Advertisement

ಲಾಡ್ಜ್ನಲ್ಲಿ ಅನ್ಯಕೋಮಿನ ಜೋಡಿ: ಪೊಲೀಸರ ವಶಕ್ಕೆ

10:50 PM Oct 20, 2019 | Team Udayavani |

ಪುತ್ತೂರು: ನಗರದ ಲಾಡ್ಜ್ವೊಂದರಲ್ಲಿ ಅನ್ಯಕೋಮಿನ ಯುವ ಜೋಡಿ ಇರುವ ವಿಚಾರ ತಿಳಿದು ಬಜರಂಗದಳದ ಮುಖಂಡರು ತೆರಳಿ ವಿಚಾರಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಜೋಡಿಯನ್ನು ಠಾಣೆಗೆ ಕರೆದೊಯ್ದ ಘಟನೆ ಭಾನುವಾರ ನಡೆದಿದೆ. ಮೂಲತಃ ರಾಜಸ್ಥಾನದ ಯುವತಿ, ಪ್ರಸ್ತುತ ಸಾಮೆತ್ತಡ್ಕದಲ್ಲಿ ವಾಸ್ತವ್ಯವಿದ್ದಾಳೆ. ಯುವಕ ಮುಂಬೈನವನಾಗಿದ್ದಾನೆ.

Advertisement

ಯುವಕ ಹಾಗೂ ಯುವತಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯಗೊಂಡು, ಅ.19ರಂದು ಯುವಕ ಪುತ್ತೂರಿಗೆ ಆಗಮಿಸಿ, ಪುತ್ತೂರಿನ ಲಾಡ್ಜ್ನಲ್ಲಿ ರೂಂ ಮಾಡಿದ್ದ. ಭಾನುವಾರ ಮಧ್ಯಾಹ್ನ ಯುವತಿ ಅಲ್ಲಿಗೆ ಹೋಗಿ ರುವುದನ್ನು ಸಂಘಟನೆಯ ಮುಖಂಡರು ಪತ್ತೆ ಹಚ್ಚಿದರು. ಬಜರಂಗದಳದ ಮುಖಂಡರು ತೆರಳಿ ವಿಚಾರಿಸುತ್ತಿದ್ದ ವೇಳೆ, ಮಾಹಿತಿ ಪಡೆದ ಪೊಲೀಸರು, ಜೋಡಿಯನ್ನು ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next