Advertisement

ಸ್ಪೇನ್‌ನಲ್ಲಿ ಒಂದು ಹಳ್ಳಿ ಮಾರಾಟಕ್ಕಿದೆ, ಖರೀದಿಸುತ್ತೀರಾ? ಇಲ್ಲಿದೆ ಮಾಹಿತಿ…. 

11:25 AM Nov 14, 2022 | Team Udayavani |

ಮ್ಯಾಡ್ರಿಡ್‌: ಒಂದು ಮನೆ ಖರೀದಿಸುವುದು ನಿಮ್ಮ ಉದ್ದೇಶವಾಗಿರಬಹುದು. ಆದರೆ ಒಂದಿಡೀ ಹಳ್ಳಿಯನ್ನೇ ಖರೀದಿಸುವ ಉದ್ದೇಶವಿದೆಯಾ?

Advertisement

ಸ್ಪೇನ್‌ ದೇಶದ ಝಮೊರ ಪ್ರಾಂತ್ಯದಲ್ಲಿ ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಹಳ್ಳಿ ಮಾರಾಟಕ್ಕಿದೆ. ಬೆಲೆ 2.16 ಕೋಟಿ ರೂ. ನಿಮಗೆ ಆಸಕ್ತಿಯಿದ್ದರೆ ಖರೀದಿ ಮಾಡಬಹುದು. ಹೆಚ್ಚಿನ ವಿವರಗಳು Idealista ಎಂಬ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.

ರೋನಿ ರಾಡ್ರೆಗೆಝ್ ಎಂಬ ಉದ್ಯಮಿ ಈ ಹಳ್ಳಿಯನ್ನು 2000ರ ಆಸುಪಾಸಿನಲ್ಲಿ ಖರೀದಿಸಿದರು. ಈ ಜಾಗವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಪರಿವರ್ತಿಸಬೇಕು ಎಂಬ ಉದ್ದೇಶ ಹೊಂದಿದ್ದರು. ಆದರೆ ಯೂರೋ ಕರೆನ್ಸಿಯಲ್ಲಿ ಕುಸಿತವಾಗಿದ್ದರಿಂದ ಅವರ ಕೈಯಲ್ಲಿ ನಿಭಾಯಿಸಲು ಆಗಲಿಲ್ಲ. ಕಡೆಗೆ ಮಾರಲು ಬಿಟ್ಟರು.

ಮೂಲತಃ ಈ ಹಳ್ಳಿಯಲ್ಲಿ 44 ಮನೆಗಳಿವೆ, ಒಂದು ಹೋಟೆಲ್‌, ಒಂದು ಚರ್ಚ್‌, ಒಂದು ಶಾಲೆಯೂ ಇದೆ. ಭದ್ರತಾ ಸಿಬ್ಬಂದಿಗೂ ನೆಲೆಯಿದೆ. ಇಲ್ಲದೇ ಇರುವುದು ಜನರು ಮಾತ್ರ!

ಸಂಪೂರ್ಣ ನಿರ್ವಸಿತವಾಗಿದೆ. 1950ರಲ್ಲಿ ಇಬೆರ್ಡೊಯೆರೊ ಎಂಬ ವಿದ್ಯುತ್‌ ಕಂಪನಿ ಇಲ್ಲಿ ಠಿಕಾಣಿ ಹೂಡಿತ್ತು. ಆಗ ಇಲ್ಲಿ ಜನರಿದ್ದರು. 1980ರಲ್ಲಿ ಈ ಕೆಲಸ ಮುಗಿದ ಮೇಲೆ ಜನ ಅಲ್ಲಿಂದ ಪೂರ್ಣವಾಗಿ ಹೊರಹೋದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next