡುಗಡೆ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿ ನೀಡಬೇಕು ಎಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಸರಕಾರ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಮಹೇಶ ಹಿರೇಮಠ ಮಾತನಾಡಿ, ಅಂಗನವಾಡಿ ನೌಕರರು ಕಡಿಮೆ ಸೌಲಭ್ಯಗಳು ಇದ್ದರೂ ಕೂಡ ಕೊರೊನಾ ಸಂದರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಷರತ್ತುಗಳಿಲ್ಲದೆ ಕೊರೊನಾ ಕಾರ್ಯಪಾಲಕರಾಗಿ ಕೆಲಸ ನಿರ್ವಹಿಸಿದ್ದೇವೆ. ಈ ವೇಳೆ ಕೆಲಸದ ಒತ್ತಡದಿಂದ 35 ಜನ, ಕೊರೊನಾಗೆ 21 ಜನರು ಬಲಿಯಾಗಿದ್ದಾರೆ. 173 ಜನರಿಗೆ ಕೊರೊನಾ ಬಂದು ಆ ದಿನಗಳಲ್ಲಿ ತಮ್ಮ ಕುಟುಂಬದ ಆದಾಯ ಕಳೆದುಕೊಂಡಿದ್ದಾರೆ. ರಾಜ್ಯ ಹೈಕೋರ್ಟ್ ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಅಪೌಷ್ಟಿಕತೆ ತಡೆಯಲು ಪೌಷ್ಟಿಕ ಆಹಾರವನ್ನು ವಿತರಿಸಿದ ಬಗ್ಗೆ ಖಾತರಿ ಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಆದರೆ ಆ ಎಲ್ಲ ದೂರ ದೂರುಗಳಿಂದ ರಾಜ್ಯ ಸರ್ಕಾರದ ಕಾಪಾಡಿದ್ದು, ಅಂಗನವಾಡಿ ಕಾರ್ಯಕರ್ತೆಯರು ಎಂಬುವುದನ್ನು ಸರ್ಕಾರ ಮರೆಯಬಾರದು ಎಂದರು.
ಗಂಗಮ್ಮ ದೇವರಡ್ಡಿ ಮಾತನಾಡಿದರು. ಗಂಗಮ್ಮ ದೇವರೆಡ್ಡಿ, ಶೋಭಾ ಅಂಕಲಿ, ಸಾವಿತ್ರೀ ಪಾಟೀಲ, ಚಂದ್ರಕಲಾ ಕರವಳಿ, ಗೀತಾ ಪಾಟೀಲ, ಜಯದೇವಿ ಕಳಕಾಪುರ, ಗಂಗಮ್ಮ ಪಾಟೀಲ, ವಿಜಯಲಕ್ಷ್ಮೀ ದಿಂಡೂರ, ಶಾರದಾ ಸುಂಕದ, ಗಂಗಮ್ಮ ಹಡಪದ, ಗೀತಾ ಕುಲಕರ್ಣಿ ಇದ್ದರು.