ಆನೇಕಲ್: ಎರಡು ದಿನಗಳ ಹಿಂದೆ ತುಮಕೂರಿನಿಂದಸೆರೆ ಹಿಡಿದು ಆಶ್ರಯ ನೀಡಲು ಬನ್ನೇರುಘಟ್ಟ ಜೈವಿಕಉದ್ಯಾನಕ್ಕೆ ಕರೆತಂದಾಗ ಚಾಲಕನ ಮೇಲೆ ದಾಳಿಮಾಡಿ ಬೋನಿನಿಂದ ತಪ್ಪಿಸಿಕೊಂಡಿದ್ದ ಕರಡಿ,ಮಂಗಳವಾರ ಆರು ಮಂದಿ ಮೇಲೆ ದಾಳಿ ಮಾಡಿದೆಎನ್ನಲಾಗಿದೆ. ಆದರೆ, ಅಧಿಕಾರಿಗಳು ಇದು ಅದೇಕರಡಿ ದಾಳಿ ಮಾಡಿದಿಯೋ ಅಥವಾ ಬೇರೆಯಧ್ದೋಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಆನೇಕಲ್ ತಾಲೂಕಿನ ಕಾಚನಯಕನಹಳ್ಳಿಸಮೀಪದಲ್ಲಿ ಇರುವ ಕ್ಯೂಬ್ ಕಂಪನಿಯ ಭದ್ರತಾಸಿಬ್ಬಂದಿ ಮೇಲೆ ಮುಂಜಾನೆ ಎರಡೂವರೆ ಗಂಟೆಯಲ್ಲಿದಾಳಿ ನಡೆಸಿದ ಕರಡಿಯು ಗಾಯಗೊಳಿಸಿ ಅಲ್ಲಿಂದಪರಾರಿಯಾಯಿತು. ಅದಾದ ಬಳಿಕ 5.20ಕ್ಕೆ 6 ಕಿ.ಮೀ.ದೂರದಲ್ಲಿ ಹೊಲ, ತೋಟ, ರಸ್ತೆಗಳಲ್ಲಿ ನಡೆದಾಡಿದಕರಡಿ, ಚಂದಾಪುರದ ಕರ್ನಾಟಕ ವಿದ್ಯುತ್ ಪ್ರಸರಣನಿಗಮದ ವಸತಿಗೃಹದ ಆವರಣದಲ್ಲಿಕಾಣಿಸಿಕೊಂಡಿದೆ. ಇದನ್ನು ಕಂಡ ಸ್ಥಳೀಯರುಮೊಬೈಲ್‌ನಲ್ಲಿ ಸೆರೆ ಹಿಡಿದು ಅರಣ್ಯ ಇಲಾಖೆಯವರಿಗೆಮಾಹಿತಿ ನೀಡಿದ್ದಾರೆ.
ಅಧಿಕಾರಿಗಳಿಂದ ಹುಡುಕಾಟ: ಮಾಹಿತಿ ಸಿಕ್ಕಕೂಡಲೇ ಆನೇಕಲ್ ಪ್ರಾದೇಶಿಕ ಅರಣ್ಯ ವಿಭಾಗದಉಪ ವಲಯ ಅರಣ್ಯಾಧಿಕಾರಿ ಬಾಲಕೃಷ್ಣ ಮತ್ತವರತಂಡ ಕರಡಿಗಾಗಿ ಚಂದಾಪುರ ಭಾಗದಲ್ಲಿ ಹುಡುಕಾಟನಡೆಸುತ್ತಿದ್ದರೆ, 6.30ರಲ್ಲಿ ಚಂದಾಪುರದಿಂದ 7 ಕಿ.ಮೀ. ದೂರ ಇರುವ ಶೆಟ್ಟಳ್ಳಿಯಲ್ಲಿ ಮೂರು ಮಂದಿಮೇಲೆ ದಾಳಿ ನಡೆಸಿ ಅಲ್ಲಿಂದಲೂಪರಾರಿಯಾಯಿತು.ನೀಲಗಿರಿ ತೋಪಿಗೆ ನುಗ್ಗಿದೆ: ಈ ಸುದ್ದಿ ತಿಳಿದ ಅರಣ್ಯಸಿಬ್ಬಂದಿ ಶೆಟ್ಟಳ್ಳಿಗೆ ಬರುವಷ್ಟರಲ್ಲಿ 7 ಗಂಟೆ ವೇಳೆಗೆತಟ್ಟಹಳ್ಳಿ ಬಳಿ ಇಬ್ಬರ ಮೇಲೆ ದಾಳಿ ನಡೆಸಿತ್ತು.
