Advertisement

ಗ್ರಾಮೀಣ ಜನರಲ್ಲಿ ಆರ್ಥಿಕ ಬೆಳವಣಿಗೆಗೆ ಕಾರಣವಾದ ಸಂಸ್ಥೆ

11:12 PM Feb 18, 2020 | Team Udayavani |

ಮಜೂರು – ಮಲ್ಲಾರು ಅವಳಿ ಗ್ರಾಮಗಳ ಕಾರ್ಯ ವ್ಯಾಪ್ತಿಯ ಹೈನುಗಾರರ ಬೆಳವಣಿಗೆಯ ಉದ್ದೇಶವನ್ನು ಇಟ್ಟುಕೊಂಡು ದ. ಕ. ಹಾಲು ಒಕ್ಕೂಟದ ಅಧೀನದಲ್ಲಿ 1989 ಮೇ 5ರಂದು ಮಜೂರು ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೊಂಡಿತು.

Advertisement

ಕಾಪು: ಮಜೂರು ಗ್ರಾಮದ ಹಿರಿಯರಾದ ಗುರುರಾಜ್‌ ಮಾರ್ಪಳ್ಳಿ ಅವರು ಪ್ರವರ್ತಕರನ್ನಾಗಿದ್ದುಕೊಂಡು, ಉದಯ ಶೆಟ್ಟಿ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ ಮಜೂರು ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಾರಂಭಗೊಂಡಿತು. ಗ್ರಾಮೀಣ ಭಾಗದ ಹೈನುಗಾರರು ಮತ್ತು ಕೃಷಿಕರನ್ನು ಸೇರಿಸಿಕೊಂಡು ಪ್ರಾರಂಭಿಸಿದ ಸೊಸೈಟಿಯು ಮುಂದೆ ಗ್ರಾಮೀಣ ಭಾಗದ ಹೈನುಗಾರರ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬೆಳವಣಿಗೆಯಲ್ಲೂ ಮುಖ್ಯ ಭೂಮಿಕೆಯನ್ನು ನಿರ್ವಹಿಸಿದೆ.

ಸೊಸೈಟಿ ಆರಂಭಕ್ಕೆ ಕಾರಣವೇನು ?
ಮಜೂರು ಶ್ರೀನಿವಾಸ್‌ ಭಟ್‌ ಅವರು ಮನೆಯಲ್ಲಿ ಹತ್ತಾರು ದನಗಳನ್ನು ಸಾಕುತ್ತಿದ್ದ ಕಾಲಘಟ್ಟದಲ್ಲಿ ಮನೆಯಲ್ಲಿ ದೊರಕುತ್ತಿದ್ದ ಲೀಟರ್‌ ಗಟ್ಟಲೆ ಹಾಲಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಗಳು ಇಲ್ಲದೆ ಇರುವುದನ್ನು ಮನಗಂಡು ಮಂಗಳೂರು ಕೆ.ಎಂ.ಎಫ್‌ ಡೈರಿಗೆ ಹೋಗಿ ವೈಯಕ್ತಿಕ ಡೈರಿ ಪ್ರಾರಂಭಿಸಲು ಬೇಡಿಕೆಯಿಟ್ಟಿದ್ದರು. ಆದರೆ ವೈಯಕ್ತಿಕ ಡೈರಿಗೆ ಅನುಮೋದನೆ ನೀಡಲು ಸಾಧ್ಯವಿಲ್ಲ. ಗ್ರಾಮಕ್ಕೆ ಬೇಕಾದರೆ ಡೈರಿ ನೀಡಬಹುದು ಎಂಬ ಉತ್ತರ ಬಂದ ಕಾರಣ, ಅವರು ಸಮಾನ ಮನಸ್ಕರಾದ ಗುರುರಾಜ್‌ ಮಾರ್ಪಳ್ಳಿ, ಉದಯ ಶೆಟ್ಟಿ, ಸುಬ್ರಹ್ಮಣ್ಯ ರಾವ್‌ ಮೊದಲಾದವರನ್ನು ಸೇರಿಸಿಕೊಂಡು ನಿಯೋಗ ತೆರಳಿ ಡೈರಿ ಪ್ರಾರಂಭಕ್ಕೆ ಪ್ರಸ್ತಾವನೆಯಿಟ್ಟಿದ್ದರು.

