Advertisement
ನಟ ರಕ್ಷಿತ್ ಶೆಟ್ಟಿ ಹೊರತರುತ್ತಿರುವ “ಆಬ್ರಕಡಾಬ್ರ’ ಚಲನಚಿತ್ರದ ಚಿತ್ರೀಕರಣಕ್ಕೆ ಉಡುಪಿಗೆ ಆಗಮಿಸಿ ರುವ ಅವರು “ಉದಯವಾಣಿ’ ಪ್ರತಿನಿಧಿ ಜತೆ ಮಾತುಕತೆ ನಡೆಸಿದರು. ಅವರ ಅಭಿಪ್ರಾಯಗಳು ಹೀಗಿವೆ:
Related Articles
Advertisement
51 ಬೈಗುಳುಗಳ ಪಟ್ಟಿ :
ಕಾಶ್ಮೀರದ 370ನೆಯ ವಿಧಿಯನ್ನು ರದ್ದುಗೊಳಿಸಿರುವುದು, ಚೀನಕ್ಕೆ ಕೊಟ್ಟ ದಿಟ್ಟ ಉತ್ತರ, ತ್ರಿವಳಿ ತಲಾಖ್ ಇತ್ಯಾದಿ ವಿಷಯಗಳಲ್ಲಿ ಪ್ರಧಾನಿಯವರ ನಡೆ ಉತ್ತಮವಾಗಿದೆ. ಇವರು ಹಿಂದಿನ
ವರಂತೆ ಕಾಲ ತಳ್ಳುತ್ತ ಹೋಗಲಿಲ್ಲ. ನಿರ್ಣಾಯಕ ಹೆಜ್ಜೆಗಳನ್ನು ಇರಿಸಿ
ದ್ದಾರೆ. ಆದರೆ ಪ್ರತಿನಿತ್ಯ ಟೀಕೆಗೋಸ್ಕ ರವೇ ಟೀಕೆ ಮಾಡುವುದು ಸರಿಯಲ್ಲ.
ತಾತ್ವಿಕವಾಗಿ ಟೀಕಿಸಬಹುದು. “ನಾಲಾಯಕ್’, “ಚೋರ್ ಹೈ’ ಎಂಬಂತಹ
ಸುಶಿಕ್ಷಿತರು ಮಾತನಾಡಬಾರದ 51 ಬೈಗುಳುಗಳ ಪಟ್ಟಿಯನ್ನು ಮಾಡಲಾಗಿದೆ. ಅವರ ತಾಯಿಯನ್ನೂ ಟೀಕಾಕಾರರು ಬಿಡಲಿಲ್ಲ. ಆದರೂ ಮೋದಿ ದೇಶವನ್ನು ಮುನ್ನಡೆಸುವ ಭರವಸೆ ಇದೆ.
300 ಚಿತ್ರಗಳ ಸರದಾರ :
ಇದುವರೆಗೆ ಅನಂತನಾಗ್ ಸುಮಾರು 300 ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಪ್ರಸ್ತುತ ನಟ ರಕ್ಷಿತ್ ಶೆಟ್ಟಿಯವರ ನಿರ್ಮಾಪಕತ್ವದ, ಶಿಶಿರ್ ರಾಜಮೋಹನ್ ಅವರ ನಿರ್ದೇಶನದ “ಆಬ್ರಕಡಾಬ್ರ’ ಚಿತ್ರೀ ಕರಣಕ್ಕಾಗಿ ಶುಕ್ರವಾರ ಉಡುಪಿಗೆ ಆಗಮಿಸಿದ್ದಾರೆ. 15 ದಿನಗಳ ಕಾಲ ಮಣಿಪಾಲ ದಲ್ಲಿದ್ದು ಉಡುಪಿ ಆಸುಪಾಸಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಭಾಗವಹಿಸುವರು.
