Advertisement

ಅನಂತನಾಗ್‌ ಬರ್ತ್‌ಡೇಗೆ ‘ವಿಜಯಾನಂದ’ಲುಕ್‌ ಹೊರಕ್ಕೆ

12:19 PM Sep 06, 2021 | Team Udayavani |

ಹಿರಿಯ ನಟ ಅನಂತ ನಾಗ್‌ ಜನ್ಮದಿನದ ಸಂದರ್ಭದಲ್ಲಿ, ಅನಂತ ನಾಗ್‌ ಅಭಿನಯಿಸುತ್ತಿರುವ ಮುಂಬರುವ ಚಿತ್ರ “ವಿಜಯಾನಂದ’ದ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆಯಾಗಿದೆ.

Advertisement

ಬರ್ತ್‌ಡೇ ಸಂಭ್ರಮದಲ್ಲಿರುವ ಅನಂತ ನಾಗ್‌ ಅವರಿಗೆ ಜನ್ಮದಿನದ ಉಡುಗೊರೆಯಾಗಿ “ವಿಜಯಾನಂದ’ ಚಿತ್ರತಂಡ, ಅನಂತ ನಾಗ್‌ ಅವರ ಪಾತ್ರ ಪರಿಚಯದ ಫ‌ಸ್ಟ್‌ಲುಕ್‌ ಪೋಸ್ಟರ್‌ಬಿಡುಗಡೆ ಮಾಡಿದೆ.

ಉದ್ಯಮಿವಿಜಯ ಸಂಕೇಶ್ವರ ಅವರ ಬಯೋಪಿಕ್‌ ಆಗಿರುವ “ವಿಜಯಾನಂದ’ ಚಿತ್ರದಲ್ಲಿ ಅನಂತ ನಾಗ್‌, ವಿಜಯ ಸಂಕೇಶ್ವರ್‌ ಅವರ ತಂದೆ ಬಿ.ಜಿ ಸಂಕೇಶ್ವರ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಬಿಡುಗಡೆಯಾಗಿರುವ “ವಿಜಯಾನಂದ’ ಚಿತ್ರದ ಕ್ಯಾರೆಕ್ಟರ್‌ ಪೋಸ್ಟರ್‌ನಲ್ಲಿ ಅನಂತ ನಾಗ್‌ ಶ್ವೇತ ವಸ್ತ್ರಧಾರಿಯಾಗಿ ಕಪ್ಪು ಕೋಟು ತೊಟ್ಟು ಮಿಂಚುತ್ತಿದ್ದಾರೆ. “ವಿಆರ್‌ಎಲ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಆನಂದ ಸಂಕೇಶ್ವರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಟ ನಿಹಾಲ್‌ವಿಜಯ್‌ ಸಂಕೇಶ್ವರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ಸ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ತಿಂಗಳ ಕೊನೆಗೆ ಚಿತ್ರ ಸೆಟ್ಟೇರಲಿದೆ. ರಿಶಿಕಾ ಶರ್ಮ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next