Advertisement

ರಿಷಿ ಸುನಕ್ ಕುರಿತ ಆನಂದ್ ಮಹೀಂದ್ರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್…

01:29 PM Oct 25, 2022 | Team Udayavani |

ಹೊಸದಿಲ್ಲಿ: ಯುನೈಟೆಡ್ ಕಿಂಗ್‌ಡಂನ  ಭಾರತೀಯ ಮೂಲದ ಮೊದಲ ಪ್ರಧಾನ ಮಂತ್ರಿಯಾದ ರಿಷಿ ಸುನಕ್ ಅವರನ್ನು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.

Advertisement

ಆದರೆ ಬಿಲಿಯನೇರ್ ಕೈಗಾರಿಕೋದ್ಯಮಿ ಯುನೈಟೆಡ್ ಕಿಂಗ್‌ಡಂನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರನ್ನು ಉಲ್ಲೇಖಿಸಿ ಮಾಡಿದ ಟ್ವೀಟ್ ಇಂಟರ್ನೆಟ್‌ನಲ್ಲಿ ಹಲವರ ಹೃದಯಗಳನ್ನು ಗೆಲ್ಲುತ್ತಿದೆ.

“…ಎಲ್ಲಾ ಭಾರತೀಯ ನಾಯಕರು ಅಲ್ಪ ಸಾಮರ್ಥ್ಯ ಉಳ್ಳವರು ಮತ್ತು ತೇಜೋಹೀನ ಪುರುಷರಾಗಿರುತ್ತಾರೆ” ಎಂದು ಚರ್ಚಿಲ್ ಹೇಳಿದ್ದಾರೆ. ಆದರೆ ಇಂದು, ನಮ್ಮ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ನಾವು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಕೆ ಪ್ರಧಾನಿಯಾಗಿ ಪಟ್ಟಾಭಿಷೇಕಗೊಳ್ಳುವುದನ್ನು ನಾವು ಉತ್ಸುಕರಾಗಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೊನೆಗೆ ಜೀವನವೇ ಸುಂದರ.., ಎಂದು ಅವರು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

 

Advertisement

ಮಹೀಂದ್ರಾ ಅವರ ಈ ಪೋಸ್ಟ್ 14.3k ಗೂ ಹೆಚ್ಚು ರಿಟ್ವೀಟ್‌ಗಳು, 917 ಕ್ಕೂ ಹೆಚ್ಚು ಕೋಟ್ ಟ್ವೀಟ್‌ಗಳು ಮತ್ತು 93.7k ಲೈಕ್‌ಗಳನ್ನು ಗಳಿಸಿದೆ. ಜನಪ್ರಿಯ ಕೈಗಾರಿಕೋದ್ಯಮಿ  ಆನಂದ್ ಮಹೀಂದ್ರಾ  ಅವರ ಇಂತಹ ಮಾಹಿತಿಯುತ, ಪ್ರಶಂಸನಾರ್ಹ, ಹಾಸ್ಯದ ಮತ್ತು ವ್ಯಂಗ್ಯ ಸಂದೇಶಗಳು ಯಾವಾಗಲೂ ನೆಟ್ಟಿಗರ ಹೃದಯವನ್ನು ಗೆಲ್ಲುತ್ತವೆ.

ರಿಷಿ ಸುನಕ್  ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದ ಭಾರತೀಯ ಮೂಲದ ಪೋಷಕರಿಗೆ ಸೌತಾಂಪ್ಟನ್‌ ಎಂಬಲ್ಲಿ ಸುನಕ್ ಜನಿಸಿದರು. ಸುನಕ್ ಅವರು ಇನ್ಫೋಸಿಸ್ ,ಬಿಲಿಯನೇರ್ ಉದ್ಯಮಿ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಅಳಿಯ (ಪುತ್ರಿ ಅಕ್ಷತಾ ಮೂರ್ತಿಜತೆ ವಿವಾಹ).

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next