Advertisement

Sandalwood: ತೆರೆಮೇಲೆ ʼಅನಾಥʼನ ಕನಸು

09:59 AM Nov 29, 2024 | Team Udayavani |

“ಅನಾಥ’ ಎಂಬ ಚಿತ್ರವೊಂದು ಈ ವಾರ ತೆರೆಕಾಣುತ್ತಿದೆ. ಇಂದ್ರ ಈ ಚಿತ್ರದ ನಾಯಕ. ನಿರ್ಮಾಣದ ಜೊತೆಗೆ ಸಂಗೀತ ನಿರ್ದೇಶನ ಕೂಡಾ ಮಾಡಿದ್ದಾರೆ. ಅಣ್ಣಾ ಶೇಟ್‌ ಕೆ.ಎ. ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

Advertisement

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿದೆ. ಭಗ್ನ ಪ್ರೇಮಿಯ ಬದುಕಲ್ಲಿ ಜಾತೀಯತೆ ಎಂಬ ಬಿರುಗಾಳಿ ಬೀಸಿದಾಗ ಆತನ ದುರಂತದ ಬದುಕಿನ ಅಂಶಗಳೇ ಅನಾಥ ಚಿತ್ರದ ಕಥಾಹಂದರ. ಈಗಿನ ಪ್ರಸಕ್ತ ಸಮಾಜದ ಆಗು ಹೋಗುಗಳ ನೈಜ ಘಟನೆ ಆಧಾರವಾಗಿಟ್ಟುಕೊಂಡು ಅನಾಥ ಚಿತ್ರದ ಕಥಾಹಂದರ ಹೆಣೆಯಲಾಗಿದೆ.

ಕನಕಪುರ, ಹೊಸಕೋಟೆ, ಮಡಿಕೇರಿ ಬೆಂಗಳೂರು ಹಾಗೂ ಹಿರಿಯೂರು ಸುತ್ತಮುತ್ತ 50 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸೆಂಟಿಮೆಂಟ್‌, ಲವ್‌, ಕಾಮಿಡಿ, ಸಸ್ಪೆನ್ಸ್ ನಂತಹ ಎಲ್ಲಾ ಮನರಂಜನಾತ್ಮಕ ಅಂಶಗಳ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವಿದು ಎನ್ನುವುದು ತಂಡದ ಮಾತು.

ವೀರೇಶ್‌ ಕುಮಾರ್‌ ಅವರ ಛಾಯಾಗ್ರಹಣ, ರಮೇಶ್‌ ರಂಜಿತ್‌ ಅವರ ಸಾಹಸ, ಬಾಲ ಮಾಸ್ಟರ್‌ ನೃತ್ಯ ನಿರ್ದೇಶನ, ಮಾರುತಿ ರಾವ್‌ ಸಂಕಲನ, ಎಲ್.ಎನ್‌. ಸೂರ್ಯ ಅವರ ಸಾಹಿತ್ಯ, ಶಿವಕುಮಾರ್‌ ಶೆಟ್ಟಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಇಂದ್ರ, ನಿಖೀತಾ ಸ್ವಾಮಿ, ಯುಕ್ತ ಪರ್ವಿ, ಶೋಭರಾಜ್, ಸಂಗೀತ, ಹೊನ್ನವಳ್ಳಿ ಕೃಷ್ಣ, ಬಾಯ್‌ ಬಡ್ಕ ಸಿದ್ದು, ಜಿಮ್‌ ಹರೀಶ್‌, ಮೀಸೆ ಮೂರ್ತಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next