Advertisement

ಸೌಲಭ್ಯ ನಿರೀಕ್ಷೆಯಲ್ಲಿ ಅಂಗನವಾಡಿ ಕೇಂದ್ರಗಳು; ಇನ್ನಾದರೂ ಸಿಕ್ಕೀತೆ ಸ್ವಂತ ಸೂರು

01:08 PM Nov 14, 2022 | Team Udayavani |

ದೋಟಿಹಾಳ: ಒಂದು ಸಣ್ಣ ಕೊಠಡಿಯಲ್ಲಿ ಒಂದೆಡೆ ವಿದ್ಯಾರ್ಥಿಗಳು, ಮತ್ತೊಂದೆಡೆ ಪೌಷ್ಟಿಕ ಆಹಾರದ ಚೀಲಗಳು. ಅತ್ತ ಕುಡಿಯುವ ನೀರಿನ ಬಿಂದಿಗೆಗಳು, ಇತ್ತ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಮಾಹಿತಿಯ ಚಾರ್ಟ್ಗಳು…ಇದು ಹಿರೇಮನ್ನಾಪೂರ ಗ್ರಾಮದ ಅಂಗನವಾಡಿ ಕೇಂದ್ರಗಳ ಕಂಡು ಬರುವ ದೃಶ್ಯ.. ನೋಟ. ಹಿರೇಮನ್ನಾಪೂರ ಗ್ರಾಮದ ಅಂಗನವಾಡಿ ಕೇಂದ್ರಗಳು.ದಶಕಗಳಿಂದ ಮೂಲಸೌಲರ್ಯದಿಂದ ವಂಚಿತವಾಗಿದೆ.

Advertisement

ಇಂದು ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದರೂ. ಇನ್ನು ಅನೇಕ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ನಡೆಯುತ್ತಿರುವುದು ಒಂದು ದುರಂತವಾಗಿದೆ.

ಗ್ರಾಮದ ಬಾಡಿಗೆ ಮನೆಯಲ್ಲಿ ಇರುವ ಬಹುತೇಕ ಅಂಗನವಾಡಿ ಕೇಂದ್ರಗಳು ಇದೇ ಸ್ಥಿತಿಯಲ್ಲಿವೆ.

ಗ್ರಾಮದಲ್ಲಿ ಒಟ್ಟು 7 ಅಂಗನವಾಡಿ ಕೇಂದ್ರಗಳ ಪೈಕಿ 4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಈ ಕೇಂದ್ರಗಳು ಸುಮಾರು 15 ವರ್ಷಗಳಿಂದ ಇಕ್ಕಟ್ಟಿನ ಪ್ರದೇಶದಲ್ಲಿ ಹಾಗೂ ಇಕ್ಕಟ್ಟು ಜಾಗಗಳಲ್ಲಿ ಕೇಂದ್ರಗಳನ್ನು ನಡೆಯುತ್ತಿವೆ. ಈ ಗ್ರಾಮದ 2,3,4 ಮತ್ತು 7ನೇ ಕೇಂದ್ರಗಳು ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಇದರಲ್ಲಿ 2,3,4ನೇ ಕೇಂದ್ರಗಳು ಆರಂಭವಗಿ ಸುಮಾರು 17ವರ್ಷಗಳು ಕಳೆದರು ಇನ್ನೂ ಇವುಗಳಿಗೆ ಸ್ವಂತ ಕಟ್ಟಡಗಳು ಇಲ್ಲ. ಈ ಕೇಂದ್ರಗಳು ನಾಟಕದ ಕಂಪನಿಯಂತೆ 2-3ವರ್ಷಕ್ಕೊಮ್ಮೆ ಮನೆಗಳನ್ನು ಬದಲಾವಣೆ ಮಾಡುತ್ತಾ ಕೇಂದ್ರವನ್ನು ಕಾರ್ಯಕರ್ತೆಯರು ನಡೆಸುತ್ತಿದ್ದಾರೆ.

ಗ್ರಾಮದ ಗ್ರಾಮ ಪಂಚಾಯತಿಯವರಿಗೆ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಕಲ್ಪಿಸುವಂತೆ ಕಳೆದ 10 ವರ್ಷಗಳಿಂದ ಮನವಿ ಮಾಡಲಾಗುತ್ತಿದೆ. ಆದರೆ ನಿವೇಶನ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬಾಡಿಗೆಯ ಮನೆಗಳಲ್ಲಿ ಕೇಂದ್ರಗಳನ್ನು ನಡೆಯುಸುತ್ತಿದ್ದೇವೆ. 2-3 ವರ್ಷಕ್ಕೋಮ್ಮೆ ಮನೆಗಳನ್ನು ಬದಲಾವಣೆ ಮಾಡಿದೇವೆ ಎಂದು ಕೇಂದ್ರ ಕಾರ್ಯಕರ್ತೆಯರು ತಿಳಿಸಿದರು.
ಇಲ್ಲಿಯ 7ನೇ ಅಂಗನವಾಡಿ ಕೇಂದ್ರ ಒಂದು ಚಿಕ್ಕ ಕೊಠಡಿಯಲ್ಲಿ ಇದು. ಇಲ್ಲಿಯ ಮಕ್ಕಳಿಗೆ ಅಡಿಗೆ ಮಾಡಲು ಕಟ್ಟಿಗೆಯಿಂದ ತಯಾರಿಸಿದ ಕಪಾಟಿನಲ್ಲಿ ಮಕ್ಕಳಿಗೆ ಅಡಿಗೆ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದಾರೆ. ಇದರ ಬಗ್ಗೆ ಕೇಂದ್ರ ಕಾರ್ಯಕರ್ತೆಯನ್ನು ವಿಚಾರಿಸಿದಾಗ. ಇನ್ನೂ ಮಾಡುವದು ಸರ್.. ಬಾಡಿಗೆ ಮನೆಗು ಸಿಗುತ್ತಿಲ್ಲ.. ಸ್ವಂತ ಕಟ್ಟಡವು ಇಲ್ಲ.. ಅನಿವಾರ್ಯವಾಗಿ ಇಂಥ ಪರಿಸ್ಥಿತಿಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದೇವೆ ಎಂದು ತಮ್ಮ ನೋವನ್ನು ತೋಡಿಕೊಂಡರು.

