Advertisement
ಹೊಸಪೇಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಕೇಂದ್ರ ಸಚಿವರು ಕುಮ್ಮಕ್ಕು ನೀಡುತ್ತಿದ್ದಾರೆ. ಕರಾವಳಿ ಪ್ರದೇಶದಲ್ಲಿ ಜೆಡಿಎಸ್‌ಗೆ ಅಸ್ತಿತ್ವವಿಲ್ಲ. ಬಿಜೆಪಿಯಿಂದ ಒಬ್ಬರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿ, ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತ ಅಡ್ಡದಾರಿ ಹಿಡಿದಿದೆ ಎಂದರು.
ಸಾವೋ ಎಂದು ತಿಳಿಯುತ್ತದೆ. ಆದರೆ, ಬಿಜೆಪಿ ಯವರಿಗೆ ಈ ಸಾಮಾನ್ಯ ಜ್ಞಾನವೂ ಇಲ್ಲ. ಇದನ್ನೆಲ್ಲ ತಿಳಿಯೋ ಬದಲು ಅವರು ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದರು. ಖಾಲಿ ಬುಟ್ಟಿಗೆ ಪುಂಗಿ ಊದುತ್ತಿರುವ ಬಿಎಸ್‌ವೈ: ಈ ಮಧ್ಯೆ, ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಸಿಎಂ, ನವ ಕರ್ನಾಟಕ ಪರಿವರ್ತನೆ ಯಾತ್ರೆ ಮೂಲಕ ಸಿದ್ದರಾಮಯ್ಯನವರ ಭ್ರಷ್ಟಾಚಾರ ಬಯಲಿಗೆಳೆಯುತ್ತೇನೆ ಎನ್ನುತ್ತಿರುವ ಯಡಿಯೂರಪ್ಪ ಖಾಲಿ ಬುಟ್ಟಿಗೆ ಪುಂಗಿ ಊದಿಕೊಂಡು ತಿರುಗಾಡುತ್ತಿದ್ದಾರೆ. ಯಡಿಯೂರಪ್ಪ ಹತಾಶರಾಗಿದ್ದಾರೆ. ಕಾಂಗ್ರೆಸ್ ವಿರುದ್ಧ ಮಾತನಾಡಲು ಅವರಿಗೆ ಏನೂ ಸಿಗುತ್ತಿಲ್ಲ. ಹೀಗಾಗಿ ಭ್ರಷ್ಟಾಚಾರ ಬಯಲಿಗೆಳೆಯುವ ಮಾತನಾಡುತ್ತಿದ್ದಾರೆ ಎಂದರು.
Related Articles
Advertisement
ಬಿಜೆಪಿಯವರಿಗೆ ಬೆಂಕಿ ಹಚ್ಚೋ ಕೆಲಸ: ಖಾದರ್ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತ ಸಹಿಸದ ಬಿಜೆಪಿಯವರು ಮುಖ್ಯಮಂತ್ರಿ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತರಲು ಕರಾವಳಿ ಸೇರಿ ವಿವಿಧ ಭಾಗಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಸಚಿವ ಯು.ಟಿ.ಖಾದರ್ ಗಂಭೀರ ಆರೋಪ ಮಾಡಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಶಾಂತವಿದೆ. ಎರಡೂ ಸಮಾಜದ ಜನರು ಒಂದಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೆಲ ಘಟನೆಗಳು ನಡೆದರೂ ಅಲ್ಲಿಯೇ ಪರಿಹಾರ ಕಾಣುತ್ತಿವೆ. ಆದರೆ ಕರಾವಳಿ ಜನರು ಶಾಂತಿಯಿಂದಿರುವುದು ಕೆಲವರಿಗೆ ಬೇಡವಾಗಿದೆ. ಮುಖ್ಯವಾಗಿ ಬಿಜೆಪಿಯವರಿಗೆ ಈಗ ಬೇರೆ ವಿಷಯವೇ ಇಲ್ಲ. ಹೇಗಾದರೂ ಮಾಡಿ ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರಬೇಕು ಎಂಬುದು ಉದ್ದೇಶ. ಇದೇ ಕಾರಣದಿಂದ ರಾಜ್ಯದ ವಿವಿಧ ಕಡೆ ಗಲಭೆ ಹುಟ್ಟು
ಹಾಕುತ್ತಿದ್ದಾರೆ ಎಂದರು. ಪ್ರತಾಪ, ಅನಂತಕುಮಾರ್ ಆಯ್ಕೆ ದುರಂತ: ಪ್ರಿಯಾಂಕ
ಯಾದಗಿರಿ: ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಸಂಸದ ಅನಂತಕುಮಾರ್ ಹೆಗಡೆ ಹಾಗೂ ಪ್ರತಾಪ್ ಸಿಂಹ ಅವರಂಥ ನಾಯಕರನ್ನು ಜನರು ಆಯ್ಕೆ ಮಾಡಿದ್ದು ದೊಡ್ಡ ದುರಂತ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯಾದಗಿರಿಯಲ್ಲಿ ಶ್ರೀರಾಮ ಸೇನೆ ಹಮ್ಮಿಕೊಂಡ ವಿರಾಟ್ ಸಮಾವೇಶದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದವರ ಮೇಲೆ ಪೊಲೀಸರು ಸ್ವಹಿತಾಸಕ್ತಿ ಯಡಿ ಪ್ರಕರಣ ದಾಖಲಿಸಿದ್ದಾರೆ. ತೆಲಂಗಾಣದ ಶಾಸಕ ರಾಜಾಸಿಂಗ್ ಠಾಕೂರ್, ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ, ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾಧ್ಯಕ್ಷ ವಿಜಯ ಪಾಟೀಲ್ ಸೇರಿ ಇತರರ ಮೇಲೆ ನಗರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿರಾಟ್ ಹಿಂದೂ ಸಮಾವೇಶಕ್ಕೆ ಅನುಮತಿ ಕೊಡದಿದ್ದರೆ, ಅನುಮತಿ ಕೊಟ್ಟಿಲ್ಲವೆಂದು ಅಪಪ್ರಚಾರ ಮಾಡುತ್ತಾರೆ. ಅನುಮತಿ ಕೊಟ್ಟರೆ ಅವಿವೇಕಿಗಳು ಬಂದು ಹೀಗೆ ಮಾತನಾಡುತ್ತಾರೆ. ಪ್ರಚೋದನಾಕಾರಿ ಭಾಷಣ ಖಂಡನೀಯವಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಈ ರೀತಿ ಮಾತನಾಡಬಾರದು ಎಂದರು. ಸರ್ಕಾರ ವೀರಶೈವ ಅಥವಾ ಲಿಂಗಾಯತ ಸೇರಿದಂತೆ ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತಂತೆ ಐದು ಅರ್ಜಿಗಳು ಬಂದಿವೆ. ಐದು ಅರ್ಜಿಗಳನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ. ಒಳ ಮೀಸಲಾತಿ ಕುರಿತಂತೆ ಸಚಿವರು, ಶಾಸಕರು ಹಾಗೂ ಮುಖಂಡರೊಂದಿಗೆ ಕುಳಿತು ಚರ್ಚೆ ಮಾಡಲಾಗುವುದು.
●ಸಿದ್ದರಾಮಯ್ಯ, ಸಿಎಂ