Advertisement

ಪೆಟ್ರೋಲ್‌ಗಿಂತ ಎಲೆಕ್ಟ್ರಿಕ್‌ ವಾಹನ ಉತ್ತಮ

11:47 PM Apr 25, 2021 | Team Udayavani |

ಹೆಚ್ಚುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಎಲೆಕ್ಟ್ರಾನಿಕ್‌ ವಾಹನಗಳತ್ತ ಜನರು ಚಿತ್ತ ಹರಿಸುವಂತೆ ಮಾಡಿದೆ. ಇದು ಈಗಾಗಲೇ ಕೆಲವೊಂದು ಎಲೆಕ್ಟ್ರಾನಿಕ್‌ ವಾಹನ ತಯಾರಿಕ ಕಂಪೆನಿಗಳಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಈಗ ಬಹುತೇಕ ಎಲ್ಲ ಪ್ರಮುಖ ವಾಹನ ತಯಾರಿಕ ಕಂಪೆನಿಗಳು ಇವಿ ವಿಭಾಗದಲ್ಲಿ ಗುರುತಿಸಿ ಕೊಳ್ಳಲು ಇದೇ ಕಾರಣ. ಕಂಪೆನಿ ಗಳು ಆಕರ್ಷಕ ಕೊಡುಗೆಗಳನ್ನು ನೀಡು ತ್ತಿದ್ದು, ಸರಕಾರವು ಈ ವಾಹನ ಗಳಿಗೆ ಸಬ್ಸಿಡಿಯನ್ನು ನೀಡು ತ್ತಿದೆ. ಇದರಿಂದ ಈ ಒಂದು ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಿನ ಬೇಡಿಕೆಯನ್ನು ಪಡೆದಿವೆ.

Advertisement

ಯಾವುದು ಉತ್ತಮ?
ಈ ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಗಗನಕ್ಕೇರು ತ್ತಿದೆ. ಹೀಗಾಗಿ ಸಹಜವಾಗಿ ಎಲೆಕ್ಟ್ರಿಕ್‌ ವಾಹನ ಗಳು ಉತ್ತಮ ಆಯ್ಕೆಯಾ ಗಿದೆ. ಒಂದು ಲೀಟರ್‌ ಪೆಟ್ರೋಲ್‌ನಲ್ಲಿ ಚಲಿಸುವ ಕಾರು ಎಲೆಕ್ಟ್ರಾನಿಕ್‌ ಮಾದರಿಯ ಕಾರಿನಲ್ಲಿ 20 ರೂ. ವೆಚ್ಚದಲ್ಲಿ ಚಲಿಸುತ್ತದೆ. ಉದಾ ಹರಣೆಗೆ ಪೆಟ್ರೋಲ್‌ಗೆ ಪ್ರತೀ ತಿಂಗಳು 3,000 ರೂ. ವೆಚ್ಚವಾಗುವು ದಿದ್ದರೆ ಎಲೆಕ್ಟ್ರಾನಿಕ್‌ ವಾಹನಕ್ಕೆ ಕೇವಲ 600 ರೂ. ವೆಚ್ಚವಾಗಲಿದೆ. ಇಲ್ಲಿ 2,400 ರೂ. ಉಳಿತಾಯ.

ಕಾರಿನ ಲೆಕ್ಕಾಚಾರ
ನೀವು ಪೆಟ್ರೋಲ್‌ ಕಾರಿನಲ್ಲಿ ಪ್ರತೀ ದಿನ 100 ರೂ.ಗಳನ್ನು ಖರ್ಚು ಮಾಡುತ್ತಿದ್ದೀರಿ ಎಂದು ಭಾವಿಸೋಣ. ಈ ಲೆಕ್ಕಾಚಾರದಲ್ಲಿ ನೀವು ತಿಂಗಳಿಗೆ 3,000 ರೂ. ಖರ್ಚು ಮಾಡುತ್ತೀರಿ. ಈ ರೀತಿಯಾಗಿ ವರ್ಷಕ್ಕೆ 12 ತಿಂಗಳು x 3,000 ರೂ. = 36,000 ರೂ. ಕಾರಿನ ಬೆಲೆ 1 ಲಕ್ಷ ರೂ. ಎಂದಿದ್ದರೆ ನೀವು 3.2 ವರ್ಷಗಳಲ್ಲಿ ನೀವು ವಾಹನಕ್ಕೆ ಪಾವತಿಸಿದ 1 ಲಕ್ಷ ರೂ.ಗಳನ್ನು 38 ತಿಂಗಳುಗಳಲ್ಲಿ ಹಿಂಪಡೆಯುತ್ತೀರಿ.

ಮೈಲೇಜ್‌ ಇದೆ
ಹೆಚ್ಚಿನ ಜನರು ಎಲೆಕ್ಟ್ರಿಕ್‌ ವಾಹನದ ಮೈಲೇಜ್‌ ಕುರಿತು ಪ್ರಶ್ನೆಗಳನ್ನು ಹೊಂದಿದ್ದಾರೆ. ಹೆಚ್ಚಿನ ಕಂಪೆನಿಗಳು ಈಗ ದ್ವಿಚಕ್ರ ಇವಿಗಳ ಮೈಲೇಜ್‌ ಅನ್ನು 80ರಿಂದ 100 ಕಿ.ಮೀ.ಗೆ ಹೆಚ್ಚಿಸಿವೆ. ಕಾರಿನಲ್ಲೂ 300ರಿಂದ 500 ಕಿ.ಮೀ. ಪ್ರಯಾ ಣಿಸಬಹುದಾಗಿದೆ. ಒಮ್ಮೆ ಚಾರ್ಜ್‌ ಮಾಡಿದರೆ ಕ್ರಮಿಸುವ ದೂರ ಇದಾಗಿದೆ.