Advertisement

ಇದನ್ನೂ ಓದಿ:ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಕನ್ನಡಿಗರ ಕೊಡುಗೆ ಹೆಚ್ಚಿದೆ : ಶಾಸಕ ದಾಜಿ ಸಾಲ್ಕರ್ 

ಇಲ್ಲಿಯ ನಾಲ್ಕು ಕೇಂದ್ರಗಳು ಹಳೆಯ ಮನೆಗಳಲ್ಲಿ ನಡೆಯುತ್ತಿದೆ. ಈ ಮನೆಗೆ ವಿದ್ಯುತ್ ಸಂಪರ್ಕ, ಶೌಚಾಲಯ ಹಾಗೂ ಸರಿಯಾದ ಬೆಳಕಿನ ವ್ಯವಸ್ಥೆವಿಲ್ಲ, ಇಕ್ಕಟ್ಟಾದ ಸ್ಥಳದಲ್ಲಿ ಕೇಂದ್ರ ನಡೆಯುತ್ತಿದೆ. ಕೊಠಡಿಯ ಒಂದು ಮೂಲೆಯಲ್ಲಿ ಅಡುಗೆ ಮಾಡಿದರೆ, ಇನ್ನೊಂದು ಮೂಲೆಯಲ್ಲಿ ಸಾಮಗ್ರಿಗಳು ಹಾಗೂ ಮಕ್ಕಳ ಕಲಿಕೆಗೆ ಅಗತ್ಯವಾದ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಛಾವಣಿಗೆ ದುರಸ್ಥಿಯಲ್ಲಿ ಇದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ಸುರಿಯುತ್ತವೆ. ಇಂತಹ ಸ್ಥಿತಿಯಲ್ಲಿ ಮಧ್ಯಾಹ್ನ ಮಕ್ಕಳಿಗೆ ಊಟ ಮಾಡಲು ಸ್ಥಳಾವಕಾಶವಿಲ್ಲದೆ ಗರ್ಭೀಣಿಯರಿಗೆ ನೀಡುವ ಊಟವನ್ನು ಅವರ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ.

ಹಿರೇಮನ್ನಾಪೂರ ಗ್ರಾಮದ ನಾಲ್ಕು ಅಂಗನವಾಡಿ ಕೇಂದ್ರಗಳು ಸುಮಾರು 10-15 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ನಡೆಯುತ್ತಿವೆ. ಅಲ್ಲಿಯ ಗ್ರಾಮ ಪಂಚಾಯತಿಗೆ ನಿವೇಶನ ನೀಡಲು ಮನವಿ ಮಾಡಿದರು ಇದುವರೆಗೂ ಯಾವುದು ಪ್ರಯೋಜನವಾಗಿಲ್ಲ.
ನಾಗಮ್ಮ, ಅಂಗನವಾಡಿ ಮೇಲ್ವಿಚಾರಕಿ

ತಾಲೂಕಿನಲ್ಲಿ ಸುಮಾರು 13 ಕೇಂದ್ರಗಳಿಗೆ ನಿವೇಶನ ಇಲ್ಲದೇ ಬಾಡಿಗೆ ಮನೆಗಳಲ್ಲಿ ನಡೆಯುತ್ತಿದೆ. ಹಿರೇಮನ್ನಾಪೂರ ಗ್ರಾಮದ 4 ಕೇಂದ್ರಗಳು 10-15 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಸದ್ಯ ರಾಜ್ಯ ಪಂಚಾಯತಿ ರಾಜ್ ಆಯುಕ್ತಾಲಯ ಬೆಂಗಳೂರು ಅವರು ಸ್ವಂತ ಕಟ್ಟಡಗಳಿದ ಅಂಗನವಾಡಿ ಕೇಂದ್ರಗಳಿಗೆ ಸಮೀಪದ ಶಾಲೆಗಳಲ್ಲಿ ಕೊಠಡಿಗಳನ್ನು ಒದಗಿಸು ತಿಳಿಸಿದ್ದಾರೆ.
– ವಿರೂಪಾಕ್ಷಯ್ಯ. ಸಿಡಿಪಿಒ ಕುಷ್ಟಗಿ.

– ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next