Advertisement

ಭಾರತೀಯರಿಗೆ ಅಮೆರಿಕ ವೀಸಾ ಇನ್ನೂ ದುರ್ಲಭ

08:01 AM Dec 23, 2017 | Team Udayavani |

ವಾಷಿಂಗ್ಟನ್‌: ನಿರುದ್ಯೋಗ ಸಮಸ್ಯೆ ನಿವಾರಿಸಲು ಅಮೆರಿಕ ಎಚ್‌1ಬಿ ವೀಸಾ ನಿಯಮ ಬಿಗಿಗೊಳಿಸು ತ್ತಿರುವ  ಟ್ರಂಪ್‌ ಸರಕಾರ, ಇದೀಗ ಎಚ್‌ಆರ್‌170 ಎಂಬ ಮಸೂದೆ ರೂಪಿಸಿದೆ.  ಇದರ ಅಡಿಯಲ್ಲಿ ಉದ್ಯೋಗಿಗಳಿಗೆ ವೀಸಾ ಪಡೆಯಲು ಕಂಪೆನಿ ಗಳು ಅರ್ಧದಷ್ಟು ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ. ಈ ನಿಯಮ ಭಾರತೀಯ ಕಂಪೆನಿಗಳನ್ನು ಗಮನದಲ್ಲಿರಿಸಿ ಕೊಂಡೇ ರೂಪಿಸಲಾಗಿದೆ ಎಂದು ಉದ್ಯಮ ಸಂಘಟನೆ ನಾಸ್‌ಕಾಮ್‌ ಆರೋಪಿಸಿದೆ.

Advertisement

ಈ ನೀತಿಯಿಂದಾಗಿ ಕಂಪೆನಿಗಳ ಮಧ್ಯೆ ಅಂತರ ಸೃಷ್ಟಿ ಯಾಗಿದೆ. ವಿಭಿನ್ನ ಕಂಪೆನಿಗಳಿಗೆ ಒಂದೊಂದು ರೀತಿಯ ವೀಸಾ ಶುಲ್ಕವನ್ನು ವಿಧಿಸಲು ಅನುವು ಮಾಡ ಲಾಗಿದೆ. ಕಂಪೆನಿಗಳು ಅಮೆರಿಕನ್ನರ ನೇಮಕಾತಿಯಿಂದ ವಿನಾಯಿತಿ ಪಡೆಯಲು ವಾರ್ಷಿಕ 90 ಸಾವಿರ ಡಾಲರ್‌ ಕನಿಷ್ಠ ಸರಾಸರಿ ವೇತನವನ್ನು ಉದ್ಯೋಗಿಗಳಿಗೆ ಒದಗಿಸಬೇಕು. ಎಚ್‌1ಬಿ ವೀಸಾ ಪಡೆದವರು 60 ಸಾವಿರ ಡಾಲರ್‌ಗಿಂತ ಹೆಚ್ಚು ವೇತನ ಪಡೆದರೆ ಇದರಲ್ಲಿ ವಿನಾಯಿತಿ ಒದಗಿಸಲಾಗುತ್ತದೆ ಎಂಬ ನಿಯಮಗಳಿವೆ. ಇದರಿಂದಾಗಿ ಭಾರತೀಯ ಐಟಿ ಕಂಪೆನಿಗಳ ಮೇಲೆ ಹೊರೆಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next