Advertisement
ಮೈಸೂರು: ಕಾವೇರಿ, ಕಪಿಲ ಮತ್ತು ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮವಾದ ತಿ.ನರಸೀಪುರ ತಾಲೂಕಿನ ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಇದೇ 17ರಿಂದ ಮೂರು ದಿನಗಳ ಕಾಲ ನಡೆಯಲಿರುವ 11ನೇ ಮಹಾ ಕುಂಭಮೇಳಕ್ಕೆ ಸರ್ಕಾರ ವಿಶೇಷ ಗಮನಹರಿಸಿ ಸಕಲ ಸಿದ್ಧತೆ ನಡೆಸಿದೆ ಎಂದು ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.
ಬಾರಿಗೆ ದಕ್ಷಿಣ ಭಾರತದಲ್ಲೂ ಕುಂಭಮೇಳ ಆರಂಭವಾಗಿ ಈವರೆಗೆ ಪ್ರತಿ 3 ವರ್ಷಕ್ಕೊಮ್ಮೆಯಂತೆ 10 ಕುಂಭಮೇಳಗಳು ನಡೆದಿವೆ. ಎಲ್ಲಾ ಮತದವರೂ ಒಟ್ಟುಗೂಡಿ ಮಾಡುವ ಕಾರ್ಯ ಇದು. ಮಾಘಮಾಸದಲ್ಲಿ ನಡೆಯುತ್ತಿರುವ ಈ ಕುಂಭಮೇಳದಲ್ಲಿ ನಾಡಿನ ಎಲ್ಲಾ ಜನರೂ ಭಾಗವಹಿಸಿ ಪುಣ್ಯಸ್ನಾನ ಮಾಡುವಂತಾಗಬೇಕು ಎಂದು ಆಶಿಸಿದರು. ಮೊದಲ ದಿನ: ಫೆ.17ರಂದು ಬೆಳಗ್ಗೆ 6ಗಂಟೆಗೆ ಮಾಘ ಶುದ್ಧ ತ್ರಯೋದಶೀ ಪುಷ್ಯ ನಕ್ಷತ್ರದಲ್ಲಿ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ರಾಷ್ಟ್ರಾಶೀ ರ್ವಾದ. ಸಂಜೆ 4ಕ್ಕೆ ಅಗ್ರತೀರ್ಥ ಸಂಗ್ರಹ ಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮಗಳು ನಡೆಯಲಿದೆ.
Related Articles
Advertisement
ರಾತ್ರಿ 7ಗಂಟೆಗೆ ವಾರಾಣಸಿ ಮಾದರಿಯಲ್ಲಿ ನದಿ ಸಂಗಮ ಸ್ಥಳದಲ್ಲಿ ಸಾರ್ವಜನಿಕ ಗಂಗಾಪೂಜೆ ಮತ್ತು ದೀಪಾರತಿ ನೆರವೇರಿಸ ಲಾಗುವುದು ಎಂದು ತಿಳಿಸಿದರು.