ಅವಳಿ ಗ್ರಾಮಗಳ ಗ್ರಾಮೀಣ ಜನರ ಪ್ರಸ್ತಾವನೆಯನ್ನು ಸ್ವೀಕರಿಸಿದ ಕೆ.ಎಂ.ಎಫ್‌ ಮಂಗಳೂರು ಡೈರಿಯ ಅಧಿಕಾರಿಗಳು ಗ್ರಾಮ ಸರ್ವೆ ನಡೆಸಿ, ಸ್ಥಳೀಯ ಹೈನುಗಾರರು, ಕೃಷಿಕರು ಮತ್ತು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಮಜೂರು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಾರಂಭಕ್ಕೆ ಮುನ್ನುಡಿ ಬರೆಯಲಾಯಿತು. ಈ ವೇಳೆ ಸೈಕಲ್‌ನಲ್ಲಿ ಹಾಲು ಸಂಗ್ರಹಿಸುತ್ತಿದ್ದ ವ್ಯಕ್ತಿಗಳು ಗ್ರಾಮೀಣ ಹೈನುಗಾರರ ಹಾಲಿಗೆ ಕನಿಷ್ಠ ಮೊತ್ತದ ದರವನ್ನು ನೀಡುತ್ತಿದ್ದುದೂ ಸೊಸೈಟಿ ಪ್ರಾರಂಭಕ್ಕೆ ಮತ್ತೂಂದು ಕಾರಣ. 99 ಸದಸ್ಯರೊಂದಿಗೆೆ ಆರಂಭಗೊಂಡ ಮಜೂರು ಸೊಸೈಟಿಯಲ್ಲಿ ಆರಂಭದ ದಿನಗಳಲ್ಲಿ 18 ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಲೀಟರ್‌ಗೆ 2 ರೂ. ಇದ್ದ ಹಾಲಿನ ದರ ಈಗ 32 ರೂ. ವರೆಗೆ ಏರಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಶ್ರೀನಿವಾಸ್‌ ರಾವ್‌ ಅವರು ಅತೀ ಹೆಚ್ಚು ಹಾಲು ಹಾಕಿ ಉತ್ತಮ ಹೆ„ನುಗಾರರಾಗಿ ಮೂಡಿ ಬಂದಿದ್ದು, ಪ್ರಸ್ತುತ ಕೃಷ್ಣ ಎಂ. ಶೆಟ್ಟಿ ಅವರು ಅತೀ ಹೆಚ್ಚು ಹಾಲನ್ನು ಸರಬರಾಜು ಮಾಡುತ್ತಿದ್ದಾರೆ. ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಪ್ರತೀ ವರ್ಷ ಪ್ರೋತ್ಸಾಹಕ ಬಹುಮಾನವನ್ನು ಸಹ ನೀಡಲಾಗುತ್ತದೆ. ಹಸಿರು ಹುಲ್ಲಿನ ತಾಕು ಖರೀದಿಗೆ ಅವಕಾಶವಿದೆ. ಪ್ರಥಮ ಚಿಕಿತ್ಸಾ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ರೈತರು ಅಥವಾ ರೈತರ ಹ‌ಸುಗಳು ಮೃತಪಟ್ಟಲ್ಲಿ ಸಂಘದ ಶಿಫಾರಸ್ಸಿನೊಂದಿಗೆ ಒಕ್ಕೂಟದ ಮುಖಾಂತರ ರೈತರ ಡೈರಿ ಕಲ್ಯಾಣ ಟ್ರಸ್ಟ್‌ ಪರಿಹಾರ ಧನ ಒದಗಿಸಲಾಗುತ್ತದೆ.

