Advertisement

ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ

05:03 AM Jun 07, 2020 | Lakshmi GovindaRaj |

ಯಳಂದೂರು: ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಗುರುತಿಸಿ ವ್ಯಾಪಾರ ವಹಿವಾಟು ನಡೆಸಲು ಕ್ರಮ ವಹಿಸಲಾಗುವುದು ಎಂದು ಉಪವಿಭಾಗಾಧಿ  ಕಾರಿ ನಿಖೀತಾ ಹೇಳಿದರು. ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ  ನಡೆದ ರಸ್ತೆಬದಿ ವ್ಯಾಪಾರ, ಆಟೋ, ಕಾರು ಚಾಲಕರ ಸಂಘದ ಸದಸ್ಯರ ಸಭೆ ಬಳಿಕ, ಪಟ್ಟಣದ ಆಟೋ, ಕಾರು, ಬಸ್‌ ನಿಲ್ದಾಣಗಳಿಗೆ ತೆರಳಿ ಸಮಸ್ಯೆ ಆಲಿಸಿದರು.

Advertisement

ಪಟ್ಟಣದಲ್ಲಿ ಈಗಿರುವ ಸ್ಥಳದಲ್ಲೇ ಕಾರು ನಿಲ್ದಾಣ, ಆಟೋ ನಿಲ್ದಾಣಕ್ಕೆ  ಹಳೆ ಕುಡಿಯುವ ನೀರಿನ ಟ್ಯಾಂಕ್‌ ಬಳಿಯೇ ಸೂಕ್ತವಾಗಿದೆ. ಜತೆಗೆ ಸಿಡಿಎಸ್‌ ಸಮುದಾಯ ಭವ ನದ ಆವರಣ ಹಾಗೂ ದಿವಾನ್‌ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಬಳಿ ತಿಂಡಿ ತಿನಿಸು ತಳ್ಳುಗಾಡಿಗಳು ಹಾಗೂ ಹಣ್ಣು ಮಾರಾಟಕ್ಕೆ ಅವಕಾಶ  ನೀಡಬೇಕು ಎಂದು ಮಾಜಿ ಶಾಸಕ ಬಾಲರಾಜು ಸೇರಿದಂತೆ ಪಪಂ ಸದಸ್ಯರು ಆಗ್ರಹಿಸಿದರು.

ಪಟ್ಟಣದ ವಿವಿಧೆಡೆ ತೆರಳಿದ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲಿಸಿ ಮಾತನಾಡಿ, ತರಕಾರಿ ಮಾರಾಟಕ್ಕೆ ಸಂತೆಮೈದಾನದಲ್ಲೇ ಅವಕಾಶ  ಮಾಡಿಕೊಡಲಾಗು ವುದು. ಇದಕ್ಕೆ 2 ವಾರಗಳ ಗಡುವು ನೀಡಲಾಗಿದೆ. ಹಾಗಾಗಿ ಈಗಿರುವ ಸ್ಥಳದಲ್ಲೇ ಮಾರಾಟಗಾರರು ತಮ್ಮ ವಹಿವಾಟು ನಡೆಸಲು ಸೂಚಿಸಿದರು. ಚೆಲುವ ಚಾಮರಾಜನಗರ ಅಭಿಯಾನದಲ್ಲಿ ಸಾರ್ವಜನಿಕರು ಪಂಚಾಯಿತಿಯೊಂದಿಗೆ ಸಹಕರಿಸಬೇಕು ಎಂದು  ಮನವಿ ಮಾಡಿದರು.

ಈ ವೇಳೆ ಜಿಪಂ ಸದಸ್ಯ ಯೋಗೇಶ್‌ ಪಪಂ ಸದಸ್ಯ ರಾದ ಮಹೇಶ್‌, ರಂಗನಾಥ, ಮಹದೇವನಾಯಕ, ಮಂಜು, ಪುಷ್ಪಾವತಿ, ಸುಶೀಲಾ, ರವಿ, ತಹಶೀಲ್ದಾರ್‌  ಮಹೇಶ್‌,  ಮುಖ್ಯಾಧಿಕಾರಿ ನಾಗರತ್ನ, ಆರೋಗ್ಯಾಧಿಕಾರಿ ಮಹೇಶ್‌ಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next