Advertisement

ಮುಖ್ಯಾಧಿಕಾರಿ-ಅಧ್ಯಕ್ಷರ ಗುದಾಟ: ಜನತೆ ಪರದಾಟ

01:27 PM Dec 08, 2021 | Team Udayavani |

ಆನೇಕಲ್‌: ನಿಯಮ ಬಾಹಿರ ಚಟುವಟಿಕೆಗೆ ಆಸ್ಪದ ನೀಡುವುದಿಲ್ಲ ಎಂಬ ವಾದ ಅತ್ತಿಬೆಲೆ ಪುರಸಭೆ ಮುಖ್ಯಾಧಿಕಾರಿಗಳದ್ದು, ಪುರಸಭೆ ಅಧ್ಯಕ್ಷರು, ಕೌನ್ಸಿಲರ್‌ಗಳಿಗೆ ಗೌರವ ನೀಡುತ್ತಿಲ್ಲ, ವಾರ್ಡ್‌ ಕೆಲಸಗಳು ಆಗುತ್ತಿಲ್ಲ. ಯಾವುದೇ ಪ್ರಗತಿ ಕಾರ್ಯಕ್ಕೆ ಮುಖ್ಯಾಧಿಕಾರಿ ಸ್ಪಂದಿಸುತ್ತಿಲ್ಲ. ಇದು ಆಡಳಿತ ಮಂಡಳಿಯದ್ದು. ಈ ಮಧ್ಯೆ ಜನಸಾಮಾನ್ಯರು ತಮ್ಮ ಕೆಲಸಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಕಳೆದ 3-4 ತಿಂಗಳಿಂದ ಅತ್ತಿಬೆಲೆ ಪುರಸಭೆ ಹತ್ತಾರು ಕಾರ್ಯಕ್ರಮಗಳು ಫೋಟೊಗಳು ಸಾಮಾಜಿಕಜಾಲತಾಣದಲ್ಲಿ ಕಂಡು ಬರುತ್ತಿರುವುದರಿಂದ ಈ ಭಾಗದ ಜನರೂ ಪುರಸಭೆಗೆ ಒಳ್ಳೆಯ ಅಧಿಕಾರಿಬಂದಿದ್ದಾರೆಂಬ ಚರ್ಚೆ ನಡೆಯುತ್ತಿತ್ತು. ಇದನ್ನುಬೆಂಬಲಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿಪುರಸಭೆ ಕೆಲಸಗಳಿಗೆ ಅಭಿನಂದನೆಗಳು ಸಲ್ಲುತ್ತಿದ್ದವು. ಆದರೆ ಪುರಸಭೆ ಒಳಗಿನ ಗೊಂದಲ ಮಾತ್ರ ಸಾರ್ವಜನಿಕರಿಗೆ ತಿಳಿಯುತ್ತಿರಲಿಲ್ಲ.

ಹೊಂದಾಣಿಕೆ ಇಲ್ಲ: ಕಳೆದ ಕೆಲ ದಿನಗಳಿಂದ ಪುರಸಭೆ ಮುಖ್ಯಾಧಿಕಾರಿ ಶ್ವೇತಾಕುಮಾರ್‌ ಮತ್ತು ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಮ್ಮ ಮತ್ತು ಆಡಳಿತರೂಢ ಕೆಲಸ ಸದಸ್ಯರಿಗೂ ಹೊಂದಾಣಿಕೆ ಯಾಗುತ್ತಿಲ್ಲ ಎಂಬುದು ಬಹಿರಂಗವಾಗಿದೆ.