ಕೂಡಲೇ ಅರಣ್ಯ ಸಿಬ್ಬಂದಿ ಬಂದು ಕರಡಿ ಇರುವಸ್ಥಳವನ್ನು ಸುತ್ತುವರಿಯುತ್ತಿದ್ದಂತೆ ಪೊದೆಗಳಿಂದಹೊರ ಬಂದ ಕರಡಿ, ಉಪ ವಲಯ ಅರಣ್ಯಾಧಿಕಾರಿಬಾಲಕೃಷ್ಣ ಮತ್ತವರ ಸಿಬ್ಬಂದಿಯನ್ನು ಅಟ್ಟಿಸಿಕೊಂಡುಹೋಗಿ ಪಕ್ಕದಲ್ಲಿದ್ದ ನೀಲಗಿರಿ ತೋಪಿಗೆ ನುಗ್ಗಿದೆ.ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡು ಕರಡಿಇರುವಿಕೆಗಾಗಿ ಹುಡುಕಾಟ ಸಾಗಿದೆ.
ಯಾವ ಕರಡಿ ಎಂಬುದು ತಿಳಿಯಬೇಕಿದೆ: ಸ್ಥಳಕ್ಕೆಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯಸಂರಕ್ಷಣಾಧಿಕಾರಿ ಮೂರ್ತಿ ಭೇಟಿ ನೀಡಿಮಾಧ್ಯಮಗಳೊಂದಿಗೆ ಮಾತನಾಡಿ, ಕರಡಿ ಎಲ್ಲಿಂದಬಂದಿದೆ ಎಂಬುದನ್ನು ಖಚಿತವಾಗಿ ಹೇಳಲಾಗುತ್ತಿಲ್ಲ,ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಬಂದಿರಬಹುದು. ಇಲ್ಲ, ತಮಿಳುನಾಡು ಅರಣ್ಯದಿಂದಬಂದಿರಬಹುದು, ಈ ಎರಡು ಇಲ್ಲವಾದರೆ ಜೈವಿಕಉದ್ಯಾನದಿಂದ ನಾಪತ್ತೆಯಾಗಿದ್ದ ತುಮಕೂರು ಮೂಲದಕರಡಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ಅನಾರೋಗ್ಯಕ್ಕೆ ಒಳಗಾಗಿರಬಹುದು?:ಸಾಮಾನ್ಯವಾಗಿ ಕರಡಿಗಳು ನಿಶಾಚಾರಿ ಪ್ರಾಣಿಗಳು,ರಾತ್ರಿ ವೇಳೆ ಹೆಚ್ಚು ಸಂಚರಿಸುತ್ತವೆ. ಆದರೆ,ಮಂಗಳವಾರ ದಾಳಿ ನಡೆಸಿರುವ ಕರಡಿ ಹಗಲಲ್ಲಿಓಡಾಡುತ್ತಿರುವುದರಿಂದ ಅದರ ಆರೋಗ್ಯದಲ್ಲಿಏರುಪೇರು ಆಗಿರಬಹುದು, ಸಾಮಾನ್ಯವಾಗಿಕಾಡಿನಲ್ಲಿನ ಕರಡಿಗಳಿಗೆ ರ್ಯಾಬಿಸ್ ಕಾಯಿಲೆ ಕಂಡುಬರುತ್ತದೆ. ಆ ಸಮಯದಲ್ಲಿ ಮನಸೊÕà ಇಚ್ಛೆಓಡಾಡಿ, ಸಿಕ್ಕವರ ಮೇಲೆ ದಾಳಿ ನಡೆಸುತ್ತದೆ. ಈಕರಡಿಯ ದಾಳಿ ನೋಡಿದರೆ ಇದಕ್ಕೆ ರ್ಯಾಬಿಸ್‌ಕಾಯಿಲೆ ಇರಬಹುದು, ಇಲ್ಲವೆ, ಹೆಣ್ಣು ಕರಡಿ ತನ್ನಮರಿ ಕಳೆದುಕೊಂಡಾಗ ಈ ರೀತಿ ವರ್ತಿಸುತ್ತದೆಎಂದು ಹೇಳಿದರು. ಸ್ಥಳಕ್ಕೆ ಬನ್ನೇರುಘಟ್ಟ ರಾಷ್ಟ್ರೀಯಉದ್ಯಾನದ ವಲಯ ಅರಣ್ಯಾಧಿಕಾರಿ ಗಣೇಶ್,ಆನೇಕಲ್ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕೃಷ್ಣ,ಉಪವಲಯ ಅರಣ್ಯಾಧಿಕಾರಿ ಬಾಲಕೃಷ್ಣ,ಶಿವಶಂಕರ್ ಸೇರಿ 100ಕ್ಕೂ ಹೆಚ್ಚು ಸಿಬ್ಬಂದಿ ಕರಡಿಗಾಗಿಹುಡುಕಾಟ ನಡೆಸಿದ್ದಾರೆ.