Advertisement

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

08:03 PM May 25, 2024 | Team Udayavani |

ನವದೆಹಲಿ: ಇದೇ ಮೊದಲ ಬಾರಿಗೆ ಭಾರತದ ನಟಿಯೊಬ್ಬರು ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Advertisement

77ನೇ ಕ್ಯಾನಸ್‌ ಫಿಲಂ ಫೆಸ್ಟಿವಲ್‌ನಲ್ಲಿ ನಟಿ ಅನಸೂಯ ಸೇನ್‌ಗುಪ್ತಾ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

“ದ ಶೇಮ್‌ಲೆಸ್‌’ ಸಿನಿಮಾಗಾಗಿ ಸೇನ್‌ಗುಪ್ತಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೇಶ್ಯಾಗೃಹದಿಂದ ಪೊಲೀಸ್‌ ಅಧಿಕಾರಿಯನ್ನು ಕೊಲೆ ಮಾಡಿ ಓಡಿಹೋಗುವ ಹೆಣ್ಣುಮಗಳ ಜೀವನ ಆಧರಿಸಿದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಅಲ್ಲದೇ 48 ವರ್ಷಗಳ ಬಳಿಕ ಶ್ಯಾಮ್‌ ಬೆನಗಲ್‌ ಅವರ “ಮಂಥನ್‌’ ಈ ಬಾರಿ ಚಿತ್ರೋತ್ಸವದಲ್ಲಿ ವಿಶೇಷ ಪ್ರದರ್ಶನ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next