ಪ್ರತಿಷ್ಠೆ ಪ್ರಶ್ನೆ: ಅತ್ತಿಬೆಲೆ ಪುರಸಭೆಯ ಆಡಳಿತರೂಢ ಬಿಜೆಪಿಯ ಕೆಲ ಮುಖಂಡರು ತಮ್ಮ ಸೂಚನೆ ಮೇರೆಗೆ ಪುರಸಭೆ ಚಟುವಟಿಕೆ ನಡೆಯಬೇಕು, ಮುಖ್ಯಾಧಿಕಾರಿಗಳು, ಅಧಿಕಾರಿಗಳು ಸ್ಪಂದಿಸಬೇಕುಎಂಬ ಮನಸ್ಥಿತಿ ಇತ್ತು. ಇದಕ್ಕೆ ತದ್ವಿರುದ್ಧವಾಗಿಮುಖ್ಯಾಧಿಕಾರಿ ತಮ್ಮ ಇತಿಮಿತಿ , ಕಾನೂನು ಚೌಕಟ್ಟಿನಲ್ಲೇ ಆಗಬೇಕು ಎಂಬಂತೆ ಇದ್ದದ್ದು ಪ್ರಭಾವಿಗಳ ಪ್ರತಿಷ್ಠೆಗೆ ಧಕ್ಕೆ ತಂದಿದೆ.

ಎಚ್ಚರಿಕೆ: ಯಾವಾಗ ಪ್ರಭಾವಿ ಪುರಸಭೆ ಸದಸ್ಯರು , ಮುಖಂಡರ ಮಾತಿಗೆ ಬೆಲೆ ಇಲ್ಲವಾಯಿತೋ ಅವರುಹೇಳಿದ ಕೆಲಸ ನಡೆಯದಾಯಿತೋ ಆಗ ಪುರಸಭೆ ಅಧಿಕಾರಿಗಳು ನಾವು ಹೇಳಿದ ಕೆಲಸ ಮಾಡದಿದ್ದರೆ ಬೇರೆಕಡೆಗೆ ವರ್ಗಾವಣೆ ಮಾಡಿಸಬೇಕಾಗುತ್ತದೆ ಎಂಬ ಬ್ಲಾಕ್‌ ಮೇಲ್‌ ತಂತ್ರ, ಎಚ್ಚರಿಕೆ ಮಾತು ಹರಿದಾಡಿತು.

Advertisement

ನಿಯೋಗ: ಯಾವಾಗ ಪುರಸಭೆ ಮುಖ್ಯಾಧಿಕಾರಿ ಶ್ವೇತಾಕುಮಾರ್‌ ಮತ್ತು ಪುರಸಭೆ ಅಧ್ಯಕ್ಷರು, ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಹೆಚ್ಚಾಗಿ, ಪ್ರಗತಿ ಕಾಮಗಾರಿ ಕುಂಟಿತವಾಗ ತೊಡಗಿತೋ ಆಗ ಅನಿವಾರ್ಯವಾಗಿ ಪುರಸಭೆಯ ಎಲ್ಲ ಸದಸ್ಯರು , ಪ್ರಭಾವಿ ಮುಖಂಡರು ಕೇಂದ್ರ ಸಚಿವ ಆನೇಕಲ್‌ಎ.ನಾರಾಯಣಸ್ವಾಮಿ ಅವರ ಬಳಿ ದೂರುಗಳ ಪಟ್ಟಿ ನೀಡಿದರು. ಸ್ಥಳದಲ್ಲೇ ಹಾಜರಿದ್ದ ಮುಖ್ಯಾಧಿಕಾರಿ ಶ್ವೇತಾಕುಮಾರ್‌ ತಮ್ಮ ಕೆಲಸದ ವೈಖರಿ ಬಗ್ಗೆ ಕೇಂದ್ರಸಚಿವರ ಬಳಿ ಮಂಡಿಸಿ ತಮ್ಮನ್ನುಸಮರ್ಥಿಸಿಕೊಂಡರಾದರೂ ಎ.ನಾರಾಯಣಸ್ವಾಮಿ ಅವರು ತಿಳಿವಳಿಕೆ ಹೇಳಿ ಕಳುಹಿಸಿದ್ದರು.

