Advertisement

ಅಂಧ ಪೋಷಕರಿಗಾಗಿ ಚಾಲಕನಾದ ಪೋರ!

12:13 AM Sep 05, 2021 | Team Udayavani |

ಅಪ್ಪ ಅಮ್ಮ ಅಂಧರು. ಐವರಿರುವ ಕುಟುಂಬ ನಡೆಸಲು ಪರದಾಡುತ್ತಿದ್ದ ಅವರನ್ನು ಕಂಡ ಮನೆಯ ಹಿರಿ ಮಗನಾದ 8 ವರ್ಷದ ಬಾಲಕ ಇ-ಆಟೋಗಳನ್ನು ಚಲಾಯಿಸಿ ಸಂಪಾದಿಸುತ್ತಿದ್ದಾನೆ!

Advertisement

ಇಂತಹ ಮನಕಲಕುವ ಕಥೆ ಆಂಧ್ರಪ್ರದೇಶದ ಚಿತ್ತೋರ್‌ ಜಿಲ್ಲೆಯ ಚಂದ್ರಗಿರಿ ತಾಲೂಕಿನ ಗಂಗುಡಪಲ್ಲಿ ಗ್ರಾಮದಲ್ಲಿ ನಡೆದಿದೆ. 3ನೇ ತರಗತಿಯಲ್ಲಿರುವ ರಾಜಾ ಗೋಪಾಲ ರೆಡ್ಡಿ ವಿದ್ಯಾಭ್ಯಾಸದ ಜತೆ ಬಿಡುವಿನ ಸಮಯದಲ್ಲಿ ಆಟೋ ಓಡಿಸಿ ಸಂಪಾದಿಸುತ್ತಿದ್ದಾನೆ.

ಅಪ್ಪ ಅಮ್ಮ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದು, ಅಲ್ಲಿಗೆ ಅವರನ್ನು ಬಿಟ್ಟು ಬರುವುದು ಮತ್ತು ಕರೆದುಕೊಂಡು ಬರುವ ಜವಾಬ್ದಾರಿಯೂ ಅವನದೇ. ಪುಟಾಣಿ ಬಾಲಕನ ಈ ಕರುಣಾಜನಕ ಕಥೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next