ಚಿಕ್ಕಮಗಳೂರು: ಗುಂಡಿಮಯವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃಷಿ ಕಾರ್ಯ ಮಾಡಿ ಪ್ರತಿಭಟನಾಕಾರರು ವಿನೂತನ ಪ್ರತಿಭಟನೆ ಮಾಡಿದ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ರಸ್ತೆ ಗುಂಡಿಗೆ ಮೀನು ಬಿಟ್ಟು, ಮೀನು ಹಿಡಿದು ವ್ಯಾಪಾರಕ್ಕೆ ಪ್ರತಿಭಟನಕಾರರು ಮುಂದಾಗಿದ್ದು ಮಾತ್ರವಲ್ಲದೇ ರಸ್ತೆ ಮಧ್ಯದ ಗುಂಡಿಯಲ್ಲಿ ಭತ್ತದ ನಾಟಿ ಮಾಡಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಸಚೇತನ ತಂಡದಿಂದ ಮೂಡಿಗೆರೆ ಪಟ್ಟಣದಲ್ಲಿ ಈ ರೀತಿಯಾಗಿ ವಿನೂತನ ಪ್ರತಿಭಟನೆ ನಡೆದಿದ್ದು, ಗುಂಡಿ ಬಿದ್ದ ರಸ್ತೆಯಲ್ಲಿ ಸಿಲ್ವರ್ ಗಿಡಗಳನ್ನಿಟ್ಟು ಪ್ರತಿಭಟಿಸಿದರು.
ಮಂಗಳೂರು-ಕಡೂರು-ಮೂಡಿಗೆರೆ ಬೇಲೂರು-ಚಿಕ್ಕಮಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಂಡಿ ಬಿದ್ದಿರುವುದರಿಂದ ರಸ್ತೆಗಾಗಿ ಸಚೇತನ ಯುವಕ ಸಂಘದಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು.
ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮವಹಿಸದ ಹಿನ್ನೆಲೆ ಸಂಘದಿಂದ ಈ ರೀತಿಯಾಗಿ ವಿನೂತನ ಪ್ರತಿಭಟನೆ ನಡೆಯಿತು.