Advertisement

ಬೆಂಬಲ ಬೆಲೆ ಪಡೆದ ರೈತರ ಪ್ರಮಾಣ ಅಗಾಧ ಹೆಚ್ಚಳ : ಕೇಂದ್ರ ಆಹಾರ ಸಚಿವಾಲಯ

07:26 PM Jul 21, 2021 | Team Udayavani |

ನವದೆಹಲಿ: ಗೋಧಿಗೆ ನೀಡಲಾಗುವ ಬೆಂಬಲ ಬೆಲೆಯ ಫ‌ಲಾನುಭವಿ ರೈತರ ಸಂಖ್ಯೆ ಶೇ. 240ರಷ್ಟು ಹೆಚ್ಚಾಗಿದೆ. ಇದೇ ವೇಳೆ, ಭತ್ತದ ಬೆಂಬಲ ಬೆಲೆ ಫ‌ಲಾನುಭವಿಗಳ ಸಂಖ್ಯೆ ಶೇ. 175ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ, ಲೋಕಸಭೆಗೆ ತಿಳಿಸಿದೆ.

Advertisement

ತನ್ನ ಹೊಸ ಕೃಷಿ ಕಾಯ್ದೆಗಳ ಜಾರಿಯ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಸಂಸ್ಕೃತಿಗೆ ಕೇಂದ್ರ ಸರ್ಕಾರ ತಿಲಾಂಜಲಿ ನೀಡಲಿದೆ ಎಂಬ ಊಹಾಪೋಹಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಲೋಕಸಭೆಗೆ, ಆಹಾರ ಸಚಿವಾಲಯ ಸಲ್ಲಿಸಿರುವ ಈ ಅಂಕಿ-ಅಂಶಗಳು ಮಹತ್ವ ಪಡೆದುಕೊಂಡಿವೆ.

2016-17ರ ಮುಂಗಾರು ಬೆಳೆ ಮಾರಾಟ ಅವಧಿಯಲ್ಲಿ 20.47 ಲಕ್ಷ ರೈತರು ಗೋಧಿ ಬೆಂಬಲ ಬೆಲೆಯ ಸೌಲಭ್ಯ ಪಡೆದಿದ್ದರು. 2020-21ನೇ ವರ್ಷದಲ್ಲಿ ಇವರ ಸಂಖ್ಯೆ 49.16ಕ್ಕೇರಿದೆ. ಇನ್ನು, 2015-16ನೇ ವರ್ಷದಲ್ಲಿ ಭತ್ತದ ಬೆಂಬಲೆ ಬೆಲೆ ಸೌಲಭ್ಯವನ್ನು ಶೇ. 73.1 ಲಕ್ಷ ಜನರು ಪಡೆದಿದ್ದರು. 2020-21ನೇ ವರ್ಷದಲ್ಲಿ ಒಟ್ಟಾರೆ. 1.28 ಕೋಟಿ ರೈತರು ಇದರ ಲಾಭ ಪಡೆದಿದ್ದಾರೆಂದು ಆಹಾರ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ :ಒಬಿಸಿ ಕೆನೆಪದರ ವರ್ಗದ ಆದಾಯ ಮಿತಿ ಹೆಚ್ಚಿಸಲು ಕೇಂದ್ರ ಚಿಂತನೆ

ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ ಪ್ರಗತಿಯಲ್ಲಿ
ಲೋಕಸಭೆಗೆ, ಆಹಾರ ಸಚಿವಾಲಯ ಸಲ್ಲಿಸಿರುವ ಮತ್ತೂಂದು ವರದಿಯಲ್ಲಿ ದೇಶದ ನಾನಾ ಭಾಗಗಳಲ್ಲಿ 230 ಕೋಲ್ಡ್‌ ಸ್ಟೋರೇಜ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಹೇಳಿದೆ. ನಾನಾ ರಾಜ್ಯಗಳಲ್ಲಿ ಇವುಗಳ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ. ಇದರ ಜೊತೆಗೆ, ಇಳುವರಿ ನಂತರ ಆಗುವ ಬೆಳೆ ನಷ್ಟವನ್ನು ತಡೆಯುವಂಥ 113 ವ್ಯವಸ್ಥೆಗಳ ಕಾಮಗಾರಿಗಳೂ ಪ್ರಗತಿಯಲ್ಲಿದ್ದು, ಇವೆಲ್ಲವುಗಳಿಂದ ದೇಶದ ಸುಮಾರು 3,37 ಕೋಟಿ ರೈತರಿಗೆ ಉಪಯೋಗವಾಗಲಿವೆ ಎಂದು ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next