Advertisement

ಲಕ್ನೋ ಫ್ರಾಂಚೈಸಿಗೆ ಆ್ಯಂಡಿ ಫ್ಲವರ್‌ ಕೋಚ್‌

11:09 PM Dec 17, 2021 | Team Udayavani |

ಕೋಲ್ಕತಾ: ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ತಂಡಗಳಿಗೆ ಕೋಚಿಂಗ್‌ ಮಾಡಿದ ಅನುಭವ ಹೊಂದಿರುವ ಜಿಂಬಾಬ್ವೆ ಮಾಜಿ ನಾಯಕ ಆ್ಯಂಡಿ ಫ್ಲವರ್‌ ಮುಂದಿನ ಐಪಿಎಲ್‌ನಲ್ಲಿ ನೂತನ ಲಕ್ನೋ ಫ್ರಾಂಚೈಸಿ ತಂಡಕ್ಕೆ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

Advertisement

ಆ್ಯಂಡಿ ಫ್ಲವರ್‌ ಇತ್ತೀಚೆಗಷ್ಟೇ ಪಂಜಾಬ್‌ ಕಿಂಗ್ಸ್‌ ತಂಡದ ಸಹಾಯಕ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮೊದಲ ಬಾರಿಗೆ ಐಪಿಎಲ್‌ ತಂಡವೊಂದರ ಮುಖ್ಯ ಕೋಚ್‌ ಹುದ್ದೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

“ಕೋಚಿಂಗ್‌ ಹುದ್ದೆಯಲ್ಲಿ ಆ್ಯಂಡಿ ಫ್ಲವರ್‌ ದೀರ್ಘ‌ ಕಾಲದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಶ್ವದ ವಿವಿಧ ತಂಡಗಳಿಗೆ ತರಬೇತಿ ನೀಡಿದ ಧಾರಾಳ ಅನುಭವವೂ ಅವರದಾಗಿದೆ.

ಇದನ್ನೂ ಓದಿ:ಒಮಿಕ್ರಾನ್‌ ಆತಂಕ ಇಲ್ಲ: ಸಚಿವ ಡಾ.ಕೆ.ಸುಧಾಕರ್‌

ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಅವರಿಗೆ ಉತ್ತಮ ಅರಿವಿದೆ. ಹೀಗಾಗಿ ಫ್ಲವರ್ ಲಕ್ನೋ ತಂಡವನ್ನು ಉತ್ತಮವಾಗಿ ಮುನ್ನಡೆಸುವ ಆತ್ಮವಿಶ್ವಾಸ ನಮ್ಮದು’ ಎಂದು ಲಕ್ನೋ ಪ್ರಾಂಚೈಸಿ ತಿಳಿಸಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next