ಮೂರನೇ ದಿನ: ಫೆ.19ರ ಮುಂಜಾನೆ 5.30ಕ್ಕೆ ಮಾಘಶುದ್ಧ ವ್ಯಾಸ ಪೂರ್ಣಿಮಾ, ಪುಷ್ಯನಕ್ಷತ್ರ, ಪುಣ್ಯಾಹ, ಸಪ್ತನದೀತೀರ್ಥ ಕಲಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶತೀರ್ಥ ಸಂಯೋಜನೆ ಮಾಡಲಾಗು ವುದು. ಪ್ರಾತಃಕಾಲ 9.35ರಿಂದ 9.50ರ ಮೀನಲಗ್ನ, ಬೆಳಗ್ಗೆ 11.30ರಿಂದ 12ಗಂಟೆಯ ವೃಷಭ ಲಗ್ನ, ಅಭಿಜಿನ್ ಮುಹೂರ್ತ, ವಿಧಿ ಮುಹೂರ್ತ ಹಾಗೂ ವೇದ ಮುಹೂರ್ತಗಳಲ್ಲಿ ಮಹೋದಯ ಪುಣ್ಯಸ್ನಾನ ನಡೆಯ ಲಿದೆ. ಯಾಗಶಾಲೆಗೆ ಹೊಂದಿಕೊಂಡಂತೆ ಸ್ಫಟಿಕ ಸರೋವರವನ್ನು ಗುರುತಿಸಿ ಮಹಾತ್ಮರ ಪುಣ್ಯ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕುಂಭಮೇಳದ ಮೂರು ದಿನಗಳ ಕಾಲ ನಡೆಯುವ ಹೋಮ – ಹವನಗಳ ಜವಾಬ್ದಾರಿಯನ್ನು ಕೈಲಾಸಾಶ್ರಮ ನೋಡಿ ಕೊಳ್ಳಲಿದ್ದು, ಮಹಾತ್ಮರ ಸ್ವಾಗತದ ಜವಾಬ್ದಾರಿಯನ್ನು ಸುತ್ತೂರು ಮಠ ನೋಡಿಕೊಳ್ಳಲಿದೆ. ಧರ್ಮಾ ಧಿಕಾರಿಗಳು, ಮಹಾತ್ಮರ ಗೌರವ, ಪುಣ್ಯ ಸ್ನಾನದ ಜವಾಬ್ದಾರಿಯನ್ನುಆದಿಚುಂಚನಗಿರಿ ಮಠ ನೋಡಿಕೊಳ್ಳಲಿದೆ ಎಂದರು. ಕಳೆದ ಬಾರಿಯ ಕುಂಭಮೇಳದಲ್ಲಿ ಒಂದು ಲಕ್ಷ ಜನರು ಪುಣ್ಯಸ್ನಾನ ಮಾಡಿರುವ ಅಂದಾಜಿದೆ. ಈ ಬಾರಿ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ನದಿಯ ಎರಡೂ ಕಡೆ ತಡೆಗೋಡೆ ನಿರ್ಮಾಣ ಹಾಗೂ ಸ್ನಾನಘಟ್ಟ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಆಗಾಗ್ಗೆ ಕ್ಷೇತ್ರಕ್ಕೆ ಭೇಟಿ ನೀಡಿ ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ. ತ್ರಿವೇಣಿ ಸಂಗಮದಲ್ಲಿಸ್ವತ್ಛತೆಗೆ ಆದ್ಯತೆ: ಅಶೋಕ್
ಮೈಸೂರು: ತಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆ.17 ರಿಂದ 3 ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸ್ವತ್ಛತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದ್ದು, ಸ್ವತ್ಛತಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ತಿ. ನರಸೀಪುರ ಪುರಸಭೆ ಮುಖ್ಯಾಧಿಕಾರಿ ಅಶೋಕ್ ತಿಳಿಸಿದ್ದಾರೆ. ಅಗಸ್ತೇಶ್ವರ ದೇವಾಲಯ ಮತ್ತು ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಸುತ್ತ ಮುತ್ತ ಗಿಡ ಗಂಟಿಗಳನ್ನು ಕಳೆದ ಹತ್ತು ದಿನಗಳಿಂದ ನಿರಂತರ ತೆರವು ಮಾಡಲಾಗುತ್ತಿದೆ. ಸೇತುವೆಗಳ ಎರಡೂ ಬದಿಗಳಲ್ಲಿ ಬೆಳೆದಿದ್ದ ಗಿಡಗಳನ್ನು ತೆರವು ಮಾಡಿ ಎಲ್ಲಾ ಕಡೆ ಸುಣ್ಣ ಬಣ್ಣ ತುಂಬಿಸಿ ಸ್ವತ್ಛತೆಗೆ
