Advertisement

ಬಾಗಿಲು ಮುರಿದು 16 ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಗದು ಕಳವು

05:01 PM Jun 14, 2024 | Team Udayavani |

ಆನಂದಪುರ : ಇಲ್ಲಿಗೆ ಸಮೀಪದ ಅಂದಾಸುರ ಗ್ರಾಮದಲ್ಲಿ ಮನೆಯ ಬಾಗಿಲ ಇಂಟರ್ ಲಾಕ್ ಮುರಿದು ಸುಮಾರು 16 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗು ನಗದು ಹಣ  ಕಳ್ಳತನಗೈದ ಘಟನೆ ಬುಧವಾರ ನಡೆದಿದೆ.

Advertisement

ಆನಂದಪುರ ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ ಅಬ್ದುಲ್ ಅಹಮದ್ ಇತ್ತೀಚಿನ ದಿನಗಳಲ್ಲಿ ವರ್ಗಾವಣೆಯಾಗಿದ್ದು. ಮನೆಗೆ ಬೀಗ ಹಾಕಿ ಮಣಿಪಾಲಕ್ಕೆ ತೆರಳಿದ್ದರು. ಇದನ್ನು ತಿಳಿದ ಕಳ್ಳರು ಮನೆಯ ಬಾಗಿಲು ಮುರಿದು, ಮನೆಯಲ್ಲಿದ್ದ ಸುಮಾರು 330  ಗ್ರಾಂ. ಬಂಗಾರದ ಆಭರಣ, 90. ಸಾವಿರ ನಗುದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಸ್ಥಳೀಯ ಗ್ರಾಮಸ್ಥರು ಮನೆಯ ಬಾಗಿಲು ಮುರಿದು ಕಾಲವಾಗಿರುವ ವಿಚಾರವನ್ನು ದೂರವಾಣಿ ಮೂಲಕ ಅಬ್ದುಲ್ ಅಹಮದ್ ಅವರಿಗೆ ತಿಳಿಸಿದ್ದಾರೆ, ವಿಚಾರ ತಿಳಿದ ಕೂಡಲೇ ಅಹಮದ್ ಅವರು ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಯುವರಾಜ್ ಕಂಬಳಿ ಅವರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಪ್ರಕರಣವನ್ನು ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು ಕಳ್ಳರ ಸುಳಿವು ಪತ್ತೆಹಚ್ಚಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: Renukaswamy case: ಪೊಲೀಸರ ಮುಂದೆ ಶರಣಾದ ಮತ್ತಿಬ್ಬರು ಆರೋಪಿಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next