Advertisement

ಮಂಡ್ಯ; ಆಡುವಾಗ ಬಿದ್ದು ಮೃತಪಟ್ಟ ಎಂಟು ವರ್ಷದ ಬಾಲಕ

04:12 PM Oct 02, 2022 | Team Udayavani |

ಮಂಡ್ಯ: ಆಟ ಆಡುವಾಗ ಆಯತಪ್ಪಿ ಬಿದ್ದು ಎಂಟು ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ನೆಡೆದಿದೆ.

Advertisement

ಕೃಷ್ಣರಾಜಪೇಟೆ ತಾಲ್ಲೂಕಿನ ಐನೋರಹಳ್ಳಿ ಗ್ರಾಮದ ಪುನೀತಾ – ಚಂದ್ರಹಾಸ ದಂಪತಿಗಳ ಪುತ್ರ ಚಿರಂತ್ ಗೌಡ ಮೃತಪಟ್ಟ ದುರ್ದೈವಿ.

ಕಿಕ್ಕೇರಿಯ ಕೇಂಬ್ರಿಡ್ಜ್ ಪಬ್ಲೀಕ್ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ 8 ವರ್ಷದ ಚಿರಂತ್ ಗೌಡ ಇಂದು ಮಧ್ಯಾಹ್ನ ಆಟ ಆಡುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ:ಉದ್ಧವ್ ಠಾಕ್ರೆಗೆ ದೊಡ್ಡ ಹೊಡೆತ; ಏಕನಾಥ್ ಶಿಂಧೆ ಬಣ ಸೇರಿದ 3000 ಶಿವಸೇನೆ ಸದಸ್ಯರು

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೇಂಬ್ರಿಡ್ಜ್ ಪಬ್ಲಿಕ್‌ ಶಾಲೆಯ ಸಂಸ್ಥಾಪಕರು ಶಾಲಾ ಮಕ್ಕಳು ಐನೋರಹಳ್ಳಿ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next