ಆದ್ಯತೆ ನೀಡಲಾಗುತ್ತಿದೆ ಎಂದರು. ನಗರ ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಮಲಿನ ಉಂಟಾಗದಂತೆ ಸೂಕ್ತ ಕ್ರಮ ವಹಿಸಲಾಗಿದೆ ಚರಂಡಿಗಳಲ್ಲಿರುವ ತ್ಯಾಜ್ಯ ಹೊರ ತೆಗೆದು ಸೊಳ್ಳೆಗಳು ಬಾರದಂತೆ ಎಲ್ಲಾ ಕಡೆ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ, ಭಕ್ತಾದಿಗಳು ತಿಂಡಿ ತಿನಿಸುಗಳು ತಿಂದ ಮೇಲೆ ಅವುಗಳನ್ನು
ಕಸದಬುಟ್ಟಿಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದರು. ಕುಂಭಮೇಳಕ್ಕೆ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಕುಂಭಮೇಳಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸುಮಾರು ಎಂಟು ನೀರಿನ ಟ್ಯಾಂಕ್‌ಗಳ ಸ್ವತ್ಛತೆ ಮಾಡಲಾಗಿದೆ. ಹಾಗೆಯೇ ಸುತ್ತ
ಮುತ್ತ ಭಕ್ತಾದಿಗಳು ಅನೈರ್ಮಲ್ಯ ಮಾಡಬಾರದೆಂದು ಅವರಿಗಾಗಿಯೇ ಶೌಚಾಲಯ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ. ನಗರದ ಚರಂಡಿಗಳಿಂದ ನದಿಗೆ ಸೇರುತ್ತಿದ್ದ ತ್ಯಾಜ್ಯ ನೀರನ್ನು ತಡೆದು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಯಾವ ಕಲುಷಿತ ನೀರು ನದಿಗೆ ಸೇರದ ಹಾಗೆ ಕ್ರಮ ಕೈಗೊಳ್ಳಲಾಗಿದೆ ಮತ್ತು ನದಿ ಒಳಗಡೆ ತೇಲುತ್ತಿದ್ದ ಬಟ್ಟೆಗಳು ಹಾಗೂ ಇತರೆ ಗಲೀಜುಗಳನ್ನು ನೀರಾವರಿ ಇಲಾಖೆಯವರ
ಸಹಾಯದಿಂದ ಅದನ್ನು ಹೊರ ತೆಗೆಯುವ ಕೆಲಸ ಮಾಡಲಾಗಿದೆ ಎಂದರು. ಬಜೆಟ್ ನಿಗದಿ ಇಲ್ಲ ಧರ್ಮದ ಕಾರ್ಯ ಆಗಿರುವುದರಿಂದ ಕುಂಭಮೇಳಕ್ಕೂ ಮುನ್ನ ಖರ್ಚುವೆಚ್ಚದ ಲೆಕ್ಕ ಹಾಕುವುದಿಲ್ಲ. ಕಾರ್ಯ ಮುಗಿದ ನಂತರ ಖರ್ಚಾದ ಹಣವನ್ನು ಸರ್ಕಾರ ಭರಿಸಲಿದೆ. ಕಳೆದ ಬಾರಿ ಕುಂಭಮೇಳಕ್ಕೆ ಸರ್ಕಾರ 3 ಕೋಟಿ ರೂ. ನೀಡಿದ್ದು, ಈ ಪೈಕಿ ಒಂದು ಕೋಟಿ ಮಾತ್ರ ಖರ್ಚಾ ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ತಿರುಮ ಕೂಡಲು ರಾಜ-ಮಹಾರಾಜರ ವೈಭವದ ಜಾಗ. ಕುಂಭಮೇಳದ ನಿಮಿತ್ತದಲ್ಲಿ ಅಲ್ಲಿ ಅಭಿವೃದ್ಧಿ ಕಾರ್ಯ ಗಳಾಗುವುದರಿಂದ ಅದೊಂದು ಪ್ರವಾಸಿ ತಾಣವಾಗಲಿದೆ ಎಂದು ಸ್ವಾಮೀಜಿ ತಿಳಿಸಿದರು.