Advertisement

ಆರಂಭದ ದಿನಗಳಲ್ಲಿ ಮಜೂರು ಗ್ರಾಮ ಪಂಚಾಯತ್‌ನ ವಸತಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸೊಸೈಟಿಯು 10 ವರ್ಷಗಳ ಬಳಿಕ ಪಂಚಾಯತ್‌ ವತಿಯಿಂದ ಒದಗಿಸಲಾದ ಸ್ವಂತ ನಿವೇಶನದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಿಕೊಂಡು ಕಾರ್ಯಾಚರಿಸುತ್ತಿದೆ. ಅಲ್ಲಿ ಸಂಘದ ಹೊಸ ಕಟ್ಟಡದಲ್ಲೇ ದಶಮಾನೋತ್ಸವ, ವಿಂಶತಿ ವರ್ಷಾಚರಣೆ ಮತ್ತು ರಜತ ಮಹೋತ್ಸವ ವರ್ಷಾಚರಣೆಯೂ ನಡೆದಿದೆ.

ಸಂಘದ ಸದಸ್ಯರು ಮತ್ತು ಹೈನುಗಾರರ ಬೆಳವಣಿಗೆಯಲ್ಲಿ ನಿರಂತರ ಏಳಿಗೆ ಕಂಡು ಬರುತ್ತಿದ್ದು ಗ್ರಾಮೀಣ ಭಾಗದ ಜನರಲ್ಲಿ ಹೈನುಗಾರಿಕೆ ಮೂಲಕವಾಗಿ ಬದುಕು ಕಟ್ಟಿಕೊಳ್ಳಲು ಉತ್ತಮ ಅವಕಾಶ ದೊರಕಿದೆ. ಸಂಘವು ಸದಸ್ಯರ ಆರ್ಥಿಕ ಉದ್ದೇಶಕ್ಕಾಗಿ ಮಾತ್ರಾ ಶ್ರಮಿಸದೇ ಸಾಮಾಜಿಕ ಚಟುವಟಿಕೆಗಳತ್ತವೂ ಪ್ರಯತ್ನಿಸುತ್ತಿದೆ.
ಲೀಲಾಧರ ಶೆಟ್ಟಿ ಅಧ್ಯಕ್ಷರು

ಅಧ್ಯಕ್ಷರು
ಉದಯ ಶೆಟ್ಟಿ, ಪೂವಪ್ಪ ಮೊದಲಿಯಾರ್‌, ರಘುರಾಮ ರಾವ್‌, ಶ್ರೀನಿವಾಸ್‌ ರಾವ್‌, ಕೆ. ಲೀಲಾಧರ್‌ ಶೆಟ್ಟಿ (ಹಾಲಿ)
ಕಾರ್ಯದರ್ಶಿಗಳು
ಕಾರ್ಯದರ್ಶಿ : ಬೀರಪ್ಪ, ಗುರುರಾಜ್‌ (ಹಾಲಿ)

ಪ್ರಸ್ತುತ ಸ್ಥಿತಿಗತಿ
ಪ್ರಸ್ತುತ 235 ಸದಸ್ಯರಿದ್ದು 845 ಲೀಟರ್‌ ಹಾಲು ಸಂಗ್ರಹಣೆ ಆಗುತ್ತಿದೆ. ಪ್ರಸ್ತುತ ವಾರ್ಷಿಕ 1 ಕೋಟಿ 10ಲಕ್ಷ ರೂ.ಗಳ ವ್ಯವಹಾರ ಮಾಡಿ ವಾರ್ಷಿಕ 5 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘವು ಎ ಗ್ರೇಡ್‌ ದರ್ಜೆಯ ಸಂಘವಾಗಿ ಮೂಡಿ ಬಂದಿದೆ.

- ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next