Advertisement

ಆ್ಯಂಡಿ ಮರ್ರೆ, ಮೋ ಫ‌ರಾಹ್‌ಗೆ ನೈಟ್‌ಹುಡ್‌ ಗೌರವ

03:45 AM Jan 02, 2017 | Team Udayavani |

ಲಂಡನ್‌: ಹಾಲಿ ವಿಶ್ವ ನಂ.1 ಟೆನಿಸ್‌ ಆಟಗಾರ ಇಂಗ್ಲೆಂಡ್‌ನ‌ ಆ್ಯಂಡಿ ಮರ್ರೆ ಮತ್ತು 4 ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಮೋ ಫ‌ರಾಹ್‌ಗೆ ಹೊಸ ವರ್ಷದಲ್ಲಿ ಬ್ರಿಟಿಷ್‌ ಸರ್ಕಾರ ನೈಟ್‌ಹುಡ್‌ ಪ್ರಶಸ್ತಿ ನೀಡಿ ಗೌರವಿಸಿದೆ. ಆ್ಯಂಡಿ ಮರ್ರೆ ಪ್ರಸಕ್ತ ವರ್ಷದಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದಾರೆ. 

Advertisement

ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಹೀಗೆ ಭರ್ಜರಿ ಪ್ರದರ್ಶನದ ಮೂಲಕ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಶ್ರೇಯಾಂಕ ಪಡೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ನೀಡಿದ ಸೇವೆಯನ್ನು ಪರಿಗಣಿಸಿ ಇಂಗ್ಲೆಂಡ್‌ ಸರ್ಕಾರ ಉನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮೋ ಫ‌ರಾಹ್‌ ರಿಯೋ ಒಲಿಂಪಿಕ್ಸ್‌ನಲ್ಲಿ ನಡೆದ 5000 ಮತ್ತು 10000 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲೂ 2 ಚಿನ್ನದ ಪದಕ ಗೆದ್ದಿದ್ದರು. ಟ್ರಾÂಕ್‌ ಮತ್ತು ಫೀಲ್ಡ್‌ನಲ್ಲಿ 4 ಚಿನ್ನದ ಪದಕ ಗೆದ್ದಿ ಇಂಗ್ಲೆಂಡ್‌ನ‌ ಮೊದಲ ಅಥ್ಲೀಟ್‌ ಆಗಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ನೈಡ್‌ಹುಡ್‌ ಪ್ರಶಸ್ತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next