ಶಿರಸಿ: ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಬಹುಕಾಲದಿಂದ ಬೇಡಿಕೆ ಇದ್ದ ರೈಲ್ವೆ ನಿಲುಗಡೆ ಮಾಡಲು ರೈಲ್ವೆ ಇಲಾಖೆ ಅನುಮತಿ ನೀಡಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.
ಮಾ.9 ರಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕೊಚುವೆಲಿ – ಮುಂಬೈ ರೈಲ್ವೆ (12201/02) ಹಾಗೂ ಮಾರ್ಚ್ 10 ರಿಂದ ತಿರುವಂತನಪುರ – ಪನವೆಲ್ ನೇತ್ರಾವತಿ ಎಕ್ಷಪ್ರೆಸ್ ರೈಲ್ವೆ (16345/46) ರೈಲು ಭಟ್ಕಳದಲ್ಲಿ ನಿಲುಗಡೆಯಾಗಲಿದೆ.
ಜನರ ಬಹು ದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆಯು ಈಡೇರಿಸಿದೆ. ಈ ಹಿಂದೆ ಜಿಲ್ಲೆಯ ಕರಾವಳಿ ಭಾಗದ ಜನರ ಅಪೇಕ್ಷೆಯ ಮೇರೆಗೆ ರೈಲ್ವೆ ನಿಲುಗಡೆಗೆ ಕೋರಿ ರೈಲ್ವೆ ಇಲಾಖೆಗೆ ಪತ್ರ ಬರೆದು ವಿನಂತಿಸಿದ್ದೆವು.ಇದೀಗ ಜಿಲ್ಲೆಯ ಕರಾವಳಿ ಭಾಗದ ಜನರು ಉತ್ತರ ಭಾರತ ಹಾಗೂ ಕೇರಳಕ್ಕೆ ಪ್ರಯಾಣಿಸಲು ಈ ರೈಲುಗಳ ನಿಲುಗಡೆಯಿಂದ ತುಂಬಾ ಅನುಕೂಲವಾಗಲಿದೆ. ಬಹಳ ಜನರ ಬೇಡಿಕೆಯಾದ ಹಿಸ್ಸಾರ್-ಕೊಯಿಮತ್ತೂರು ರೈಲ್ವೆ (22475/76) ಈ ರೈಲಿಗೆ ಸದ್ಯದಲ್ಲಿ ಕುಮಟಾದಲ್ಲಿ ನಿಲುಗಡೆಯಾಗಲಿದೆ ಎಂದು ಸಂಸದರ ಕಾರ್ಯಾಲಯದ ಪ್ರಕಟನೆಯಲ್ಲಿ ಸುರೇಶ ಶೆಟ್ಟಿ ತಿಳಿಸಿದ್ದಾರೆ.