Advertisement

ಆನಗೋಡು ಶಾಲೆಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ

01:03 PM Apr 19, 2017 | |

ದಾವಣಗೆರೆ: ತಾಲೂಕಿನ ಆನಗೋಡು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಗೊಂಡಂತೆ ಜಿಲ್ಲೆಯ 224 ಶಾಲೆಯಲ್ಲಿ ಬೇಸಿಗೆ ಸಂಭ್ರಮ-2017 ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಜಗನ್ನಾಥ್‌ ತಿಳಿಸಿದ್ದಾರೆ. 

Advertisement

ಆನಗೋಡು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಸಂಭ್ರಮ-2017 ಶಿಬಿರಕ್ಕೆ ಮಂಗಳವಾರ ಭೇಟಿ ನೀಡಿದ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, 6 ಮತ್ತು 7ನೇ ತರಗತಿ ಮಕ್ಕಳಿಗಾಗಿ ಇದೇ ಮೊದಲ ಬಾರಿಗೆ ಬೇಸಿಗೆ ಸಂಭ್ರಮ ಶಿಬಿರ ನಡೆಸಲಾಗುತ್ತಿದೆ. 

ಏ. 17 ರಿಂದ ಪ್ರಾರಂಭವಾಗಿರುವ ಶಿಬಿರ ಮೇ. 27ರ ವರೆಗೆ ನಡೆಯಲಿದೆ ಎಂದರು. ಸ್ವಲ್ಪ ಓದು- ಸ್ವಲ್ಪ ಮಜಾ… ಎಂಬ ಪರಿಕಲ್ಪನೆಯೊಂದಿಗೆ ಬೇಸಿಗೆ ಸಂಭ್ರಮ ಶಿಬಿರ ನಡೆಯಲಿದೆ. ಐದು ವಾರಗಳ ಕಾಲ ನಡೆಯುವ ಶಿಬಿರದಲ್ಲಿ ಪ್ರತಿ ವಾರ ಒಂದು ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು.  

ಅವರಿಂದ ಪ್ರತಿಕ್ರಿಯೆ ಪಡೆಯಲಾಗುವುದುಎಂದು ತಿಳಿಸಿದರು. ಮೊದಲ ವಾರ ಕುಟುಂಬ, ಎರಡನೇ ವಾರದಲ್ಲಿ ನೀರು, ಮೂರನೇ ವಾರದಲ್ಲಿ ನೀರು, ನಾಲ್ಕನೇ ವಾರದಲ್ಲಿ ಆರೋಗ್ಯ ಹಾಗೂ ಐದನೇ ವಾರದಲ್ಲಿ ಪರಿಸರದ ಬಗ್ಗೆ ಪೂರಕಮಾಹಿತಿ ನೀಡಲಾಗುವುದು. ಪ್ರತಿ ದಿನ 15 ನಿಮಿಷ ಮುಕ್ತ ಕಲಿಕೆ, 45 ನಿಮಿಷ ಗುಂಪು ಚರ್ಚೆ ನಡೆಸಲಾಗುವುದು.

ಪ್ರತಿ ಶನಿವಾರ ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿಪದಾಧಿಕಾರಗಳ ಮುಂದೆ ಮುಕ್ತ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು. ಬೇಸಿಗೆ ಸಂಭ್ರಮ ಶಿಬಿರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಆನುಕೂಲವಾಗಲಿದೆ. ಆಟವಾಡುತ್ತಾ ಕೆಲವಾರು ವಿಷಯಗಳ ಬಗ್ಗೆ ಹಿತಿ ಪಡೆಯಲು ಸಹಕಾರಿಯಾಗಲಿದೆ.

Advertisement

ಅಲ್ಲದೆ ಗುಂಪು ಚರ್ಚೆಯಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ತಾವು ತಿಳಿದುಕೊಂಡಿದ್ದನ್ನುಇತರೆ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಬೇಸಿಗೆ ಸಂಭ್ರಮ ಶಿಬಿರಕ್ಕಾಗಿಯೇ ಇಬ್ಬರು ಶಿಕ್ಷಕರಿಗೆ ತರಬೇತಿ ಸಹ ನೀಡಲಾಗಿದೆ.

ಆನಗೋಡು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಸಂಭ್ರಮ ಶಿಬಿರದಲ್ಲಿ 30 ಬಾಲಕರು, 26 ಬಾಲಕಿಯರು ಒಳಗೊಂಡಂತೆ 56 ವಿದ್ಯಾರ್ಥಿಗಳು ಇದ್ದಾರೆ. ಬೇಸಿಗೆಯಲ್ಲೂ ಜಿಲ್ಲೆಯ 77,732 ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ.

ಬೇಸಿಗೆ ಸಂಭ್ರಮದಲ್ಲೂ ಪ್ರತಿ ದಿನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಶಿಕ್ಷಕರಾದ ಲೋಕಣ್ಣ ಮಾಗೋಡು, ನಾಗೇಂದ್ರನಾಯ್ಕ, ರುದ್ರಪ್ಪ, ಸಂಜೀವಮೂರ್ತಿ ಇದ್ದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next