ಅನನಾಸು: 7 ಹೋಳುಗಳು
ತೆಂಗಿನತುರಿ: 2 ಕಪ್
ಸಕ್ಕರೆ: ಒಂದು ಕಪ್
ತುಪ್ಪ: ಅರ್ಧ ಚಮ ಚ
ಕೇಸರಿ: ಸ್ವಲ್ಪ
ಹಸುರು ಬಣ್ಣ: ಸ್ವಲ್ಪ
Advertisement
ಮಾಡುವ ವಿಧಾನ: ಮೊದಲು ಅನನಾಸು ಹೋಳುಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬಿಸಿ ಮಾಡಬೇಕು.ಅದಕ್ಕೆ ಸಕ್ಕರೆಯನ್ನು ಸೇರಿಸಿ ಹದವಾದ ಬಿಸಿಯಲ್ಲಿ ಕುದಿಸಬೇಕು. ಗಟ್ಟಿಯಾಗುತ್ತಾ ಬರುವಾಗ ಕೇಸರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ 10- 12 ನಿಮಿಷಗಳವರೆಗೆ ಬೇಯಿಸಬೇಕು. ಅದು ಪೇಸ್ಟ್‌ನ ರೂಪಕ್ಕೆ ಬಂದಾಗ ಅದಕ್ಕೆ ತುರಿದ ತೆಂಗಿನಕಾಯಿ ಹಾಗೂ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಗ್ಯಾಸ್ ಆಫ್ಮಾಡಿ ತಣಿಯಲು ಬಿಡಬೇಕು. ಆರಿದ ಬಳಿಕ ಆ ಹಿಟ್ಟನ್ನು ಕೈಯಲ್ಲಿ ತೆಗೆದುಕೊಂಡು ಉರುಟಾದ ಆಕೃತಿ ಮಾಡಿ ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಹಸುರು ಬಣ್ಣದ ಫುಡ್‌ಕಲರ್ ಹಾಗೂ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಬೇಕು. ಆಗ ಅನನಾಸು ಬರ್ಫಿ ಸವಿಯಲು ಸಿದ್ಧವಾಗುತ್ತದೆ.
ಜೆಪ್ಪು ಮಜಿಲ