Advertisement

ಶಿವ ಸೃಷ್ಟಿ, ಸ್ಥಿತಿ, ಲಯಗಳ ಕಾರಣಿಕರ್ತ

03:03 PM Mar 11, 2021 | Team Udayavani |

ಭಾರತೀಯರು ಆಚರಿಸುವ ವಿಶೇಷ ಹಬ್ಬಗಳ ಸಾಲಿನಲ್ಲಿ ಶಿವರಾತ್ರಿಯೂ ಒಂದು. ಇಡೀ ಜಗತ್ತೇ ಸೃಷ್ಟಿಯಾಗಿರುವುದು ಶಿವನಿಂದ ಎಂಬ ಪ್ರತೀತಿ ಇದೆ.

Advertisement

ಶಿವ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಪ್ರತೀ ವರ್ಷ ಶಿವರಾತ್ರಿಗಾಗಿ ಜನರು ಕಾಯುತ್ತಾರೆ. ಶಿವರಾತ್ರಿ ಎಂದರೆ ತತ್‌ಕ್ಷಣ ನೆನಪಾಗುವುದು ಜಾಗರಣೆ. ಒಂದು ಇಡೀ ದಿನ ರಾತ್ರಿ ಶಿವನನ್ನು ಭಕ್ತಿಪೂರ್ವಕವಾಗಿ ಪೂಜಿಸಲಾಗುತ್ತದೆ.

ಸೃಷ್ಟಿ ಸ್ಥಿತಿ ಲಯಗಳ ಕಾರಣಿಕರ್ತ ಶಿವನನ್ನು ಹಾಡಿ ಕೊಂಡಾಡಲಾಗುತ್ತದೆ. ಈ ಜಾಗರಣೆಯನ್ನು ಹಲವು ಕಡೆಗಳಲ್ಲಿ ಒಂದು ಆಚರಣೆಯಾಗಿ ಮಾಡಲಾಗುತ್ತದೆ. ಇದರಲ್ಲಿ ಉತ್ತರ ಭಾರತದ ಆಚರಣೆ ಮತ್ತು ದಕ್ಷಿಣ ಆಚರಣೆಗಳು ಸಂಪೂರ್ಣ ಭಿನ್ನವಾಗಿವೆ.

ಭಾರತದ ಸೇರಿದಂತೆ ವಿಶ್ವದ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ಭಾರತದಲ್ಲಿ ಬಹಳ ಮುಖ್ಯವಾಗಿ ಕಾಶಿಯಲ್ಲಿ ವಿಶ್ವನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಪಶ್ಚಿಮದಲ್ಲಿ ಸೋಮನಾಥ, ಉಜೈನಲ್ಲಿ ಮಹಾಕಾಳೆಶ್ವರ, ಹಿಮಾಲಯದಲ್ಲಿ ಕೇದಾರನಾಥ, ಹಿಸಾರದಲ್ಲಿ ವೈದ್ಯನಾಥ, ಮಧ್ಯಪ್ರದೇಶದಲ್ಲಿ ಓಂಕಾರನಾಥ, ದ್ವಾರಕಾದಲ್ಲಿ ಭುವನೆಶ್ವರ ಮುಂತಾದವು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರರಾಷ್ಟ್ರಗಳ ಸಂಸ್ಕೃತಿಗಳಲ್ಲಿಯೂ ಸಹ ಶಿವನನ್ನು ಕಾಣಬಹುದಾಗಿದೆ.

ಮಹಾಶಿವರಾತ್ರಿಯ ಮಧ್ಯರಾತ್ರಿಯಂದು ಮಹಾದೇವನು ಲಿಂಗ ಸ್ವರೂಪವನ್ನು ಧರಿಸುತ್ತಾನೆ. ಫಲ್ಗಣ ಮಾಸದ 14 ನೇ ಗಾಢ ಮಾಸದಂದು ಇದು ಸಂಭವಿಸುತ್ತದೆ. ಶಿವನು ಪ್ರಥಮ ಬಾರಿ ಲಿಂಗ ರೂಪವನ್ನು ಧರಿಸುವುದು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ಆ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಲಾಗುತ್ತದೆ.

Advertisement

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ.

ಶಿವರಾತ್ರಿಯಲ್ಲಿ ಉಪವಾಸದ ಅರ್ಥ ಉಪ’ ಎಂದರೆ ಸಮೀಪ’ ವಾಸ ಎಂದರೆ ಇರುವುದು’. ವಾಸ್ತವಿಕವಾಗಿ ಪರಮಾತ್ಮನ ಜತೆ ಕೈ ಜೋಡಿಸುವುದೇ ನಿಜವಾದ ಉಪವಾಸವಾಗಿದೆ.


 ಯು.ಎಚ್. ಎಂ. ಗಾಯತ್ರಿ, ಬಳ್ಳಾರಿ 

Advertisement

Udayavani is now on Telegram. Click here to join our channel and stay updated with the latest news.

Next