ಕುಂಬಳೆ: ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಶ್ರೀ ಅನಂತಪುರದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ (ಬಬಿಯಾ – 3) ಇದೇ ಮೊದಲ ಬಾರಿಗೆ ಶುಕ್ರವಾರ ಸಂಜೆ ಕ್ಷೇತ್ರ ಪ್ರಾಂಗಣ ಏರುವ ಮೂಲಕ ತನ್ನ ಪೂರ್ಣ ದರ್ಶನ ತೋರಿದೆ.
ಸುಮಾರು 80 ವರ್ಷಗಳಿಂದ ಕ್ಷೇತ್ರದ ಕೊಳದಲ್ಲಿ ನೆಲೆಸಿದ್ದ ಮೊಸಳೆಯು 2022ರ ಅಕ್ಟೋಬರ್ 9ರಂದು ರಾತ್ರಿ ಈ ಹಿಂದೆ ಇದ್ದ ಮೊಸಳೆ (ಬಬಿಯಾ) ಮೃತಪಟ್ಟಿತ್ತು. ಅದರ ಸಾವಿನ ಬಳಿಕ ಸರಿಯಾಗಿ ಒಂದು ವರ್ಷ ಕಳೆದ ಅನಂದ ಇನ್ನೊಂದು ಮೊಸಳೆ ಮರಿ ಕೊಳದಲ್ಲಿ ಕಾಣಿಸಿಕೊಂಡಿತ್ತು. ಆದರೆ ಅದರ ಪೂರ್ಣ ರೂಪವನ್ನು ಕಂಡವರಿರಲಿಲ್ಲ.
ಜೂ. 14ರಂದು ಗರ್ಭಗುಡಿಯ ಎದುರಿನ ಹಾಸು ಕಲ್ಲಿನ ಮೇಲೆ ವಿಶ್ರಾಂತಿ ಪಡೆಯುತ್ತಿತ್ತು. ಈ ಹೊತ್ತಿಗೆ ಕ್ಷೇತ್ರದ ನಡೆ ಮುಚ್ಚಿತ್ತು. ಸಂಜೆ ಆಗಮಿಸಿದ ಅರ್ಚಕರು ಇದನ್ನು ಗಮನಿಸಿ ಅಲ್ಲಿನ ದೃಶ್ಯವನ್ನು ಚಿತ್ರೀಕರಿಸಿಕೊಂಡು ಹಂಚಿಕೊಂಡಿದ್ದಾರೆ.
ಇದು ದೇವರ ಮೊಸಳೆ ಎಂದೇ ಖ್ಯಾತವಾಗಿದ್ದು, ಒಂದು ಮೊಸಳೆ ಇಲ್ಲವಾದಾಗ ಮತ್ತೊಂದು ಬರುತ್ತದೆ ಎಂಬುದು ಭಕ್ತರ ನಂಬಿಕೆ.