Advertisement

ಬೈಕ್ ನ ಹಿಂಭಾಗಕ್ಕೆ ಅಪರಿಚಿತ ವಾಹನ ಢಿಕ್ಕಿ : ವ್ಯಕ್ತಿ ಸಾವು, ಸಹ ಸವಾರೆಗೆ ಗಾಯ

09:54 PM Jun 17, 2022 | Team Udayavani |

ಕೊರಟಗೆರೆ: ಬೈಕ್ ನ ಹಿಂಭಾಗಕ್ಕೆ ಅಪರಿಚಿತ ವಾಹನ ಢಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದು, ಸಹ ಸವಾರೆಗೆ ಗಾಯಗೊಂಡಿರುವ ಘಟನೆ ಶುಕ್ರವಾರ ಜೋನಿಗರಹಳ್ಳಿ ಬಸ್ ನಿಲ್ದಾಣದ ಎದುರು ನಡೆದಿದೆ.

Advertisement

ಕೊರಟಗೆರೆ ಟೌನ್ ವಾಸಿಯಾದ ಆಲೀಂ ಪಾಷಾ(45) ವರ್ಷ ಮೃತ ದುರ್ದೈವಿ. ಹಾಗೂ ಗಾಯಾಳು ಹರ್ಷಿಯಾ (35) ಕೈ ಮತ್ತು ಕಾಲುಗಳಿಗೆ ಗಾಯ ಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಲ್ಸರ್ ಬೈಕ್ ನಲ್ಲಿ ಜಂಪೇನಹಳ್ಳಿ ಕಡೆಯಿಂದ ತೋವಿನಕೆರೆ ಕಡೆ ಹೋಗುವಾಗ ಮಾರ್ಗ ಮದ್ಯೆ ಜೋನಿಗರಹಳ್ಳಿ ಬಸ್ ನಿಲ್ದಾಣದ ಎದುರು ಹಿಂಭಾಗದಿಂದ ಬಂದ ಅಪರಿಚಿತ ವಾಹನ ಬೈಕ್ ನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತ ಪಟ್ಟು ಹಿಂಬದಿಯಲ್ಲಿ ಕುಳಿತಿದ್ದ ಹರ್ಷಿಯಾರವರಿಗೆ ತೀವ್ರ ತರ ಪೆಟ್ಟಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ವಾಹನವನ್ನು ಅತೀ ವೇಗ ಮತ್ತುಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಮಹಮದ್ ಇಸ್ಮಾಯಿಲ್ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ನಾಗರಾಜು ಹೆಚ್ಚಿನ ತನಿಖೆ ಕೈ ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next