ಒಂದು ವರ್ಷದಲ್ಲಿ ಎಷ್ಟು ಉಳಿತಾಯ ?
ಇನ್ನು ಸರಾಸರಿ ಲೆಕ್ಕಾಚಾರ ಮಾಡುವು ದಾದರೆ ನೀವು 1 ಲಕ್ಷ ರೂ. ವೆಚ್ಚದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನವನ್ನು ಖರೀದಿಸಿದ್ದೀರಿ ಎಂದಿಟ್ಟು ಕೊಳ್ಳೋಣ. ನಿಮ್ಮ ನಗರದಲ್ಲಿ 1 ಯುನಿಟ್‌ ವಿದ್ಯುತ್‌ ವೆಚ್ಚ 8 ರೂ. ಎಂದಿರಲಿ. ನಿಮ್ಮ ವಾಹನದ ಬ್ಯಾಟರಿ ಚಾರ್ಜ್‌ ಆಗಲು 2 ಯುನಿಟ್‌ ವಿದ್ಯುತ್‌ ಬೇಕು. ಎರಡು ಯುನಿಟ್‌ ವಿದ್ಯುತ್‌ಗೆ 16 ರೂ. ವೆಚ್ಚವಾಗುತ್ತದೆ. ಈ ವೆಚ್ಚದಲ್ಲಿ ನೀವು 50ರಿಂದ 70 ಕಿ.ಮೀ. ಸಂಚರಿಸಬಹುದಾಗಿದೆ. 1 ದಿನದಲ್ಲಿ 16 ರೂ., ಆದ್ದರಿಂದ ತಿಂಗಳಿಗೆ 16 ರೂ. x 30 ದಿನಗಳು = 480 ರೂ. ವೆಚ್ಚವಾಗಲಿದೆ. ರೌಂಡ್‌ ಫಿಗರ್‌ನಲ್ಲಿ 480 ರೂ. ಬದಲು 500 ರೂ. ಎಂದಿರಲಿ. ಇದರ ಅನ್ವಯ ಒಂದು ವರ್ಷದಲ್ಲಿ 12 ತಿಂಗಳು x 500 ರೂ. = 6,000 ರೂ. ಖರ್ಚಾಗುತ್ತದೆ.

Advertisement

ಯಾವ ಇವಿ ಉತ್ತಮವಾಗಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 50,000 ರೂ. ಗಳಿಂದ 1.50 ಲಕ್ಷ ರೂ. ಗಳವರೆಗೆ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಿವೆ. ಎಲ್ಲ ವಿಭಿನ್ನ ಶ್ರೇಣಿಗಳಲ್ಲಿ ಬರುತ್ತವೆ. ಅಂತಹ ಪರಿಸ್ಥಿತಿ ಯಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ಅಥವಾ ನಾಲ್ಕು ಚಕ್ರಗಳನ್ನು ಖರೀದಿಸುವ ಮೊದಲು, ನಿಮ್ಮ ಆವಶ್ಯಕತೆ ಏನು ಎಂಬುದನ್ನು ನೀವು ನೆನಪಿನಲ್ಲಿಟ್ಟು ಕೊಳ್ಳ ಬೇಕು. ಅಂದರೆ ಒಂದುದಿನದಲ್ಲಿ ನೀವು ಎಷ್ಟು ದೂರ ಪ್ರಯಾಣಿಸು ತ್ತೀರಿ. ನೀವು ಪ್ರತೀ ದಿನ 30ರಿಂದ 40 ಕಿ.ಮೀ. ವರೆಗೆ ಪ್ರಯಾಣಿಸು ವುದಾದರೆ ಅಗ್ಗದ ವಾಹನವನ್ನು ಖರೀದಿಸಬಹುದು.

ಬ್ಯಾಟರಿ ವ್ಯಾಲಿಡಿಟಿ
ಕಂಪೆನಿಗಳು ಇವಿ ಬ್ಯಾಟರಿಗಳಿಗೆ 50 ಸಾವಿರದಿಂದ 1 ಲಕ್ಷ ಕಿ.ಮೀ. ಅಥವಾ 5 ವರ್ಷಗಳ ವಾರಂಟಿ ನೀಡುತ್ತವೆ. ವರ್ಷವಿಡೀ ಅದರ ನಿರ್ವಹಣೆಗೆ ಯಾವುದೇ ವೆಚ್ಚವಾಗುವುದಿಲ್ಲ. ಎಲೆಕ್ಟ್ರಿಕ್‌ ವಾಹನದಲ್ಲಿ ಬ್ಯಾಟರಿ ಮತ್ತು ಮೋಟರ್‌ ಎರಡು ಪ್ರಮುಖ ಭಾಗಗಳಾಗಿವೆ. ಬ್ಯಾಟರಿಗೆ ಧೂಳು ಮತ್ತು ತೇವಾಂಶಕ್ಕೂ ಯಾವುದೇ ಸಂಬಂಧವಿಲ್ಲ. ಇವು ಕೂಡ ಜಲನಿರೋಧಕ. ಅಂದರೆ ಮಳೆಗಾಲದ ದಿನಗಳಲ್ಲಿಯೂ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಕಂಪೆನಿಯು ಬ್ಯಾಟರಿಗೆ 5 ವರ್ಷ ಅಥವಾ 1 ಲಕ್ಷ ಕಿ.ಮೀ. ವರೆಗೆ ಖಾತರಿ ನೀಡುತ್ತದೆ. ಅದೇ ಸಮಯದಲ್ಲಿ ಅದರಲ್ಲಿ ಯಾವುದೇ ನಿರ್ವಹಣೆ ವೆಚ್ಚ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next