Advertisement

ಜಾತ್ರೆಯಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ : ಬೇಳೂರು

04:05 PM Mar 14, 2020 | Naveen |

ಆನಂದಪುರ: ಯಾವುದೇ ರಾಜಕೀಯ ಶಕ್ತಿಗಳು ಜಾತ್ರಾ ಮಹೋತ್ಸವದಲ್ಲಿ ಹಸ್ತಕ್ಷೇಪ ಮಾಡಬಾರದು. ಇದು ಸಾರ್ವಜನಿಕರ ಗ್ರಾಮೀಣ ಹಬ್ಬ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ನುಡಿದರು.

Advertisement

ಸ್ಥಳೀಯ ಶ್ರೀ ಕಡ್ಲೆಹಂಕ್ಲು ಮಾರಿಕಾಂಬಾ ದೇವಿ ಜಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಈ ಮಾರಿಕಾಂಬಾ ದೇವಿ ಜಾತ್ರೆ ಸಾರ್ವಜನಿಕರ ಸಹಕಾರದಿಂದ ಪಕ್ಷಾತೀತವಾಗಿ ಆಚರಿಸಲಾಗುತ್ತದೆ. ಇಂತಹ ಹಬ್ಬಗಳಲ್ಲಿ ಯಾವುದೆ ಪಕ್ಷದವರು ಹಸ್ತಕ್ಷೇಪ ಮಾಡಬಾರದು. ಇದು ಊರ ಹಬ್ಬ. ಗ್ರಾಮೀಣ ಭಾಗದ ಜನರು ತಾಯಿ ಮಾರಿಕಾಂಬೆಯ ಜಾತ್ರೆಯನ್ನು 3 ವರ್ಷಕ್ಕೆ ಒಮ್ಮೆ ವೈಭವದಿಂದ ಆಚರಿಸುತ್ತಾರೆ.

ಜಾತ್ರೆಗೆ ತನ್ನದೇ ಆದ ಆಚಾರ, ವಿಚಾರ, ಸಂಪ್ರದಾಯ ಮತ್ತು ಸಂಸ್ಕೃತಿ ಇದೆ. ಅದೇ ರೀತಿಯಲ್ಲಿ ನಾವು ಆಚರಿಸಬೇಕು ಎಂದರು. ಜಿಪಂ ಸದಸ್ಯೆ ಅನಿತಾಕುಮಾರಿ ಮಾತನಾಡಿ, ನಾವು ದೇವಿಯ ಆರಾಧಕರು. ದೇವರಲ್ಲಿ ಭಕ್ತಿ ಮತ್ತು ಆತ್ಮಶುದ್ಧಿಯಲ್ಲಿ ನಮ್ಮ ಕಾರ್ಯಗಳು ಆಗುವಂತೆ ಕರುಣಿಸು ತಾಯಿ ಎನ್ನುತ್ತೇವೆ. ಹಾಗೆ ನಾವು ಸಾರ್ವಜನಿಕರ ಕೆಲಸ ದೇವರ ಕಾಯಕವೆಂದು ಅರಿತು ಮಾಡಬೇಕು.

ಮುಂದಿನ ದಿನಗಳಲ್ಲಿ ಶ್ರೀ ಕಡ್ಲೆಹಂಕ್ಲು ಮಾರಿಕಾಂಬಾ ದೇವಾಲಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಹಾಗೆಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ನಾಡ ಕಚೇರಿಯ ಉಪ ತಹಶೀಲ್ದಾರ್‌ ಕಲ್ಲಪ್ಪ ಮೆಣಸಿನ್‌ಹಾಳ್‌, ತಾಪಂ ಸದಸ್ಯೆ ಆನಂದಿ ಲಿಂಗರಾಜ್‌, ಬಸವರಾಜ್‌, ಚಂದ್ರಶೇಖರ್‌, ವೆಂಕಟೇಶ್‌, ಸುಂದರೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next