ಮಿತಿ ಮೀರಿದ ಗೊಂದಲ: ಕೇಂದ್ರ ಮಂತ್ರಿಗಳ ಬಳಿ ದೂರು ನೀಡಿದ ಬಳಿಕ ಮುಖ್ಯಾಧಿಕಾರಿ ವರ್ತನೆ ಬದಲಾಯಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದ ಆಡಳಿತ ಮಂಡಳಿಗೆ ಮತ್ತಷ್ಟು ಶಾಕ್‌ ಆಗಿತ್ತು. ನನ್ನದೇನೂತಪ್ಪಿಲ್ಲದಿದ್ದರೂ ವಿನಾಕಾರಣ ಕೇಂದ್ರ ಸಚಿವರ ಬಳಿ ಕರೆಸಿ ಆರೋಪ ಮಾಡಿದ್ದಾರೆ. ಇನ್ನು ಮುಂದೆ ಕೇವಲ ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದುನಿರ್ಧರಿಸಿದ್ದು ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು.

ನೀತಿ ಸಂಹಿತೆ ಗೊಂದಲ: ಮೊದಲೇ ಆಡಳಿತರೂಢ ಬಿಜೆಪಿ ಸದಸ್ಯರಿಗೂ ಮುಖ್ಯಾಧಿಕಾರಿಗೂ ಭಿನ್ನಾಭಿ ಪ್ರಾಯವಿದೆ. ಇಂತಿರುವಾಗ ಅತ್ತಿಬೆಲೆಯಲ್ಲಿ ಸಿಎಂ

ಬಸವರಾಜ ಬೊಮ್ಮಾಯಿ ಪರಿಷತ್‌ ಚುನಾವಣೆ ಪ್ರಚಾರ ಸಭೆಗೆ ಆಗಮಿಸಿದ್ದರು. ಈ ಸಮಾರಂಭಕ್ಕೆ ಸ್ವಾಗತ ಕೋರುವ ಬ್ಯಾನರ್‌, ಫ್ಲಾಗ್‌ ಹಾಕಿದ್ದರು. ಚುನಾವಣೆ ನೀತಿ ಸಂಹಿತೆಯಂತೆ ಬ್ಯಾನರ್‌, ಫ್ಲಾಗ್‌ಬಳಸುವಂತಿಲ್ಲ. ಇದೇ ನಿಯಮವನ್ನು ಮುಖ್ಯಾಧಿಕಾರಿಪಾಲನೆ ಮಾಡಬೇಕು. ಅದಕ್ಕಾಗಿ ತೆಗೆಸಲುಮುಂದಾಗಿದ್ದರು. ಆಗ ಬಿಜೆಪಿ ಮುಖಂಡರ ಕೋಪಮತ್ತಷ್ಟು ಹೆಚ್ಚಾಗಿ ಮುಖ್ಯಾಧಿಕಾರಿಗೆ ಬಿಜೆಪಿ ಶಾಸಕರು, ಹಿರಿಯ ಮುಖಂಡರಿಂದ ಕರೆ ಮಾಡಿಸಿ ಎಚ್ಚರಿಕೆಕೊಡಿಸಿದ್ದರು ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ. ಮತ್ತೂಂದು ಕಡೆ ಕಾಂಗ್ರೆಸ್‌ನವರು ಸಾಮಾಜಿಕ ಜಾಲ ತಾಣಗಳಲ್ಲಿ ಬಿಜೆಪಿ ಬಾವುಟ, ಬ್ಯಾನರ್‌ ಪೋಟೊ ಹಾಕಿ ಪುರಸಭೆ ಮುಖ್ಯಾಧಿಕಾರಿಗಳು ಏಕೆ ಮೌನವಾಗಿದ್ದಾರೆ. ಇವರ ಕರ್ತವ್ಯ ಲೋಪದ ಬಗ್ಗೆ ಚುನಾವಣೆ ಆಯೋಗಕ್ಕೆದೂರು ನೀಡುವುದಾಗಿ ಪ್ರಚಾರ ಮಾಡ ತೊಡಗಿದರು.ಕಾಂಗ್ರೆಸ್‌ ವಲಯದಿಂದಲೂ ಕರೆ ಬಂದು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದೆ ಎಂಬ ಮಾತು ಕೇಳಿ ಬಂದಿವೆ.

