Advertisement

ಕರೋಪಾಡಿಗೆ ಕರೆ ತಂದು ಕೊಲೆ ಆರೋಪಿಗಳ ತನಿಖೆ

02:40 PM May 01, 2017 | Team Udayavani |

ವಿಟ್ಲ: ಕರೋಪಾಡಿ ಉಪಾಧ್ಯಕ್ಷ ಎ.ಅಬ್ದುಲ್‌ ಜಲೀಲ್‌ ಅವರ ಕೊಲೆ ಪ್ರಕರಣದ 11 ಮಂದಿ ಆರೋಪಿಗಳನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಅವರಲ್ಲಿ ನಾಲ್ವರನ್ನು ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡ ಪೊಲೀಸರು ರವಿವಾರ ಮಧ್ಯಾಹ್ನ ಕನ್ಯಾನ ಹಾಗೂ ಕರೋಪಾಡಿ ಭಾಗಕ್ಕೆ ಕರೆತಂದು ಪ್ರಕರಣದ ತನಿಖೆ ನಡೆಸಿದರು. ಮುಖಕ್ಕೆ ಬಟ್ಟೆ ಹಾಕಿ ಕೊಲೆ ನಡೆದ ಹಾಗೂ ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ‌ತನಿಖೆ ನಡೆಸಲಾಯಿತು. ಆರೋಪಿಗಳನ್ನು ನೋಡಲು  ಹಲವರು ಜಮಾಯಿಸಿದ್ದರು. 

Advertisement

ಕೊಲೆಯ ಉದ್ದೇಶವೇ ಬೇರೆ, ಪ್ರಕರಣದಲ್ಲಿ ದಾಖಲಿಸಿಕೊಂಡದ್ದೇ ಬೇರೆ ಎಂಬ ಮಾತು ಕೇಳಿ ಬರುತ್ತಿದ್ದು ಸ್ಥಳೀಯರು ಈ ಬಗ್ಗೆ ಭಾರೀ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.  

ಜಿಲ್ಲಾ ಹೆಚ್ಚುವರಿ ಅಧೀಕ್ಷಕ ಡಾ.| ವೇದಮೂರ್ತಿ, ಬಂಟ್ವಾಳ ಸಹಾಯಕ ಅಧೀಕ್ಷಕ ರವೀಶ್‌ ಸಿಆರ್‌, ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ, ಪೊಲೀಸ್‌ ಠಾಣಾಧಿಕಾರಿಗಳಾದ ವಿಟ್ಲದ ನಾಗರಾಜ್‌, ಬಂಟ್ವಾಳ ನಗರದ ರಕ್ಷಿತ್‌ ಎ.ಕೆ., ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯ ಉಮೇಶ್‌ ಮತ್ತು ಪೊಲೀಸರು ತನಿಖೆ ಪಾಲ್ಗೊಂಡಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next