Advertisement

ಕಳಪೆ ಫಾರ್ಮ್ ನಡುವೆಯೂ ನಂ.1 ಸ್ಥಾನ ಕಾಯ್ದುಕೊಂಡ ಮರ್ರೆ

12:15 PM Aug 08, 2017 | Team Udayavani |

ಮ್ಯಾಡ್ರಿಡ್‌: ಕಳಪೆ ಫಾರ್ಮ್ ನಡುವೆಯೂ ಬ್ರಿಟನ್ನಿನ ಆ್ಯಂಡಿ ಮರ್ರೆ ನೂತನ ಎಟಿಪಿ ಟೆನಿಸ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮರ್ರೆ ಖಾತೆಯಲ್ಲೀಗ 7,750 ಅಂಕಗಳಿವೆ.

Advertisement

ಗಾಯಾಳಾಗಿರುವ ಮರ್ರೆ ಸದ್ಯ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಇದ್ದಾರೆ. ಹೀಗಾಗಿ ದ್ವಿತೀಯ ಸ್ಥಾನಿ ರಫೆಲ್‌ ನಡಾಲ್‌ 2014ರ ಬಳಿಕ ಮೊದಲ ಸಲ ನಂ.1 ಸ್ಥಾನ ಅಲಂಕರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ “ರಫಾ’ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಅಷ್ಟೇ ಅಲ್ಲ, ಪುರುಷರ ರ್‍ಯಾಂಕಿಂಗ್‌ನಲ್ಲಿ ಯಾವುದೇ ಮಹತ್ವದ ಬದಲಾವಣೆ ಸಂಭವಿಸಿಲ್ಲ.

ಆದರೆ ಮುಂದಿನ ಎಟಿಪಿ ರ್‍ಯಾಂಕಿಂಗ್‌ ವೇಳೆ ಪರಿವರ್ತನೆಯ ಸಾಧ್ಯತೆಯೊಂದು ಗೋಚರಿಸುತ್ತಿದೆ. ಇದೇ ವಾರ ಮಾಂಟ್ರಿಯಲ್‌ನಲ್ಲಿ ಆರಂಭವಾಗಲಿರುವ ಕೂಪ್‌ ರೋಜರ್ ಟೆನಿಸ್‌ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ ತಲುಪಿದರೆ ನಡಾಲ್‌ ನಂಬರ್‌ ವನ್‌ ಟೆನಿಸಿಗನಾಗಿ ಮೂಡಿಬರಲಿದ್ದಾರೆ.

ಟಾಪ್‌-10 ಟೆನಿಸಿಗರು: 1. ಆ್ಯಂಡಿ ಮರ್ರೆ (7,750), 2. ರಫೆಲ್‌ ನಡಾಲ್‌ (7,465), 3. ರೋಜರ್‌ ಫೆಡರರ್‌ (6,545), 4. ಸ್ಟಾನಿಸ್ಲಾಸ್‌ ವಾವ್ರಿಂಕ (5,780), 5. ನೊವಾಕ್‌ ಜೊಕೋವಿಕ್‌ (5,325), 6. ಮರಿನ್‌ ಸಿಲಿಕ್‌ (5,155), 7. ಡೊಮಿನಿಕ್‌ ಥೀಮ್‌ (4,065), 8. ಅಲೆಕ್ಸಾಂಡರ್‌ ಜ್ವೆರೇವ್‌ (3,560), 9. ಕೀ ನಿಶಿಕೊರಿ (3,320), 10. ಮಿಲೋಸ್‌ ರಾನಿಕ್‌ (3,220). 

Advertisement

Udayavani is now on Telegram. Click here to join our channel and stay updated with the latest news.

Next