ನನ್ನ ಮಾತಿಗೂ ಬೆಲೆ ಕೊಡಲ್ಲ: ಜಯಲಕ್ಷ್ಮಮ್ಮ  :

ಮುಖ್ಯಾಧಿಕಾರಿ ಶ್ವೇತಾಕುಮರ್‌ ಬಂದಾಗಿನಿಂದ ನನಗಾಗಲಿ, ಉಪಾಧ್ಯಕ್ಷರಿಗಾಗಲಿ, ಪುರಸಭೆಸದಸ್ಯರ ಮಾತಿಗೆ ಬೆಲೆ ಕೊಡುವುದಿಲ್ಲ, ನಮ್ಮ ಸಲಹೆ ಸೂಚನೆ ಪರಿಗಣಿಸುವುದಿಲ್ಲ, ಖಾತೆ ವಿಚಾರದಲ್ಲಿ ನನ್ನ ಮಾತಿಗೂ ಬೆಲೆ ಕೊಡುವುದಿಲ್ಲ. ಹಾಗಾಗಿ ನಾವು ಅವರ ವಿರುದ್ಧ ಸಿಎಂಗೆ ದೂರು ನೀಡಿದ್ದೇವೆಂದು ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಮ್ಮ “ಉದಯವಾಣಿ’ಗೆ ತಿಳಿಸಿದರು.

ಮುಖ್ಯಮಂತ್ರಿಗೆ ದೂರು: ಗೊಂದಲದಲ್ಲಿ ಅಧಿಕಾರಿಗಳು :

ಸಭೆಗೆ ಬರುತ್ತಿರುವುದು ಮುಖ್ಯಮಂತ್ರಿಗಳು, ಅವರ ಫೋಟೊ ಇರುವ ಬ್ಯಾನರ್‌ ತೆರವು ಮಾಡಿಸುವುದು ಅಷ್ಟು ಸುಲಭದ ಕೆಲಸವಲ್ಲ, ಇನ್ನು ಅದನ್ನು ಹಾಗೆ ಬಿಟ್ಟರೆ ವಿರೋಧ ಪಕ್ಷದವರ ಫೋನ್‌ ಕರೆಗಳು. ಈ ಇಬ್ಬರ ಮಧ್ಯೆ ಅಧಿಕಾರಿಗಳು ಹಿಂಸೆ ಪಡಬೇಕಾಯಿತು. ಕಳೆದ ಹಲವು ತಿಂಗಳಿನಿಂದ ನಡೆಯುತ್ತಿದ್ದ ಶೀಥಲ ಸಮರ ಮತ್ತು ಮುಖ್ಯಮಂತ್ರಿಗಳ ಕಾರ್ಯಕ್ರಮದ ನೀತಿಸಂಹಿತೆ ಜಾರಿ ವಿಚಾರದಲ್ಲಿ ಕೋಪಗೊಂಡ ಬಿಜೆಪಿ ಮುಖಂಡರು, ಪುರಸಭೆ ಅಧ್ಯಕ್ಷರ ಮುಖಾಂತರ ಮುಖ್ಯಾಧಿಕಾರಿ ಶ್ವೇತಕುಮಾರ್‌ ಅವರ ವಿರುದ್ಧ ಲಿಖೀತ ದೂರು ನೀಡಿದರು.

ಕಾನೂನು ಚೌಕಟ್ಟಿನಲ್ಲಿ ಕೆಲಸ: ಮುಖ್ಯಾಧಿಕಾರಿ : ಪುರಸಭೆ ಆಡಳಿತ ಮಂಡಳಿ ಮುಖ್ಯಮಂತ್ರಿಗಳಿಗೆ ನೀಡಿರುವ ದೂರಿನ ಬಗ್ಗೆಯಾಗಲಿ, ಅಧ್ಯಕ್ಷರ ಆರೋಪಗಳಿಗಾಗಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪುರಸಭೆ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿದಿದೆ. ನಾನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿರುವೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ವೇತಕುಮಾರ್‌ ತಿಳಿಸಿದ್ದಾರೆ.

ಮಂಜುನಾಥ ಎನ್‌.ಬನ್ನೇರುಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next