ಬಾಲ್ಯ ಕಂಡ ಉಡುಪಿಯಲ್ಲಿ 74ನೇ ಹುಟ್ಟುಹಬ್ಬ :
1948ರ ಸೆಪ್ಟಂಬರ್ 4ರಂದು ಜನಿಸಿದ ಅನಂತನಾಗ್ 74ನೇ ಜನ್ಮದಿನವನ್ನು ಬಾಲ್ಯದಲ್ಲಿ ಎರಡು ವರ್ಷವಿದ್ದ ಉಡುಪಿಯಲ್ಲಿ ಆಚರಿಸಿದರು.
ಉಡುಪಿಯಲ್ಲಿ ಜನಿಸಿದ್ದ ಶಂಕರನಾಗ್ ಅನಂತನಾಗ್ ತಂದೆ ಸದಾನಂದ ಭವಾನಿಶಂಕರ್ ಮತ್ತು ತಾಯಿ ಆನಂದಿಯವರು ಕಾಂಞಂಗಾಡ್‌ನ ಆನಂದಾಶ್ರಮದ ವಾಸಿಗಳಾಗಿದ್ದರು. ಒಮ್ಮೆ ಚಿತ್ರಾಪುರ ಮಠದ ಸ್ವಾಮೀಜಿಯವರು ಆನಂದಾಶ್ರಮಕ್ಕೆ ಬಂದಾಗ ಸದಾನಂದರಂತಹ ಒಬ್ಬರು ಮಠದ ವ್ಯವಹಾರ ನೋಡಿಕೊಳ್ಳಲು ಬೇಕು ಎಂದು ಆಶ್ರಮದ ಸ್ಥಾಪಕ ರಾಮದಾಸರಲ್ಲಿ ಕೇಳಿದರು. ಸದಾನಂದರನ್ನೇ ಕರೆದೊಯ್ಯಲು ರಾಮದಾಸರು ಸಲಹೆ ನೀಡಿದಂತೆ ಸ್ವಾಮೀಜಿಯವರು ಸದಾನಂದರನ್ನು ಭಟ್ಕಳದ ಶಿರಾಲಿ ಮಠಕ್ಕೆ ಕರೆದುಕೊಂಡು ಹೋದರು. ಆನಂದಿ ಮತ್ತು ಹಿರಿಯ ಮಗಳು ಆಶ್ರಮದಲ್ಲಿದ್ದರು. ಬಳಿಕ ಅನಂತನಾಗ್ ಜನಿಸಿದರು. ಉಡುಪಿ ಶಂಕರ ರಾವ್ ಮತ್ತು ಮಿತ್ರಾಬಾಯಿ ಅವರು ಆಶ್ರಮಕ್ಕೆ ಬಂದು ಹೋಗುತ್ತಿದ್ದರು. ಅವರು ಉಡುಪಿಯ ಮನೆಗೆ ಬರಲು ಹೇಳಿದಾಗ ಆನಂದಿಯವರು ಮಕ್ಕಳನ್ನು ಕರೆದುಕೊಂಡು ಬಂದರು. ಹೀಗೆ ಅಜ್ಜರಕಾಡಿನಲ್ಲಿ ಎರಡು ವರ್ಷವಿದ್ದು ಸೈಂಟ್ ಸಿಸಿಲಿ ಶಾಲೆಗೆ 1 ಮತ್ತು 2ನೇ ತರಗತಿಗೆ ಅನಂತನಾಗ್ ಹೋದರು. ಪ್ರಸಿದ್ಧ ನಟರಾಗಿದ್ದ ತಮ್ಮ ಶಂಕರನಾಗ್ ಹುಟ್ಟಿದ್ದು ಉಡುಪಿಯಲ್ಲಿ. ಬಳಿಕ ಸದಾನಂದರಿಗೆ ಇದ್ದ ಶಿರಾಲಿ ಮಠದ ವಸತಿಗೃಹಕ್ಕೆ ಕುಟುಂಬ ಸ್ಥಳಾಂತರಗೊಂಡಿತು.