Advertisement

ಆನಂದ ಸಿಂಗ್‌-ಭೀಮಾ ನಾಯ್ಕ್‌ ನಡುವಿನ ಆಂತರಿಕ ತಿಕ್ಕಾಟ ಬಹಿರಂಗ

12:53 AM Jan 21, 2019 | Team Udayavani |

ಬಳ್ಳಾರಿ: ಆನಂದ ಸಿಂಗ್‌ ಮತ್ತು ಭೀಮಾ ನಾಯ್ಕ ನಡುವಿನ ತಿಕ್ಕಾಟ ಶನಿವಾರ ತಡರಾತ್ರಿ ನಡೆದ ಜಗಳದಿಂದ ಬಹಿರಂಗಗೊಂಡಿದೆ. ಜೆ.ಎನ್‌. ಗಣೇಶ್‌ ಮಧ್ಯಪ್ರವೇಶ ಪ್ರಕರಣಕ್ಕೆ ರಾಜಕೀಯ ಲೇಪ ನೀಡಿದೆ.

Advertisement

ಹಗರಿಬೊಮ್ಮನಹಳ್ಳಿ ವ್ಯಾಪ್ತಿಯ ಖಾಸಗಿ ಕೈಗಾರಿಕೆ ಯೊಂದರ ವಿಷಯಕ್ಕೆ ಸಂಬಂಧಿ ಸಿದಂತೆ ಭೀಮಾ ನಾಯ್ಕ ಮತ್ತು ಆನಂದ ಸಿಂಗ್‌ ನಡುವಿನ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಈ ಕಂಪೆನಿಯವರ ವಿದ್ಯುತ್‌ ಸಂಪರ್ಕವನ್ನು ಶಾಸಕ ಭೀಮಾ ನಾಯ್ಕ ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳ ಮೇಲೆ ಒತ್ತಡ ಹೇರಿ ಕಡಿತಗೊಳಿಸಿ ದ್ದರು. ಆದರೆ ಕಂಪೆನಿ ಪರವಾಗಿ ಶಾಸಕ ಸಿಂಗ್‌, ಭೀಮಾ ನಾಯ್ಕ ಮನವೊಲಿಸಲು ಯತ್ನಿಸಿದ್ದರು. ಹೊಂದಾಣಿಕೆ ಯಾಗದ ಕಾರಣ ತಿಕ್ಕಾಟ ಮುಂದುವರಿದಿತ್ತು.

ಕೆಲವೇ ದಿನಗಳಲ್ಲಿ ಆನಂದ ಸಿಂಗ್‌, ಹಗರಿಬೊಮ್ಮನ ಹಳ್ಳಿಯಲ್ಲಿ “ಆನಂದ ಸಿಂಗ್‌ ಅಭಿಮಾನಿಗಳ ಬಳಗ’ ಹುಟ್ಟು ಹಾಕಿದ್ದರು. ಅದರ ಕಚೇರಿಯನ್ನು ಸ್ವತಃ ಉದ್ಘಾಟಿಸಿದ್ದರು. ಭೀಮಾ ನಾಯ್ಕ ವಿರೋಧಕ್ಕೆ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಇಬ್ಬರ ನಡುವಿನ ಬಿರುಕು ಮತ್ತೂಂದು ಮಜಲು ಪಡೆದಿತ್ತು. ಅದರ ಮುಂದುವರಿದ ಭಾಗವೇ ಈಗಲ್ಟನ್‌ ರೆಸಾರ್ಟ್‌ನಲ್ಲಿ ಜಗಳ. ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನೆಪವೊಡ್ಡಿ ಮಧ್ಯಪ್ರವೇಶಿಸಿದ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌, ಆನಂದ ಸಿಂಗ್‌ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಭೀಮಾ ನಾಯ್ಕ ಬೆಂಬಲವಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಮಾಹಿತಿ ಬಹಿರಂಗಕ್ಕೆ ಗಣೇಶ್‌ ಅಸಮಾಧಾನ?
ಗಣೇಶ್‌ ಬಿಜೆಪಿ ಸೇರುವ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಸಿಂಗ್‌ ಮಾಹಿತಿ ನೀಡಿದ್ದರು. ಇದರಿಂದ ಗಣೇಶ್‌ ಮುನಿಸಿ ಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆನಂದ ಸಿಂಗ್‌-ಭೀಮಾ ನಾಯ್ಕ ನಡುವೆ ಜಗಳ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿ, “ಬಿಜೆಪಿ ಸೇರಬೇಕಿದ್ದ ನನ್ನ ಯೋಜನೆ ನಿನ್ನಿಂದ ವಿಫಲವಾಗಿದೆ. ಬಿಜೆಪಿ ಸೇರಿದ್ದರೆ ನಾನು ಸಚಿವ ನಾಗುತ್ತಿದ್ದೆ. ನಿನ್ನ ಮಾತು ಕೇಳಿ ಕೆಟ್ಟಿದ್ದೇನೆ’ ಎಂದು 
ಆರೋಪಿಸಿ ಆನಂದ ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next