Advertisement
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 2020ರ ಶಾರ್ವರಿನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯನ್ನು ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ನಡೆಯಲಿದ್ದು ಈ ಬಗ್ಗೆ ಬದಿಯಡ್ಕ ಸುಂದರ ಆಚಾರ್ಯ ಅವರ ನಿವಾಸದಲ್ಲಿ ನಡೆದ ಬದಿಯಡ್ಕ ಪ್ರಾಂತ್ಯ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಸಮಿತಿ ರಚನೆ
ಇದೇ ಸಂದರ್ಭದಲ್ಲಿ ಬದಿಯಡ್ಕ ಪ್ರಾಂತ್ಯ ಚಾತುರ್ಮಾಸ್ಯ ಸಮಿತಿ ಯನ್ನು ರೂಪೀಕರಿಸಲಾಯಿತು. ಸಮಿತಿಯ ಉಸ್ತುವಾರಿ ಯಾಗಿ ಎಂ. ಪುರುಷೋತ್ತಮ ಆಚಾರ್ಯ ನೆಕ್ರಾಜೆ, ಅಧ್ಯಕ್ಷರಾಗಿ ಸುಂದರ ಆಚಾರ್ಯ ಬದಿಯಡ್ಕ, ಗೌರವ ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಮೂಕಂಪಾರೆ, ಏತಡ್ಕ ರಾಮಚಂದ್ರ ಆಚಾರ್ಯ ಬದಿಯಡ್ಕ ಮತ್ತು ಪ್ರಮೋದ್ ಆಚಾರ್ಯ ಬದಿಯಡ್ಕ, ಉಪಾಧ್ಯಕ್ಷರಾಗಿ ಪುಷ್ಪರಾಜ್ ಆಚಾರ್ಯ ಬದಿಯಡ್ಕ, ಪುಂಡಲೀಕ ಆಚಾರ್ಯ ಬದಿಯಡ್ಕ ಮತ್ತು ಪ್ರಫುಲ್ಲ ಪುಂಡಲೀಕ ಆಚಾರ್ಯ ಬದಿಯಡ್ಕ, ಕಾರ್ಯದರ್ಶಿಯಾಗಿ ಸತೀಶ ಆಚಾರ್ಯ ಬದಿಯಡ್ಕ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ ಆಚಾರ್ಯ ನೆಕ್ರಾಜೆ, ಯತಿರಾಜ್ ಆಚಾರ್ಯ ನೆಕ್ರಾಜೆ, ದಿನೇಶ್ ಆಚಾರ್ಯ ಬದಿಯಡ್ಕ, ವೇಣುಗೋಪಾಲ ಆಚಾರ್ಯ ನೆಕ್ರಾಜೆ, ಮಮತಾ ಸುಂದರ ಆಚಾರ್ಯ ಬದಿಯಡ್ಕ ಮತ್ತು ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಆಚಾರ್ಯ ನೆಕ್ರಾಜೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯ ಕಾರ್ಯಕಾರಿ ಸದಸ್ಯರಾಗಿ ಶಿವಕುಮಾರ ಆಚಾರ್ಯ ಬದಿಯಡ್ಕ, ದಿವಾಕರ ಆಚಾರ್ಯ ಬದಿಯಡ್ಕ, ಭುವನೇಶ ಆಚಾರ್ಯ ಬದಿಯಡ್ಕ, ರಾಜೇಶ ಆಚಾರ್ಯ ಬದಿಯಡ್ಕ, ಬಾಲಕೃಷ್ಣ ಆಚಾರ್ಯ ಬದಿಯಡ್ಕ, ಸುಧೀಶ ಆಚಾರ್ಯ ಬದಿಯಡ್ಕ, ಯಶೋದ ಶಿವಕುಮಾರ್ ಆಚಾರ್ಯ ಬದಿಯಡ್ಕ, ಪುಷ್ಪಲತ ಪುರುಷೋತ್ತಮ ಆಚಾರ್ಯ ಬದಿಯಡ್ಕ, ದಯಾಮಣಿ ರಾಮಚಂದ್ರ ಆಚಾರ್ಯ ಬದಿಯಡ್ಕ, ಗೀತಾ ಯಾದವ ಆಚಾರ್ಯ ಏತಡ್ಕ, ಹರಿಣಿ ಸತೀಶ ಆಚಾರ್ಯ ಬದಿಯಡ್ಕ, ಮನೋಜ್ ಆಚಾರ್ಯ ಬದಿಯಡ್ಕ, ರೇಣುಕ ಸುಬ್ರಹ್ಮಣ್ಯ ಆಚಾರ್ಯ ಬದಿಯಡ್ಕ ಮತ್ತು ಅರುಣ್ ಕುಮಾರ್ ಆಚಾರ್ಯ ಬದಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಧೂರು ಮಠದ ಕೋಶಾಧಿಕಾರಿ ಕೆ. ನಾರಾಯಣ ಆಚಾರ್ಯ ಕಂಬಾರು, ಕಾರ್ಯದರ್ಶಿ ತಾರಾನಾಥ ಆಚಾರ್ಯ ಮಧೂರು, ಯುವಕ ಸಂಘದ ಅಧ್ಯಕ್ಷ ಮಹೇಶ್ ಆಚಾರ್ಯ ಮಧೂರು ಮಾತನಾಡಿದರು.ಭಜನ ಸಂಘ, ಮಹಿಳಾ ಸಂಘಗಳ ಸದಸ್ಯರು, ಸಹಿತ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಯನ್ನು ನೀಡಿದರು. ಎಂ.ಪುರುಷೋತ್ತಮ ಆಚಾರ್ಯ ನೆಕ್ರಾಜೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಆಚಾರ್ಯ ನೆಕ್ರಾಜೆ ವಂದಿಸಿದರು. ಸುರೇಶ ಆಚಾರ್ಯ ನೆಕ್ರಾಜೆ ಕಾರ್ಯಕ್ರಮ ನಿರ್ವಹಿಸಿದರು. ವಂಶಿಕಾ ಆಚಾರ್ಯ ಬದಿಯಡ್ಕ ಪ್ರಾರ್ಥಿಸಿದರು.