Advertisement

Mangalore: ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

12:37 AM Jan 12, 2024 | Team Udayavani |

ಮಂಗಳೂರು: ದಕ್ಷಿಣ ಹೊಯ್ಗೆಬಜಾರ್‌ನ ಭಗತ್‌ಸಿಂಗ್‌ ರಸ್ತೆಯ ನದಿ ಬಳಿ ಬುಧವಾರ ಬೆಳಗ್ಗೆ ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ.
ಮೃತದೇಹದ ಕುತ್ತಿಗೆಗೆ ಹಗ್ಗ ವೊಂದರ ಒಂದು ತುದಿ ಮತ್ತು ಇನ್ನೊಂದು ತುದಿಯನ್ನು ದಡದಲ್ಲಿ ಇಟ್ಟಿಗೆಗೆ ಸಿಕ್ಕಿಸಿರುವುದು ಕಂಡು ಬಂದಿದೆ.

Advertisement

ಸುಮಾರು 6.1 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸದೃಢ ಶರೀರ, ಖಾಕಿ ಬಣ್ಣದ ಅರ್ಧ ತೋಳಿನ ಟಿ ಟರ್ಶ್‌ ಧರಿಸಿದ್ದು, ಬಲ ಕೋಲು ಕೈಯಲ್ಲಿ ಎಸ್‌ಎಂಕೆ ಎಂದು ಆಂಗ್ಲ ಅಕ್ಷರದ ಹಚ್ಚೆ ಗುರುತು ಇದೆ. ವ್ಯಕ್ತಿಯ ಹೆಸರು, ವಿಳಾಸ ತಿಳಿದು ಬಂದಿಲ್ಲ. ಈ ಚಹರೆಯ ವಾರಸುದಾರರು ಇದ್ದಲ್ಲಿ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next