ಯಾದಗಿರಿ: ಅಕ್ಟೋಬರ್ 5 ರಂದು ಮುಖ್ಯಮಂತ್ರಿ ಯಡಿಯೂರಪ್ಪ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ, ಅವರ ವಾಹನ ತಡೆದು ಕ್ಷೇತ್ರಕ್ಕಾದ ಅನ್ಯಾಯ ಕೇಳಲಾಗಿತ್ತು. ಆದರೇ ಸಮಸ್ಯೆ ಆಲಿಸಲು ಒಂದೇ ಒಂದು ಕ್ಷಣ ಮುಖ್ಯಮಂತ್ರಿಗಳ ವಾಹನ ನಿಂತಿರಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ.
ಸಿಎಂ ವಾಹನಕ್ಕೆ ಮುತ್ತಿಗೆ ಹಾಕಿದ್ದ ವಿಡಿಯೋ ತೋರಿಸಿ ಮಾತನಾಡಿದ ಅವರು, ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರರಂತಹ ಯುವ ಮುಖಂಡರನ್ನ ನೋಡಿ ಹೋರಾಟಕ್ಕೆ ಬಂದಿದ್ದೇನೆ. ಕಂದಕೂರ ಕುಟುಂಬದ ಜೊತೆ 40 ವರ್ಷಗಳಿಂದ ಒಡನಾಟವಿದ್ದು, ನೋವು –ನಲಿವುಗಳಲ್ಲೂ ನನ್ನ ಜೊತೆಗಿದ್ದಾರೆ.
ಶರಣಗೌಡರನ್ನು ಯುವಘಟಕದ ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶವಿತ್ತು. ಆದರೆ ಶರಣಗೌಡ ನಿಖಿಲ್ ರನ್ನುಅಧ್ಯಕ್ಷ ಮಾಡಿ, ಅವರು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಎಂ ವಾಹನ ತಡೆದ ಸಂದರ್ಭದಲ್ಲಿ ಕಾರ್ಯಕರ್ತರ ಕೈಯಲ್ಲಿ ಹಿಂಸಾತ್ಮಕ ವಸ್ತುಗಳು ಇರಲಿಲ್ಲ. ಹೀಗಿದ್ದರೂ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಸ್ವತಃ ಡಿಜಿ ಪಿಎಸ್ ಐ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಹೇಳಿದ್ದರು. ಆದರೆ ಕೆಲ ಗಂಟೆಗಳ ನಂತರ ಮನಸ್ಸು ಬದಲಿಸಿದರು. ಹಾಗಾದರೆ ಪೊಲೀಸರಿಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲವೆ ..?ಎಂದು ಪ್ರಶ್ನಸಿದ್ದಾರೆ
ಈ ಹಿಂದೇಯೂ ಯಾದಗಿರಿಗೆ ಬಂದಿದ್ದೇನೆ. ನನ್ನ ಹಿನ್ನೆಲೆ ಗೊತ್ತಿಲ್ಲದ ಅಧಿಕಾರಿ ಸೆಕ್ಷನ್ 144 ಜಾರಿ ಮಾಡಿದ್ದಾರೆ. ನಮ್ಮ ಹೋರಾಟ ಶಾಂತಿಯುತವಾಗಿ ಕಾನೂನು ಬದ್ಧವಾಗಿರುತ್ತದೆ ಎಂದು ಹೇಳಿದರು.
ಕಳೆದ ಅ. 5ರಂದು ಮುಖ್ಯಮಂತ್ರಿ ಯಡಿಯೂರಪ್ಪ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ, ಅವರ ವಾಹನ ತಡೆದು ಕಪ್ಪುಪಟ್ಟಿ ತೋರಿಸಿದ ಪ್ರಕಣದಲ್ಲಿ ಶರಣಗೌಡ ಕಂದಕೂರ ಸೇರಿದಂತೆ 20 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪಿಎಸ್‌ಐ, ಜೆಡಿಎಸ್ ಕಾರ್ಯಕರ್ತ ಮಾರ್ಕಂಡಪ್ಪ ಎನ್ನುವರನ್ನು ಕರೆತಂದು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ, ಆಕ್ರೋಶಗೊಂಡ ಕಾರ್ಯಕರ್ತರು ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲು ಪಟ್ಟು ಹಿಡಿದು ಪ್ರತಿಭಟನೆ ಆರಂಭಿಸಿದ್ದರು. ಇದೀಗ ಈ ಪ್ರತೀಭಟನೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಬೆಂಬಲ ಸೂಚಿಸಿದ್ದಾರೆ